ಎಸ್ಸೆಸ್ಸೆಲ್ಸಿ ಉತ್ತೀರ್ಣರಿಗೆ, ಹಿಂದಿ ಭಾಷಾ ಜ್ಞಾನ ಹಾಗೂ ಪದವೀಧರರಿಗೆ ರಕ್ಷಣಾ ಸಚಿವಾಲಯದಲ್ಲಿ ಉದ್ಯೋಗ ಪಡೆಯುವ ಅವಕಾಶವಿದೆ. ಪುಣೆಯಲ್ಲಿರುವ ಡಿಫೆನ್ಸ್ ಎಸ್ಟೇಟ್ ಆರ್ಗನೈಸೇಷನ್​ನಲ್ಲಿ ವಿವಿಧ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಒಟ್ಟು ಹುದ್ದೆಗಳು: 97
ಹುದ್ದೆ ವಿವರ
*ಸಬ್ ಡಿವಿಷನ್ ಆಫೀಸರ್ (ಗ್ರೇಡ್ ಐಐ) – 89
ಎಸ್ಸೆಸ್ಸೆಲ್ಸಿ (ಮೆಟ್ರಿಕ್ಯುಲೇಷನ್) ಉತ್ತೀರ್ಣ ಅಥವಾ ಸರ್ವೆಯಿಂಗ್/ ಡ್ರಾಫ್ಟ್್ಸುನ್​ಶಿಪ್ (ಸಿವಿಲ್)ನಲ್ಲಿ ಡಿಪ್ಲೊಮಾ ಮಾಡಿರಬೇಕು. ಕನಿಷ್ಠ 15 ವರ್ಷ ಗರಿಷ್ಠ 27 ವರ್ಷವಯೋಮಿತಿ ನಿಗದಿಪಡಿಸಿದ್ದು, ಮಾಸಿಕ 5,200- 20,200 ರೂ.ವರೆಗಿನ ವೇತನ ನಿಗದಿಪಡಿಸಲಾಗಿದೆ. ಸಾಮಾನ್ಯವರ್ಗದ ಅಭ್ಯರ್ಥಿಗೆ 36, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 23, ಎಸ್ಸಿಗೆ 10, ಎಸ್ಟಿಗೆ 4, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 16 ಸ್ಥಾನ ಮೀಸಲಿರಿಸಿದ್ದು, ಇದರಲ್ಲಿ 3 ಸ್ಥಾನ ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.
* ಜೂನಿಯರ್ ಹಿಂದಿ ಟ್ರಾನ್ಸ್​ಲೇಟರ್- 7
ಹಿಂದಿ/ ಇಂಗ್ಲಿಷ್​ನಲ್ಲಿ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು/ ಪದವಿಯಲ್ಲಿ ಇಂಗ್ಲಿಷ್/ ಹಿಂದಿ ವಿಷಯವನ್ನು ಓದಿರಬೇಕು. ಮಾಸಿಕ 9,300- 34,800 ರೂ. ವೇತನ ಇದೆ. ಸಾಮಾನ್ಯವರ್ಗದ ಅಭ್ಯರ್ಥಿಗೆ 5 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 2 ಸ್ಥಾನ ಮೀಸಲಿರಿಸಿದ್ದು, 1 ಸ್ಥಾನ ಅಂಗವಿಕಲ ಅಭ್ಯರ್ಥಿಗೆ ಕಾಯ್ದಿರಿಸಲಾಗಿದೆ. ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
* ಹಿಂದಿ ಟೈಪಿಸ್ಟ್ – 1
ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದು, ಹಿಂದಿ ಟೈಪಿಂಗ್​ನಲ್ಲಿ ನಿಮಿಷಕ್ಕೆ 25 ಪದಕ್ಕಿಂತ ಕಡಿಮೆ ವೇಗ ಇರಬಾರದು. ಆರ್ಥಿಕವಾಗಿ ಹಿಂದುಳಿದ ಅಂಗವಿಕಲ ಅಭ್ಯರ್ಥಿಗೆ ಈ ಸ್ಥಾನ ಮೀಸಲಿರಿಸಿದ್ದು, ಮಾಸಿಕ 5,200-20,200 ರೂ. ವೇತನ ಇದೆ. ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಹುದ್ದೆಗಳಿಗೆ ಅನುಗುಣವಾಗಿ ಲಿಖಿತ ಪರೀಕ್ಷೆ ನಡೆಸಲಾಗುವುದು. ಅನುವಾದ ಪರೀಕ್ಷೆ, ಟೈಪಿಂಗ್ ಪರೀಕ್ಷೆ ನಡೆಸಿ ಅಂತಿಮ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯು ಪುಣೆ, ದೆಹಲಿ, ಕೋಲ್ಕತ್ತದಲ್ಲಿ ನಡೆಯಲಿದೆ. ಯಾವುದೇ ಸಂದರ್ಶನ ಇರುವುದಿಲ್ಲ.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಅರ್ಥಿಕವಾಗಿ ದುರ್ಬಲವಾಗಿರುವ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 200 ರೂ. ಶುಲ್ಕ ಅನ್ನು ಡಿಡಿ ಮೂಲಕ ಪಾವತಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೇ ದಿನ: 15.1.2022
ಅರ್ಜಿ ಸಲ್ಲಿಕೆ ವಿಳಾಸ: Principal Director, Defence Estates, Southern Command, Near ECHS Polyclinic, Kondhwa Road, Pune (Maharashtra) – 411 040
ಅಧಿಸೂಚನೆಗೆ:https://bit.ly/3dzB7aQ
ಮಾಹಿತಿಗೆ:http://delhi.cantt.gov.in
ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿ: ಸೈನಿಕ ಶಾಲೆಯಲ್ಲಿವೆ ಹಲವು ಉದ್ಯೋಗ- 1.42ಲಕ್ಷ ರೂ.ವರೆಗೆ ಸಂಬಳ

ವಿವಿಧ ಪದವೀಧರರಿಗೆ ಹೋಮಿಯೋಪಥಿ ಸಂಸ್ಥೆಯಿಂದ ಅರ್ಜಿ ಆಹ್ವಾನ: 1.12 ಲಕ್ಷ ರೂ.ವರೆಗೆ ಸಂಬಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eleven =
Remember me
