ಶ್ರೀನಗರ:ನನ್ನ ಮನೆಯಲ್ಲಿಯೇ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ಅದು ನನಗೆ ಸ್ವಲ್ಪವೂ ಇಷ್ಟವಿಲ್ಲ. ಇದನ್ನು ನಾನು ವಿರೋಧಿಸಿದ್ದೆ. ಅದಕ್ಕಾಗಿ ಇದೀಗ ಮಗಳಿಂದಲೇ ನನಗೆ ಜೀವಭಯ ಉಂಟಾಗಿದೆ. ಆಕೆಯಿಂದಲೇ ಜೀವ ಬೆದರಿಕೆ ಬರುತ್ತಿದೆ ಎಂದು ಜವಾಹರಲಾಲ್​ ನೆಹರು ವಿಶ್ವವಿದ್ಯಾಲಯದ (ಜೆಎನ್​ಯು) ಮಾಜಿ ವಿದ್ಯಾರ್ಥಿನಿಯೊಬ್ಬಳ ತಂದೆ ಆತಂಕವನ್ನು ತೋಡಿಕೊಂಡಿದ್ದಾರೆ.
ಜೆಎನ್‌ಯು ವಿದ್ಯಾರ್ಥಿ ಸಂಘದ ಮುಖಂಡೆಯಾಗಿದ್ದ ಶೈಲಾ ರಷೀದ್‌ ತಂದೆ ಅಬ್ದುಲ್‌ ರಷೀದ್‌ ಜಮ್ಮು ಕಾಶ್ಮೀರ ಡಿಜಿಪಿಗೆ ಈ ಕುರಿತಾಗಿ ಪತ್ರ ಬರೆದಿದ್ದು, ತಮಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.
ನಾನು ಮಗಳ ದೇಶವಿರೋಧಿ ಚಟುವಟಿಕೆ ವಿರೋಧಿಸಿದ್ದಕ್ಕೆ ಮಗಳ ಭದ್ರತಾ ಸಿಬ್ಬಂದಿ ಶಕೀಬ್‌ ಎಂಬಾತ ಪಿಸ್ತೂಲ್‌ ಮೂಲಕ ನನಗೆ ಬೆದರಿಕೆ ಹಾಕಿದ್ದಾನೆ ಎಂದು ಅಬ್ದುಲ್​ ಅಳಲು ತೋಡಿಕೊಂಡಿದ್ದಾರೆ.
ಜಮ್ಮು ಕಾಶ್ಮೀರ ಪೀಪಲ್ಸ್‌ ಮೂಮೆಂಟ್‌ (ಜೆಕೆಪಿಎಂ) ಪರ ಸೇರಲು ತಮ್ಮ ಮಗಳು 3 ಕೋಟಿ ರೂ. ಹಣವನ್ನು ಪಡೆದಿದ್ದಾಳೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಲು ಅಕ್ರಮ ಮಾರ್ಗಗಳಿಂದ ಈ ಹಣವು ಹರಿದು ಬಂದಿರುವುದು ತಮಗೆ ತಿಳಿದಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ದೇಶ ವಿರೋಧಿ ಕೃತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನದಲ್ಲಿ ಇರುವ ಜಹೂರ್‌ ವಟಾಲಿ ನನ್ನ ಜತೆ ಮಾತನಾಡಿದ್ದ. ಈತ ಎರಡು ತಿಂಗಳಿನಿಂದ ಈತ ಜೈಲಿನಲ್ಲಿ ಇದ್ದಾನೆ. ಜಹೂರ್​ ನನ್ನ ಮಗಳು ಶೈಲಾಳಿಗೆ ಮೂರು ಕೋಟಿ ರೂ. ನೀಡುವುದಾಗಿ ಹೇಳಿದ್ದ. ಈ ಹಣವನ್ನು ಪಡೆದು ಆಕೆ ಜಮ್ಮು ಕಾಶ್ಮೀರ ರಾಜಕೀಯಕ್ಕೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದ. ನಾನು ಈ ಹಣವನ್ನು ಪಡೆದುಕೊಳ್ಳಲಿಲ್ಲ. ಅಷ್ಟೇ ಅಲ್ಲದೇ ಮಗಳಿಗೂ ಈ ರೀತಿಯ ವ್ಯವಹಾರದಲ್ಲಿ ಭಾಗಿಯಾಗಬೇಡ ಎಂದು ತಿಳಿಸಿದ್ದೆ. ಆದರೆ ಮಗಳು ನನ್ನ ಮಾತು ಕೇಳಲಿಲ್ಲ ಎಂದು ಹೇಳಿದ್ದಾರೆ.
ಮಗಳ ಈ ಕೃತ್ಯವನ್ನು ವಿರೋಧಿಸಿದ ಕಾರಣದಿಂದಾಗಿ ನನ್ನ ವಿರುದ್ಧ ತಾಯಿಯನ್ನು ಎತ್ತಿಕಟ್ಟಿದ್ದಾಳೆ. ಅವಳ ಮಾತು ಕೇಳಿ ನನ್ನ ಪತ್ನಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆಯ ಅಡಿ ಕೇಸ್‌ ಹಾಕಿದ್ದಾಳೆ. ಪಿತೂರಿ ನಡೆಸಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾಳೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಆರೋಪವನ್ನು ಅಲ್ಲಗಳೆದಿರುವ ಶೈಲಾ, ನಮ್ಮ ತಂದೆ ಬರೆದಿರುವ ಪತ್ರ ಇದಾಗಲೇ ಸಾಕಷ್ಟು ಹರಿದಾಡುತ್ತಿದೆ. ಆದರೆ ನನ್ನ ತಂದೆ ಸುಳ್ಳು ಹೇಳುತ್ತಿದ್ದಾರೆ. ತಂದೆ ತಾಯಿಗೆ ಹಿಂಸೆ ನೀಡುತ್ತಿದ್ದಾರೆ. ತಾಯಿ ಜತೆ ನಾನು, ಸಹೋದರಿ ದೂರು ನೀಡಿದ್ದೇವೆ. ಇದು ಕೌಟುಂಬಿಕ ವಿಚಾರವಾಗಿದ್ದು, ಸುಳ್ಳು ಹೇಳುತ್ತಿರುವ ತಂದೆಯನ್ನು ನಂಬಬೇಡಿ ಎಂದು ಟ್ವೀಟ್‌ ಮಾಡಿದ್ದಾರೆ.
1) Many of you must have come across a video of my biological father making wild allegations against me and my mum & sis. To keep it short and straight, he's a wife-beater and an abusive, depraved man. We finally decided to act against him, and this stunt is a reaction to that.pic.twitter.com/SuIn450mo2
— Shehla Rashid (@Shehla_Rashid)November 30, 2020

ಬಿಜೆಪಿ ನಾಯಕರಿಗೆ ವಂಚಿಸಲು ಯತ್ನಿಸಿ ಸಿಕ್ಕಿಬಿದ್ದ ಅಮಿತ್​ ಷಾ ‘ಸೋದರಳಿಯ’

ಮತಾಂತರವೆಂಬ ಭಯಾನಕ ನರಕ ಅನುಭವಿಸಿದ್ದೆ- ಗಾಯಕ ವಾಜಿದ್‌ ಖಾನ್​ ಪತ್ನಿ ಬಿಚ್ಚಿಟ್ಟಿದ್ದಾರೆ ಕರಾಳ ಅನುಭವ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + one =
Remember me
