ಕೋಲ್ಕತಾ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸಹೊಸ ಘೋಷಣೆ ಮಾಡುತ್ತಿದ್ದಾರೆ. ಇದೀಗ ಬೆಂಗಾಲಿ ಮತದಾರರ‌ನ್ನು ಓಲೈಸಿಕೊಳ್ಳಲು ಒಂದು ಘೋಷಣೆ ಮಾಡಿ ಅನ್ಯಭಾಷಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅದೇನೆಂದರೆ, ಬೆಂಗಾಲಿ ಭಾಷೆ ಬರುವವರಿಗೆ ಮಾತ್ರ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಎಂದಿದ್ದಾರೆ. ಇಲ್ಲಿಯ ಮಾಲ್ಡಾದಲ್ಲಿ ನಡೆದ ಆಡಳಿತಾತ್ಮಕ ಸಭೆಯೊಂದರಲ್ಲಿ ಮಮತಾ ಈ ರೀತಿಯ ಹೇಳಿಕೆ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ದೀದಿ, ಪಶ್ಚಿಮ ಬಂಗಾಳದಲ್ಲಿ ಕೆಲವೊಂದು ಸುಧಾರಣೆಗಳನ್ನು ತರಲಾಗುತ್ತಿದೆ. ಈಗ ರಾಜ್ಯದಲ್ಲಿರುವ ಜನತೆಗೆ ಉದ್ಯೋಗವನ್ನು ಒದಗಿಸಬೇಕಾಗುತ್ತದೆ. ಸ್ಥಳೀಯರನ್ನು ಉದ್ಯೋಗದಲ್ಲಿ ನೇಮಿಸಿಕೊಂಡರೆ ಅವರೊಂದಿಗೆ ವ್ಯವಹರಿಸುವುದು ಸುಲಭವಾಗುತ್ತದೆ ಎಂದು ವಿವರಿಸಿದ್ದಾರೆ.
ಇದು ಅನ್ಯಭಾಷಿಕರನ್ನು ಕೆರಳಿಸಿದೆ. ಈ ಮಾತಿನ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಆಮಿಷ ಒಡ್ಡಿ ಚುನಾವಣೆ ಗೆಲ್ಲುವುದು ಸಹಿಸುವುದು ಸಾಧ್ಯವಿಲ್ಲ. ಎಲ್ಲಾ ರಾಜ್ಯಗಳಲ್ಲಿಯೂ ಇದೇ ರೀತಿ ಘೋಷಣೆ ಮಾಡಿದರೆ ಬೆಂಗಾಲಿ ಬರುವವರು ಅನ್ಯರಾಜ್ಯಕ್ಕೆ ಉದ್ಯೋಗಕ್ಕೆ ಹೋಗುವಂತಿಲ್ಲ. ಇದು ನಿಮಗೆ ಸರಿ ಕಾಣಿಸುತ್ತದೆಯಾ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ನೀರು ಬೇಕು ಎಂದರು… ಕೊಡಲು ಆಗ್ಲೇ ಇಲ್ಲ ಸರ್‌.. ಇಷ್ಟು ದೊಡ್ಡ ವ್ಯಕ್ತಿ ಎಂದು ಆಮೇಲೆ ಗೊತ್ತಾಯ್ತು… ಪ್ರತ್ಯಕ್ಷದರ್ಶಿಯ ಕಣ್ಣೀರು

‘ಗಂಡ ಕಣೆ ಅಡ್ಜಸ್ಟ್‌ ಮಾಡ್ಕೋ’ ಅಂತಾರೆ… ಇಂಥ ನರಕದ ಬಾಳು ಹೇಗೆ ಬಾಳಲಿ ಮೇಡಂ? ನನಗೆ ಮುಕ್ತಿ ಇದೆಯಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
