ಬೆಳಗಾವಿಯಲ್ಲಿರುವಕೇಂದ್ರೀಯ ವಿದ್ಯಾಲಯದಲ್ಲಿ (ಕೆವಿ) ಶೈಕ್ಷಣಿಕ ವರ್ಷ 2022-23ಕ್ಕೆ ಅರೆಕಾಲಿಕ ಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ನಮೂನೆಯನ್ನು ಅಧಿಸೂಚನೆಯಲ್ಲೇ ನೀಡಲಾಗಿದೆ.
ಒಟ್ಟು ಹುದ್ದೆಗಳು: 43
ಹುದ್ದೆ ವಿವರ– ಬೋಧಕ ಹುದ್ದೆಗಳು* ಪೋಸ್ಟ್​ ಗ್ರಾಜುಯೇಷನ್​ ಟೀಚರ್​ (ಪಿಜಿಟಿ) – 7(ವಾಣಿಜ್ಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಇಂಗ್ಲಿಷ್​, ಜೀವಶಾಸ್ತ್ರ, ಅರ್ಥಶಾಸ್ತ್ರ, ಹಿಂದಿ)ಬೋಧನಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಬಿಇಡಿ ಮಾಡಿರಬೇಕು. ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಬೋಧನಾ ಸಾಮರ್ಥ್ಯ ಹೊಂದಿರಬೇಕು. ಮಾಸಿಕ 27,500 ರೂ. ವೇತನ ಇದೆ.
* ಟೆನ್ಡ್​ ಗ್ರಾಜುಯೇಟ್​ ಟೀಚರ್​ (ಟಿಜಿಟಿ) – 13(ವಿಜ್ಞಾನ, ಗಣಿತ, ಸಮಾಜ-ವಿಜ್ಞಾನ, ಹಿಂದಿ, ಇಂಗ್ಲಿಷ್​, ಸಂಸತ)ಬೋಧನಾ ವಿಷಯಗಳನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿ ಪದವಿ ಪಡೆದಿದ್ದು, ಬಿಇಡಿ ಮಾಡಿರಬೇಕು. ಮಾಸಿಕ 26,250 ರೂ. ವೇತನ ನಿಗದಿಪಡಿಸಲಾಗಿದೆ. ಸಿಟಿಇಟಿ/ ಕೆಟಿಇಟಿ/ಎಸ್​ಟಿಇಟಿ ಮಾಡಿದವರಿಗೆ ಆದ್ಯತೆ ಇದೆ.
* ಪೆಮರಿ ಟೀಚರ್ಸ್​ – 12ದ್ವಿತೀಯ ಪಿಯುಸಿ ಮಾಡಿರಬೇಕು. ಡಿ.ಇಡಿಯಲ್ಲಿ ಶೇ.50 ಅಂಕ ಪಡೆದಿರಬೇಕು. ಕೆಟಿಇಟಿ/ ಎಸ್​ಟಿಇಟಿ/ ಸಿಟಿಇಟಿ ಮಾಡಿದವರಿಗೆ ಆದ್ಯತೆ ಇದೆ. ಮಾಸಿಕ 21. 250 ರೂ. ವೇತನ ಇದ್ದು, ಕಂಪ್ಯೂಟರ್​ ಜ್ಞಾನ ಕೇಳಲಾಗಿದೆ.
* ಕಂಪ್ಯೂಟರ್​ ಇನ್​ಸ್ಟ್ರಕ್ಟರ್​ (ಪ್ರಾಥಮಿಕ ಮತ್ತು ಸೆಕೆಂಡರಿ) – 3ಕಂಪ್ಯೂಟರ್​ ಸೈನ್ಸ್​/ ಐಟಿಯಲ್ಲಿ ಬಿಇ/ ಬಿಟೆಕ್​ ಮಾಡಿರಬೇಕು. ಅಥವಾ ಯಾವುದೇ ಬಿಇ/ ಬಿಟೆಕ್​ ಮಾಡಿದ್ದು, ಕಂಪ್ಯೂಟರ್​ ಡಿಪ್ಲೊಮಾ/ ಎಂಎಸ್ಸಿ ಮಾಡಿರಬಹುದು. ಮಾಸಿಕ 21,250-26,250 ರೂ. ವೇತನ ನೀಡಲಾಗುವುದು.
* ಕನ್ನಡ ಲಾಂಗ್ವೇಜ್​ ಇನ್​ಸ್ಟ್ರಕ್ಟರ್​ – 1ಸಿಟಿಇಟಿ/ ಟಿಇಟಿ ಅರ್ಹತೆ ಕೇಳಲಾಗಿದ್ದು, ಮಾಸಿಕ 18,750 ರೂ. ವೇತನ ನಿಗದಿಪಡಿಸಲಾಗಿದೆ.
