ನಾಗ್ಪುರ:ಅಮೆರಿಕದ ಉಪಾಧ್ಯಕ್ಷೆಯಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್​ ಭಾರತ ಮೂಲದವರು ಎಂದು ಇದಾಗಲೇ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಅವರ ತಾಯಿ ಭಾರತದವರಾಗಿರುವ ಬಗ್ಗೆ ಇದಾಗಲೇ ವರದಿಯಾಗಿದೆ. ಆದರೆ ಇದೀಗ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್​ ಅವರಿಗೂ ಭಾರತದ ಲಿಂಕ್​ ಇದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಬೈಡೆನ್​ ಅವರ ದೂರದ ಸಂಬಂಧಿಗಳು ಭಾರತದಲ್ಲಿಯೇ ಇರುವ ಬಗ್ಗೆ ಬೈಡೆನ್​ ಅವರೇ ಹೇಳಿದ್ದಾರೆ. 1873ರಿಂದಲೇ ಮಹಾರಾಷ್ಟ್ರದ ನಾಗ್ಪುರದಲ್ಲಿ ಅವರ ಪೂರ್ವಜರು ವಾಸ ಮಾಡುತ್ತಿರುವ ಬಗ್ಗೆ 2013ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೈಡೆನ್​ ಹೇಳಿರುವುದಾಗಿ ತಿಳಿದುಬಂದಿದೆ.
2013ರಲ್ಲಿ ಬೈಡೆನ್​ ಅಮೆರಿಕದ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮುಂಬೈಗೆ ಭೇಟಿ ನೀಡಿದ್ದರು. ಅಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ದೂರದ ಸಂಬಂಧಿಕರಲ್ಲಿ ಕೆಲವರು ಭಾರತದಲ್ಲಿ ವಾಸಿಸುತ್ತಿರುವ ಬಗ್ಗೆ ಹೇಳಿದ್ದರು.
ಇದನ್ನೂ ಓದಿ:ಪಟಾಕಿ ಬ್ಯಾನ್​- ಸುಪ್ರೀಂಕೋರ್ಟ್​ ಹೇಳಿದ್ದೇನು?
ಇದಾದ ಮೇಲೆ 2015ರಲ್ಲಿ ವಾಷಿಂಗ್ಟನ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆಯೂ ಈ ವಿಷಯ ಪ್ರಸ್ತಾಪಿಸಿದ್ದರು. ತಮ್ಮ ಪೂರ್ವಜರು ಇಲ್ಲಿಯೇ ನೆಲೆಸಿರುವ ಬಗ್ಗೆ ಹೇಳಿದ್ದ ಬೈಡೆನ್​, ಭಾರತಕ್ಕೆ ಮರಳಲು ಮತ್ತು ಮುಂಬೈಗೆ ಇಲ್ಲಿಗೆ ಬರಲು ಇದು ಒಂದು ಗೌರವವಾಗಿದೆ ಎಂದು ಅವರು ಹೇಳಿದ್ದರು.
“ನಾನು 1972ರಲ್ಲಿ ಸೆನೆಟರ್​ ಆದ ನಂತರ ಭಾರತದ ಬೈಡೆನ್​ ಒಬ್ಬರಿಂದ ಪತ್ರ ಸ್ವೀಕರಿಸಿದ್ದೆ. ನನ್ನ ಬಹು ಹಿಂದಿನ ತಲೆಮಾರು ಭಾರತದಲ್ಲಿ ವಾಸವಾಗಿರುವುದು ತಿಳಿದಿದೆ. ನನ್ನ ಮುತ್ತಜ್ಜನ ಮುತ್ತಜ್ಜನವರು ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು” ಎಂದು ಬೈಡೆನ್​ ಹೇಳಿದ್ದರು. ನಂತರ ಈ ಪತ್ರದ ಬಗ್ಗೆ ವಿಚಾರಿಸಿದಾಗ ಇದು ನಾಗ್ಪುರ ಮೂಲದ ಲೆಸ್ಲಿ ಬೈಡೆನ್​ ಎನ್ನುವವರು ಬರೆದಿದ್ದಾರೆ, ಅವರ ಮೊಮ್ಮಕ್ಕಳು ನಾಗ್ಪುರದಲ್ಲಿ ಉಳಿದುಕೊಂಡಿದ್ದಾರೆ ಮತ್ತು ಅವರ ಕುಟುಂಬವು 1873ರಿಂದ ಅಲ್ಲಿ ವಾಸಿಸುತ್ತಿದೆ ಎಂದು ಹೇಳಿಕೊಂಡಿರುವುದಾಗಿ ಪ್ರಸ್ತಾಪಿಸಿದರು.
ಗೆದ್ದೇ ಗೆಲ್ಲುವೆ ಎಂದು ಟ್ರಂಪ್​ ಟ್ವೀಟ್​ ಮಾಡಿದರೆ, ಮತ ಹಾಕಿ ಎಂದು ಪುತ್ರನ ಎಡವಟ್ಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 6 =
Remember me
