ಬನಾರಸ್‌ (ಉತ್ತರ ಪ್ರದೇಶ):ವಿವಾದಿತ ಜ್ಞಾನವಾಪಿ ಮಸೀದಿಯೊಳಗೆ ಕೋರ್ಟ್‌ ಆದೇಶದಂತೆ ವಿಡಿಯೋ ಚಿತ್ರೀಕರಣ ಕಾರ್ಯ ಶೇ.65ರಷ್ಟು ಮುಗಿದಿದ್ದು, ಇದರ ವರದಿಯನ್ನು ಕೋರ್ಟ್‌ಗೆ ಅಧಿಕಾರಿಗಳು ನಾಳೆ (ಮಂಗಳವಾರ )ಸಲ್ಲಿಸಲಿದ್ದಾರೆ.
ಸಮೀಕ್ಷೆ ಸಮಯದಲ್ಲಿ ಮಸೀದಿಯಲ್ಲಿ ಶಿವಲಿಂಗ ಹಾಗೂ ನಂದಿ ಕಂಡುಬಂದಿರುವುದಾಗಿ ವರದಿಯಾಗಿದೆ. ನಂದಿಯ ಎದುರಿನಲ್ಲಿರುವ ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪರ ವಕೀಲರು ಮಾಹಿತಿ ನೀಡಿರುವುದಾಗಿ ‘ಇಂಡಿಯಾ ಟುಡೇ’ ಪತ್ರಿಕೆ ವರದಿ ಮಾಡಿದೆ.
ಮಸೀದಿಯು ಈ ಮುಂಚೆ ಮಂದಿರವಾಗಿತ್ತು ಎಂಬ ಬಗ್ಗೆ ಇದು ಇನ್ನಷ್ಟು ಪುಷ್ಟಿ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಮೊಘಲ್‌ ದೊರೆ ಔರಂಗಜೇಬ್‌ ಕಾಶಿ ವಿಶ್ವನಾಥ ಮಂದಿರದ ಭಾಗವೊಂದನ್ನು ಕೆಡವಿ ಇದನ್ನು ನಿರ್ಮಿಸಿದ್ದ ಎಂಬ ವಾದವಿದೆ. ಇದೀಗ ಇಲ್ಲಿ ಸಿಗುತ್ತಿರುವ ಕುರುಹುಗಳು ಈ ವಾದವನ್ನು ಪುಷ್ಟೀಕರಿಸುತ್ತಿವೆ ಎನ್ನಲಾಗುತ್ತಿದೆ.
ಕೋರ್ಟ್‌ ಆದೇಶದ ಮೇರೆಗೆ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ಕೋರ್ಟ್ ಸೂಚನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಶೇ.65ರಷ್ಟು ಸಮೀಕ್ಷೆ ಕಾರ್ಯ ಮುಗಿದಿದ್ದು, ಮಂಗಳವಾರ ಈ ಕುರಿತು ವರದಿ ಸಲ್ಲಿಸುತ್ತಿದ್ದೇವೆ ಎಂದು ವಕೀಲರು ಹೇಳಿದ್ದಾರೆ.
BREAKING: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಕೋರ್ಟ್​ ಗ್ರೀನ್​ ಸಿಗ್ನಲ್​: ಕಮಿಷನರ್​ ಬದಲಾಯಿಸಲಾಗದು ಎಂದ ನ್ಯಾಯಾಧೀಶರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − two =
Remember me