– ನೇರ ಸಂದರ್ಶನ ನಡೆಯುವ ಹುದ್ದೆಗಳು*ಕೌನ್ಸೆಲರ್​ – 1ಸೈಕಾಲಜಿಯಲ್ಲಿ ಬಿಎ/ ಬಿಎಸ್ಸಿ ಮಾಡಿದ್ದು, ಕೌನ್ಸಿಲಿಂಗ್​ನಲ್ಲಿ ಡಿಪ್ಲೊಮಾ ಮಾಡಿರಬೇಕು. ಮಾಸಿಕ 26,250 ರೂ. ವೇತನ ಇರಲಿದೆ.
* ಸ್ಪೋಟ್ಸ್​ ಕೋಚ್​ (ಪುರುಷ ಮತ್ತು ಮಹಿಳೆ) – 2ಬಿಪಿಇಡಿ ಅಥವಾ ತತ್ಸಮಾನ ಶಿಕ್ಷಣವನ್ನು ಶೇ.50 ಅಂಕದೊಂದಿಗೆ ಪಡೆದಿರಬೇಕು. ಮಾಸಿಕ 21,250 ರೂ. ವೇತನ ಇದೆ.
* ಯೋಗ ಟೀಚರ್​ – 1ಯಾವಯದೇ ಪದವಿ/ ಯೋಗದಲ್ಲಿ ಡಿಪ್ಲೊಮಾ ಮಾಡಿರುವ ಅಭ್ಯರ್ಥಿಗಳಿಗೆ ಮಾಸಿಕ 21,250 ರೂ. ವೇತನ ನೀಡಲಾಗುವುದು.
* ಡ್ಯಾನ್ಸ್​, ಮ್ಯೂಸಿಕ್​ ಇನ್​ಸ್ಟ್ರಕ್ಟರ್​ – 1ದ್ವೀತಿಯ ಪಿಯುಸಿ/ ತತ್ಸಮಾನ ಶಿಕ್ಷಣ/ ಸಂಗೀತ, ಡ್ಯಾನ್ಸ್​ನಲ್ಲಿ ಪದವಿ/ ಡಿಪ್ಲೊಮಾ ಮಾಡಿರಬೇಕು. ಮಾಸಿಕ 21,250 ರೂ. ವೇತನ ಇದೆ.
* ನರ್ಸ್​- 1ನರ್ಸಿಂಗ್​, ನರ್ಸಿಂಗ್​ ಆ್ಯಂಡ್​ ಮಿಡ್​ವ್​ೈನಲ್ಲಿ ಡಿಪ್ಲೊಮಾ/ ನರ್ಸಿಂಗ್​ನಲ್ಲಿ ಬಿಎಸ್ಸಿ ಮಾಡಿರಬೇಕು. ಕೆಲಸ ನಿರ್ವಹಿಸುವ ಪ್ರತಿ ದಿನಕ್ಕೆ 750 ರೂ. ಗೌರವಧನ ನೀಡಲಾಗುವುದು.
* ಡಾಟಾ ಎಂಟ್ರಿ ಆಪರೇಟರ್​ – 3ಕಂಪ್ಯೂಟರ್​ ಸೈನ್ಸ್​ನಲ್ಲಿ ಬಿಸಿಎ/ ಎಂಸಿಎ/ ಬಿಟೆಕ್​/ ಬಿಎಸ್ಸಿ/ ಎಂಎಸ್ಸಿ ಮಾಡಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ಕೆಲಸ ನಿರ್ವಹಿಸುವ ಪ್ರತಿ ದಿನಕ್ಕೆ 666 ರೂ. ವೇತನ ಇದೆ.
ಬೋಧಕೇತರ ಹುದ್ದೆಗೆ ಸಂದರ್ಶನ ನಡೆಯುವ ದಿನಾಂಕ: 16.3.2022ಬೋಧಕ ಹುದ್ದೆಗೆ ಲಿಖಿತ ಪರೀಕ್ಷೆ : 10.3.2022, ಸಂದರ್ಶನ: 15.3.2022
ಅಧಿಸೂಚನೆಗೆ:https://bit.ly/35QdslG
ಮಾಹಿತಿಗೆ:http://no2belagavicantt.kvs.ac.in
ಕ್ರೀಡಾ ಪ್ರಾಧಿಕಾರದಲ್ಲಿದೆ 28 ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳು: ಎರಡು ಲಕ್ಷ ರೂ.ವರೆಗೆ ಸಂಬಳ
ವಿವಿಧ ಪದವೀಧರರಿಗೆ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿವೆ ಉದ್ಯೋಗ: 14 ಪೋಸ್ಟ್​ಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 5 =
Remember me
