ಭಾರತ ಸರ್ಕಾರದ ಪವರ್​ ಸಚಿವಾಲಯದ ಮಾಲೀಕತ್ವದಲ್ಲಿರುವ ಮಿನಿ ರತ್ನ ಕಂಪನಿಗಳಲ್ಲಿ ಒಂದಾಗಿರುವ ನ್ಯಾಷನಲ್​ ಥರ್ಮಲ್​ಪವರ್​ ಕಾರ್ಪೋರೇಷನ್​ ಲಿಮಿಟೆಡ್​ನಲ್ಲಿ ಸಿವಿಲ್​, ಎಲೆಕ್ಟ್ರಿಕಲ್​ ಆ್ಯಂಡ್​ ಮೆಕ್ಯಾನಿಕಲ್​ ವಿಭಾಗದಲ್ಲಿ ಇಂಜಿನಿಯರ್​ ಟ್ರೇನಿಗಳನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. 2022ರ ಗೇಟ್​ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಎಲ್ಲ ಹುದ್ದೆಗಳಿಗೂ ಮೀಸಲಾತಿ ಅನ್ವಯವಾಗಲಿದೆ.
ಹುದ್ದೆಗಳ ವಿವರಇಂಜಿನಿಯರಿಂಗ್​ ಟ್ರೇನಿಸಿವಿಲ್​-20, ಎಲೆಕ್ಟ್ರಿಕಲ್​-15, ಮೆಕ್ಯಾನಿಕಲ್​-10
ಶೈಣಿಕ ಅರ್ಹತೆಕನಿಷ್ಠ ಶೇ.65 ಅಂಕದೊಂದಿಗೆ ಸಿವಿಲ್​, ಎಲೆಕ್ಟ್ರಿಕಲ್​/ಎಲೆಕ್ಟ್ರಿಕಲ್​ (ಪವರ್​), ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​/ಪವರ್​ ಸಿಸ್ಟಮ್​, ಮೆಕ್ಯಾನಿಕಲ್​/ಮೆಕ್ಯಾನಿಕಲ್​ ಆ್ಯಂಡ್​ ಆಟೋಮೇಷನ್​ ವಿಷಯಗಳಲ್ಲಿ ಇಂಜಿನಿಯರಿಂಗ್​ ಪದವಿ, ಬಿಎಸ್ಸಿ/ಬಿಟೆಕ್​ ಪದವಿ ಪಡೆದಿರಬೇಕು. ಸಿಇ, ಇಇ ಮತ್ತು ಎಂಇ ವಿಷಯದಲ್ಲಿ ಗೇಟ್​ ಪರೀಕ್ಷೆ ತೇರ್ಗಡೆಯಾಗಿರಬೇಕು.
ವಯೋಮಿತಿಆಗಸ್ಟ್​ 1, 2022ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿ ವಯೋಮಿತಿ 30 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
ವೇತನಆಯ್ಕೆಯಾಗುವ ಅಭ್ಯರ್ಥಿಗಳನ್ನು ಎಕ್ಸಿಕ್ಯುಟಿವ್​ ಟ್ರೇನಿ ಎಂದು ನೇಮಕ ಮಾಡಿಕೊಂಡು ಪ್ರಾರಂಭದಲ್ಲಿ 50,000ದಿಂದ 1,60,000 ರೂಪಾಯಿವರೆಗೆ ಮಾಸಿಕ ವೇತನ ನೀಡಲಾಗುವುದು. ತರಬೇತಿ ಅವಧಿ ಮುಗಿದ ಬಳಿಕ ಸೀನಿಯರ್​ ಇಂಜಿನಿಯರ್​ ಎಂದು ಪರಿಗಣಿಸಿ 60,000ದಿಂದ 1,80,000 ರೂ. ನೀಡಲಾಗುವುದು. ಇದಲ್ಲದೆ ಪಿಎಫ್​, ಮನೆ ಬಾಡಿಗೆ ಭತ್ಯೆ, ಮೆಡಿಕಲ್​ ಸೌಲಭ್ಯ, ಕಾರ್​ ಲೋನ್​, ಕಂಪ್ಯೂಟರ್​ ಲೋನ್​ ಸೇರಿ ಇತರ ಭತ್ಯೆ ಸಹ ಇರಲಿದೆ.
ಅರ್ಜಿ ಸಲ್ಲಿಕೆ ಹೇಗೆ?ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ನೀಡಲಾದ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಅರ್ಜಿ ಶುಲ್ಕ 600 ರೂ. ಪಾವತಿಸಿ ಸಲ್ಲಿಸತಕ್ಕದ್ದು. ಮೀಸಲಾತಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಆಯ್ಕೆಯಾಗುವ ಸಾಮಾನ್ಯ ಅಭ್ಯರ್ಥಿಗಳು 5 ಲ, ಮೀಸಲಾತಿ ಅಭ್ಯರ್ಥಿಗಳು 2.5 ಲ ರೂ. ಬಾಂಡ್​ ಅನ್ನು ಮೂರು ವರ್ಷಗಳ ಅವಧಿಗೆ ನೀಡಬೇಕು.
ಆಯ್ಕೆ ಪ್ರಕ್ರಿಯೆಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಗೇಟ್​ ಸ್ಕೋರ್​ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಇಬ್ಬರು ಅಭ್ಯರ್ಥಿಗಳ ಗೇಟ್​ ಸ್ಕೋರ್​ ಒಂದೇ ರೀತಿ ಇದ್ದರೆ ಅರ್ಹತಾ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಹಾಗೂ ಜನ್ಮದಿನಾಂಕದ ಆಧಾರದ ಮೇಲೆ ವೈಯಕ್ತಿಕ ಸಂದರ್ಶನ ನಡೆಸಿ ಅರ್ಹರನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 1.8.2022ಅಧಿಸೂಚನೆಗೆ:https://bit.ly/3ACN7Ff
ಮಾಹಿತಿಗೆ:http://www.thdc.co.in
ಪುರುಷರಿಗೆ ಗುಡ್​ ನ್ಯೂಸ್​ ನೀಡಿದ ಸರ್ಕಾರ: ಪ್ರತ್ಯೇಕ ವೈದ್ಯಕೀಯ ಸೇವೆಗೆ ಸಕಲ ಸಿದ್ಧತೆ

ಖೇಲೋ ಇಂಡಿಯಾಗೆ ಉತ್ತೇಜನ: ಲಕ್ಷ ಆಟಿಕೆಗಳಿಂದ ಕಂಗೊಳಿಸುತ್ತಿರೋ ಸತ್ಯಗಣಪತಿ ಶಿರಡಿ ಸಾಯಿ ದೇಗುಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
