ಇಂಡೋ-ಟಿಬೆಟಿಯನ್​ ಗಡಿ ಪೊಲೀಸ್​ ಪಡೆಯಿಂದ ಸಹಾಯಕ ಸಬ್​ ಇನ್​ಸ್ಪೆಕ್ಟರ್​ (ಸ್ಟೆನೋಗ್ರಾರ್​) /ನೇರ ಪ್ರವೇಶ/ಲಿಮಿಟೆಡ್​ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ ಗ್ರೂಪ್​ ಸಿ ನಾನ್​ ಗೆಜೆಟೆಡ್​ ಹುದ್ದೆಗಳಿಗೆ ತಾತ್ಕಾಲಿಕ ಆಧಾರದ ಮೇಲೆ ಭರ್ತಿ ಮಾಡಲು ಭಾರತೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ* ಸಹಾಯಕ ಸಬ್​ ಇನ್ಸ್​ಪೆಕ್ಟರ್​/ಸ್ಟೆನೋಗ್ರಾರ್​ (ನೇರ ಪ್ರವೇಶ)-21 ಹುದ್ದೆಗಳಿದ್ದು, ಮಹಿಳೆಯರಿಗೆ 2 ಪುರುಷರಿಗೆ 19 ಹುದ್ದೆ ಮೀಸಲಿದೆ.* ಸಹಾಯಕ ಸಬ್​ ಇನ್ಸ್​ಪೆಕ್ಟರ್​/ಸ್ಟೆನೋಗ್ರಾರ್​ (ಐಟಿಬಿಒಇಎ್​ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಮಾತ್ರ)-17 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಶೈಕ್ಷಣಿಕ ಅರ್ಹತೆಇಂಟರ್​ ಮೀಡಿಯೇಟ್​ ಅಥವಾ ಸೀನಿಯರ್​ ಸೆಕೆಂಡರಿ ಸ್ಕೂಲ್​ ಪರೀಕ್ಷೆ ಯ ಅಂಗೀಕೃತ ಬೋರ್ಡ್​ ಅಥವಾ ಸರಿಸಮನಾದ ಪ್ರಮಾಣ ಪತ್ರ ಪಡೆದಿರಬೇಕು. ಇದಲ್ಲದೆ ಪ್ರತಿ ನಿಮಿಷಕ್ಕೆ 80 ಪದಗಳಂತೆ ಡಿಕ್ಟೇಷನ್​ ತೆಗೆದುಕೊಳ್ಳುವ ಕೌಶಲ, ಟ್ರಾನ್ಸ್​ಕ್ರಿಪ್ಷನ್​ ಕಂಪ್ಯೂಟರ್​ನಲ್ಲಿ ಇಂಗ್ಲಿಷ್​ ಭಾಷೆಯಲ್ಲಿ 50 ನಿಮಿಷ ಅಥವಾ ಹಿಂದಿ ಭಾಷೆಯಲ್ಲಿ 65 ನಿಮಿಷಗಳ ಟೈಪಿಂಗ್​ ಸ್ಪೀಡ್​ ಕೇಳಲಾಗಿದೆ.
ವಯೋಮಿತಿಸಹಾಯಕ ಸಬ್​ಇನ್​ಸ್ಪೆಕ್ಟರ್​ ಐಟಿಬಿಪಿ ಸಿಬ್ಬಂದಿ ಹುದ್ದೆಗೆ ಗರಿಷ್ಠ 35 ವರ್ಷ ಹಾಗೂ ಉಳಿದ ಹುದ್ದೆಗಳಿಗೆ 18ರಿಂದ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇರಲಿದೆ. 2.1.2022ಕ್ಕಿಂತ ಮುಂಚಿತವಾಗಿ ಹುಟ್ಟಿದವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಸಹಾಯಕ ಇನ್​ಸ್ಪೆಕ್ಟರ್​ ಸಿಬ್ಬಂದಿ ಹುದ್ದೆಗೆ 35 ವರ್ಷ ವಯೋಮಿತಿ ನಿಗದಿಯಾಗಿದೆ.
ವೇತನ7ನೇ ವೇತನ ಶ್ರೇಣಿ ಅನ್ವಯ 29,000ದಿಂದ 92,300 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಯಾವುದೇ ರೀತಿಯ ಆನ್​ಲೈನ್ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಅಪೂರ್ಣ ಮತ್ತು ದಾಖಲೆಗಳಿಲ್ಲದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಅರ್ಜಿಯಲ್ಲಿ ಇ-ಮೇಲ್​ ವಿಳಾಸ ಮತ್ತು ಮೊಬೈಲ್​ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
ಆಯ್ಕೆ ಪ್ರಕ್ರಿಯೆಹುದ್ದೆಗಳು ತಾತ್ಕಾಲಿವಾಗಿದ್ದು, ಯಾವುದೇ ಸೂಚನೆ ಇಲ್ಲದೆ ಹುದ್ದೆಗಳ ಸಂಖ್ಯೆ ಹೆಚ್ಚು ಅಥವಾ ಕಡಿಮೆ ಮಾಡಬಹುದು. ನೇಮಕಾತಿ ಪ್ರಕ್ರಿಯೆಯ ಅನುಕ್ರಮದಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಹಕ್ಕನ್ನು ಸಂಸ್ಥೆ ಹೊಂದಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಶಾರೀರಿಕ ದಕ್ಷತೆ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ , ಲಿಖಿತ ಪರೀಕ್ಷೆ , ಕೌಶಲ ಪರೀಕ್ಷೆ , ದಾಖಲೆ ಮತ್ತು ವಿವರವಾದ ವೈದ್ಯಕಿಯ ಪರೀಕ್ಷೆ ನಡೆಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 7.7.2022ಅಧಿಸೂಚನೆಗೆ: ವಿಜಯವಾಣಿ ಪತ್ರಿಕೆಯ ಜೂನ್​ 4ರ 2ನೇ ಪುಟ ನೋಡಿ.ಮಾಹಿತಿಗೆ:http://recruitment.itbpolice.nic.in/
ಕನ್ನಡ ಬಲ್ಲಿರಾ? ಉಡುಪಿ ಪಂಚಾಯಿತಿಗಳಲ್ಲಿದೆ 41 ಹುದ್ದೆ: ವಿದ್ಯಾರ್ಹತೆ ಬೇಕಿಲ್ಲ- 29 ಸಾವಿರ ರೂ ಸಂಬಳ

ಇಂಗ್ಲಿಷ್‌, ಹಿಂದಿಯಲ್ಲಿ ಪದವಿ ಪಡೆದಿರುವಿರಾ? ಹುಬ್ಬಳ್ಳಿ ನೈಋತ್ಯ ರೈಲ್ವೆಯಲ್ಲಿದೆ ಅನುವಾದಕರ ಹುದ್ದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 7 =
Remember me
