ವಾಷಿಂಗ್ಟನ್‌:ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡೆನ್​ ಅವರು ತಮ್ಮ ಕಾಲನ್ನು ಉಳುಕಿಸಿಕೊಂಡಿದ್ದಾರೆ. ತಮ್ಮ ನಾಯಿಯ ಜತೆ ಆಟವಾಡುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು, ಕಾಲಿಗೆ ನೋವು ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ನಿನ್ನೆ ತಡರಾತ್ರಿ ಈ ಘಟನೆ ಸಂಭವಿಸಿದೆ.
ತಕ್ಷಣ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಪರೀಕ್ಷೆ ಮಾಡಿರುವ ವೈದ್ಯರು ಬಲಗಾಲಿನ ಪಾದದ ಮೂಳೆಯಲ್ಲಿ ಕೂದಲೆಳೆಯಷ್ಟು ಸೀಳು ಕಾಣಿಸಿಕೊಂಡಿರುವುದಾಗಿ ಹೇಳಿದ್ದಾರೆ. ಜತೆಗೆ ನಡೆದಾಡಲುಅನುಕೂಲವಾಗುವ ಬೂಟುಗಳನ್ನು ಅವರು ಕೆಲವು ವಾರಗಳ ಕಾಲ ಧರಿಸಬೇಕಾಗುತ್ತದೆ ಎಂದು ಸಲಹೆ ಕೊಟ್ಟಿದ್ದಾರೆ.
https://twitter.com/realDonaldTrump/status/1333217873758654464
ಪ್ರಾಣಿ ಪ್ರಿಯರಾಗಿರುವ ಜೋ ಬೈಡೆನ್​ ಇದಾಗಲೇ ಹಲವಾರು ಪ್ರಾಣಿಗಳನ್ನು ಕಾಪಾಡಿದ್ದಾರೆ ಕೂಡ. ಅವರು ಶ್ವಾನಪ್ರೇಮಿ ಕೂಡ ಹೌದು. ತಮ್ಮ ಮನೆಯ ನಾಯಿಗಳ ಜತೆ ಸದಾ ಆಟವಾಡುತ್ತಿರುತ್ತಾರೆ. ಸಾಕು ನಾಯಿಯೊಂದಿಗೆ ಶನಿವಾರ ಆಟವಾಡುವ ವೇಳೆ ಅಕಸ್ಮಾತ್ತಾಗಿ ಜಾರಿ ಬಿದ್ದರು. ಆ ಸಮಯದಲ್ಲಿ ಬಲಗಾಲಿನ ಹಿಮ್ಮಡಿ ಹೊರಳಿ ಮೂಳೆಗೆ ಏಟಾಗಿದೆ.
‘ಎಕ್ಸ್‌ರೇ ಮಾಡಿದ ಸಂದರ್ಭದಲ್ಲಿ ಪಾದದ ಮೂಳೆಯಲ್ಲಿ ಸೀಳು ಕಾಣಿಸಿಕೊಂಡಿರುವುದು ಗೊತ್ತಾಗಲಿಲ್ಲ. ಮತ್ತಷ್ಟು ಪರೀಕ್ಷೆಗಳನ್ನು ನಡೆಸಿದ ನಂತರ ಗೊತ್ತಾಯಿತು’ ಎಂದು ಬೈಡನ್‌ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಕೆವಿನ್‌ ಒಕೂನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ. ಬೈಡೆನ್​ ಅವರನ್ನು ಜಾಲತಾಣದಲ್ಲಿ ಟ್ಯಾಗ್​ ಮಾಡಿರುವ ಟ್ರಂಪ್​ ಬೇಗ ಗುಣಮುಖರಾಗಿ ಎಂದಿದ್ದಾರೆ.
ಮತಾಂತರವೆಂಬ ಭಯಾನಕ ನರಕ ಅನುಭವಿಸಿದ್ದೆ- ಗಾಯಕ ವಾಜಿದ್‌ ಖಾನ್​ ಪತ್ನಿ ಬಿಚ್ಚಿಟ್ಟಿದ್ದಾರೆ ಕರಾಳ ಅನುಭವ…

ಕಾಲೇಜ್​ವರೆಗೂ ಹುಡುಗಿಯಾಗೇ ಇದ್ದೆ… ಆದ್ರೆ… ರಹಸ್ಯ ಬಿಚ್ಚಿಟ್ಟ ಗಾಯಕಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × four =
Remember me
