ನವದೆಹಲಿ:ಇಂಡಿಯನ್ ಆಯಿಲ್ ಕಾರ್ಪೋರೇಷನ್​ನ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ತರಬೇತಿ ನೀಡುತ್ತಿದೆ. ದೆಹಲಿಯಲ್ಲಿ 102 ಸ್ಥಾನ, ಹರಿಯಾಣ-54, ಹಿಮಾಚಲಪ್ರದೇಶ- 11, ಜಮ್ಮು ಮತ್ತು ಕಾಶ್ಮೀರ- 10, ಪಂಜಾಬ್- 46, ರಾಜಸ್ಥಾನ- 67, ಉತ್ತರಪ್ರದೇಶ- 122, ಉತ್ತರಾಖಂಡ- 19, ಚಂಡೀಗಢ್‍ನಲ್ಲಿ 5 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸ್ಥಾನಗಳಲ್ಲಿ ಮೀಸಲಾತಿ ನಿಗದಿಯಾಗಿದೆ.
ಸ್ಥಾನಗಳ ವಿವರ ಹೀಗಿದೆ:* ಟ್ರೇಡ್ ಅಪ್ರೆಂಟೀಸ್ ಅಕೌಂಟೆಂಟ್* ಟ್ರೇಡ್ ಅಪ್ರೆಂಟೀಸ್ ಡೇಟಾ ಎಂಟ್ರಿ ಆಪರೇಟರ್ (ಪ್ರೆಷರ್ ಹಾಗೂ ಕೌಶಲ ಪ್ರಮಾಣ ಪತ್ರ ಪಡೆದವರು)* ಟ್ರೇಡ್ ಅಪ್ರೆಂಟೀಸ್ (ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇನ್‍ಸ್ಟ್ರುಮೆಂಟ್, ಮೆಷಿನಿಸ್ಟ್)* ಟೆಕ್ನಿಕಲ್ ಅಪ್ರೆಂಟೀಸ್ (ಮೆಕ್ಯಾನಿಕಲ್, ಎಲೆಕ್ಟ್ರಾನಿಕಲ್, ಇನ್‍ಸ್ಟ್ರುಮೆಂಟೇಷನ್, ಸಿವಿಲ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್)
ವಿದ್ಯಾರ್ಹತೆ:ಮೆಕ್ಯಾನಿಕಲ್, ಪಿಯುಸಿ, ಎಲೆಕ್ಟ್ರಿಕಲ್, ಇನ್‍ಸ್ಟ್ರುಮೆಂಟೇಷನ್, ಸಿವಿಲ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ, ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇನ್‍ಸ್ಟ್ರುಮೆಂಟ್ ಮೆಕ್ಯಾನಿಕ್, ಮೆಷಿನಿಸ್ಟ್‍ನಲ್ಲಿ ಐಟಿಐ, ಪದವಿಗಳಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು. ಮೀಸಲಾತಿ ಅಭ್ಯರ್ಥಿಗಳು ಶೇ.45 ಅಂಕ ಪಡೆದಿರಬೇಕು.
ವಯೋಮಿತಿ:30.11.2020ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ:ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಬಹು ಆಯ್ಕೆ ಮಾದರಿಯ 100 ಪ್ರಶ್ನೆಗಳಿರಲಿದ್ದು, 90 ನಿಮಿಷ ಕಾಲಾವಕಾಶ ನೀಡಲಾಗುವುದು. ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರಲಿದೆ.ಟ್ರೇಡ್ ಅಪ್ರೆಂಟೀಸ್ ಅಕೌಂಟೆಂಟ್‍ಗೆ ಜೆನರಿಕ್, ಆಫ್ಟಿಟ್ಯೂಡ್, ಕ್ವಾಂಟಿಟೇಟೀವ್ ಆಪ್ಟಿಟ್ಯೂಡ್, ರೀಸನಿಂಗ್ ಎಬಿಲಿಟೀಸ್, ಬೇಸಿಕ್ ಇಂಗ್ಲಿಷ್ ಭಾಷೆ ವಿಷಯಗಳ ಪರೀಕ್ಷೆ ಇರುತ್ತದೆ. ಟ್ರೇಡ್ ಅಪ್ರೆಂಟೀಸ್ -ಡೇಟಾ ಎಂಟ್ರಿ ಆಪರೇಟರ್‍ಗೆ ಮೇಲ್ಕಂಡ ವಿಷಯಗಳ ಜತೆ ಸಾಮಾನ್ಯ ಜ್ಞಾನ ಪರೀಕ್ಷೆ ಇರುತ್ತದೆ. ಟ್ರೇಡ್ ಅಪ್ರೆಂಟೀಸ್‍ಗೆ ಮೇಲ್ಕಂಡ ವಿಷಯಗಳ ಜತೆ ಸಂಬಂಧಿತ ಕ್ಷೇತ್ರದಲ್ಲಿ ತಾಂತ್ರಿಕ ಅರ್ಹತೆ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯು ಜನವರಿ 3 ರಂದು ನಡೆಯಲಿದ್ದು ಚಂಡಿಗಢ್, ಜೈಪುರ, ಲಖನೌ, ದೆಹಲಿಯಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 19.12.2020
ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ:https://bit.ly/37mcuuJ
ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ:http://www.iocl.com
ಏಲಿಯನ್ ಜತೆ ಅಮೆರಿಕ ಒಪ್ಪಂದ​: ವಿಶ್ವಖ್ಯಾತಿ ಇಸ್ರೇಲ್​ ವಿಜ್ಞಾನಿಯಿಂದ ಅಚ್ಚರಿಯ ಮಾಹಿತಿ

ಪದೇ ಪದೇ ಕಿಡ್ನಿಸ್ಟೋನ್​ ಆಗುತ್ತಿದೆ- ಯಾವ್ಯಾವ ಆಹಾರಗಳಿಂದ ಈ ಸಮಸ್ಯೆ ಬರುತ್ತದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 16 =
Remember me
