ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿರುವ ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರದಿಂದ ಸಹಾಯಕ ಸಾಫ್ಟ್‌ವೇರ್‌ ಇಂಜಿನಿಯರ್​ ಮತ್ತು ಸಹಾಯಕ ಡೇಟಾ ವಿಶ್ಲೇಷಕರನ್ನು ಐದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಬಹುದು. ಐಐಟಿ 2022ರಲ್ಲಿ ನಡೆಸಿದ ಆಪ್ಟಿಟ್ಯೂಟ್​ ಪರೀೆಯಲ್ಲಿ ಉತ್ತೀರ್ಣರಾದವರಿಗೆ ಆದ್ಯತೆ ನೀಡಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಹುದ್ದೆಗಳ ಸಂಖ್ಯೆ ಹೆಚ್ಚಾಗಲೂಬಹುದು. ಕಡಿಮೆಯೂ ಆಗಬಹುದು.ಒಟ್ಟು ಹುದ್ದೆಗಳು-150
ಹುದ್ದೆಗಳ ವಿವರಅಸಿಸ್ಟೆಂಟ್​ ಸಾಫ್ಟ್‌ವೇರ್‌ಇಂಜಿನಿಯರ್​-144ಸಾಮಾನ್ಯ-58, ಆಥಿರ್ಕವಾಗಿ ಹಿಂದುಳಿದ ಅಭ್ಯಥಿರ್-14, ಇತರ-39, ಎಸ್ಸಿ-22, ಎಸ್ಟಿ-11 ಹುದ್ದೆಗಳನ್ನು ಮೀಸಲಿರಿಸಲಾಗಿದೆ. 22ರಿಂದ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಲಿಗೆ 3 ವರ್ಷ ವಯೋಸಡಿಲಿಕೆ ಇದೆ. 7ನೇ ವೇತನ ಶ್ರೇಣಿ ಅನ್ವಯ 7ನೇ ಹಂತದ ವೇತನ ಅಂದರೆ 60,000 ಮಾಸಿಕ ವೇತನ ಇರಲಿದ್ದು, ಇದರೊಂದಿಗೆ ಇತರ ಭತ್ಯೆ ಸಹ ಇರಲಿದೆ.
ಅಸಿಸ್ಟೆಂಟ್​ ಡೇಟಾ ಅನಲಿಸ್ಟ್​-6ಸಾಮಾನ್ಯ-3, ಇತರ-2 ಮತ್ತು ಎಸ್ಸಿ ಅಭ್ಯರ್ಥಿಗಳಿಗೆ ಒಂದು ಹುದ್ದೆ ಮೀಸಲಿರಿಸಲಾಗಿದೆ. 22ರಿಂದ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಇತರ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಇದೆ. 7ನೇ ವೇತನ ಶ್ರೇಣಿ ಅನ್ವಯ 60,000 ಮಾಸಿಕ ವೇತನದೊಂದಿಗೆ ಡಿಎ ಹಾಗೂ ಇತರ ಸೌಲಭ್ಯ ಇರಲಿದೆ.
ಶೈಕ್ಷಣಿಕ ಅರ್ಹತೆ:ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್​ ಸೈನ್ಸ್​, ಇನ್​ಮೇರ್ಷನ್​ ಟೆಕ್ನಾಲಜಿ, ಕಂಪ್ಯೂಟರ್​ ಅಪ್ಲಿಕೇಷನ್ಸ್​ನಲ್ಲಿ ಬಿಇ/ಬಿಟೆಕ್​/ಎಂಇ/ಎಂಟೆಕ್​ ಪದವಿ, ಎಂಸಿಎ/ಬಿಎಸ್ಸಿ/ಎಂಎಸ್ಸಿ/ಎಂಸಿಎ ಅಥವಾ ತತ್ಸಮಾನ ಪದವಿ ಪಡೆದಿರಬೇಕು. ಶೇಕಡಾ 60 ಅಂಕದೊಂದಿಗೆ, ಮೀಸಲಾತಿ ಅಭ್ಯರ್ಥಿಗಳು ಶೇ.55 ಅಂಕದೊಂದಿಗೆ ತೇರ್ಗಡೆಯಾಗಿರಬೇಕು.ನಿಗದಿತ ಶೈಕ್ಷಣಿಕ ಅರ್ಹತೆ ಜೊತೆಗೆ 2022ರ ಗೇಟ್​ ಪರೀಕ್ಷೆಯಲ್ಲಿ (ಕಂಪ್ಯೂಟರ್​ ಸೈನ್ಸ್​/ಸ್ಟಾ$ಟಿಸ್ಟಿಕ್ಸ್​ ವಿಷಯ) ಉತ್ತೀರ್ಣರಾಗಿರಬೇಕು. ಕಟ್​ ಆ್​ ಮಾರ್ಕ್ಸ್​ಗಿಂತ ಕಡಿಮೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ. ಪದವಿಯ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ:ಸಾಮಾನ್ಯ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕ (ಜಿಎಸ್​ಟಿ ಹೊರತುಪಡಿಸಿ) ಇದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಸೂಕ್ತ ದಾಖಲೆ ಇಲ್ಲದ ಮತ್ತು ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಒಬ್ಬ ಅಭ್ಯರ್ಥಿ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶ. ಇ-ಮೇಲ್​ ಐಡಿ ಮತ್ತು ಮೊಬೈಲ್​ ಸಂಖ್ಯೆ ಕಡ್ಡಾಯವಾಗಿ ನಮೂದಿಸತಕ್ಕದ್ದು.
ಆಯ್ಕೆ ಪ್ರಕ್ರಿಯೆ:ಗೇಟ್​ ಸ್ಕೋರ್​ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾಗುವವರು ಭಾರತದ ಯಾವ ಪ್ರದೇಶದಲ್ಲೂ ಕೆಲಸ ಮಾಡಲು ಸಿದ್ಧರಿರಬೇಕು. ಭಾರತೀಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸಲು ಕೊನೇ ದಿನ: 25.5.2022ಅಧಿಸೂಚನೆಗೆ:https://bit.ly/3vxR1MHಮಾಹಿತಿಗೆ:http://www.cris.org.in
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
