ದೆಹಲಿಯಲ್ಲಿರುವ ಆಯುಷ್​ ಸಚಿವಾಲಯದಲ್ಲಿ ಪದವೀಧರರಿಗೆ ಉದ್ಯೋಗಾವಕಾಶದ ಬಾಗಿಲು ತೆರೆದಿದ್ದು, ಬ್ರಾಡ್​ಕಾಸ್ಟ್​ ಇಂಜಿನಿಯರಿಂಗ್​ ಕನ್ಸಲ್ಟಂಟ್ಸ್​ ಇಂಡಿಯಾ ಲಿಮಿಟೆಡ್​ನಿಂದ (ಬಿಇಸಿಐಎಲ್​) ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಆಯುಷ್​ ಸಚಿವಾಲಯದಲ್ಲಿ 86 ಡೇಟಾ ಎಂಟ್ರಿ ಆಪರೇಟರ್​ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆನ್​ಲೈನ್​ ಅರ್ಜಿಗಳಿಗೆ ಮಾತ್ರ ಮಾನ್ಯತೆ ಇದ್ದು, ಅರ್ಜಿ ಸಲ್ಲಿಕೆ ಅಥವಾ ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೆ[email protected]ಮೇಲ್​ ಐಡಿಗೆ ನಿಮ್ಮ ಸಮಸ್ಯೆ ಕುರಿತು ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಹುದ್ದೆ ವಿವರ* ಡೇಟಾ ಎಂಟ್ರಿ ಆಪರೇಟರ್​ – 86ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು. ಪ್ರತಿ ನಿಮಿಷಕ್ಕೆ 35 ಇಂಗ್ಲಿಷ್​ ಪದ ಹಾಗೂ 30 ಹಿಂದಿ ಪದ ಟೈಪ್​ ಮಾಡುವ ಸಾಮರ್ಥ್ಯ ಹೊಂದಿರಬೇಕು. ಎಂಎಸ್​-ವರ್ಡ್​, ಪವರ್​ ಪಾಯಿಂಟ್​ ಹಾಗೂ ಎಕ್ಸೆಲ್​ ಜ್ಞಾನ ಹೊಂದಿರಬೇಕು. ಆಯುಷ್​ ಇಲಾಖೆಯ ಘಟಕ/ ಫೀಲ್ಡ್​ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿ ವೃತ್ತಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ವೇತನ: ಪ್ರಸ್ತುತ ದೆಹಲಿ ಸರ್ಕಾರದಲ್ಲಿರುವ ಕನಿಷ್ಠ ವೇತನ ದರದ ಪ್ರಕಾರ ಮಾಸಿಕ 21,184 ರೂ. ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಸಲ್ಲಿಕೆಯಾಗುವ ಅರ್ಜಿಗಳನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಸಾಮಾನ್ಯ ಜ್ಞಾನ, ಪ್ರಸ್ತುತ ವಿದ್ಯಮಾನ, ಇಂಗ್ಲಿಷ್​ ಗ್ರಾಮರ್​ಗೆ ಸಂಬಂಧಿಸಿದಂತೆ ಕಂಪ್ಯೂಟರ್​ ಆಧಾರಿತ ಪರೀೆ/ ಬಹು ಆಯ್ಕೆ ಮಾದರಿಯ ಲಿಖಿತ ಪರೀೆ ನಡೆಸಲಾಗುವುದು. ಇದರ ಜತೆಗೆ ಟೈಪಿಂಗ್​ ಪರೀೆ ಇರುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 750 ರೂ. (ಪ್ರತಿ ಪ್ರತ್ಯೇಕ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 500 ರೂ. ಪ್ರತ್ಯೇಕವಾಗಿ ಪಾವತಿಸಬೇಕು), ಎಸ್​ಸಿ, ಎಸ್​ಟಿ, ಆಥಿರ್ಕವಾಗಿ ಹಿಂದುಳಿದ ವರ್ಗ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 450 ರೂ. ( ಎರಡನೇ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 300 ರೂ. ಪ್ರತ್ಯೇಕ) ಇದ್ದು, ಜಿಎಸ್​ಟಿ ಹಾಗೂ ಬ್ಯಾಂಕ್​ ಶುಲ್ಕ ಸೇರಬಹುದು. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು ಎಂದು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 22.5.2022ಅಧಿಸೂಚನೆಗೆ:https://bit.ly/3PauA7Kಮಾಹಿತಿಗೆ:http://www.becil.com
ಪತ್ನಿ ಮನೆಗೂ ಬರಲ್ಲ, ವಿಚ್ಛೇನದಕ್ಕೂ ಒಪ್ತಿಲ್ಲ- ಒಂಟಿಯಾಗಿರುವ ನನಗೆ ಕಾನೂನು ನೆರವು ನೀಡಬಲ್ಲದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 2 =
Remember me
