ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‍ಐಆರ್) ಅಧೀನದಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್‍ನಲ್ಲಿ (ಎನ್‍ಎಎಲ್) ಖಾಲಿ ಇರುವ ವಿವಿಧ 24 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಗಳು ಅರ್ಜಿಯನ್ನು ಆನ್‍ಲೈನ್ ಮೂಲಕ ಮಾತ್ರ ಕಳುಹಿಸಲು ಅವಕಾಶವಿದ್ದು, ಅರ್ಜಿ ಕಳುಹಿಸಿದ ನಂತರ ಪ್ರತಿಯೊಂದನ್ನು ಕಾಯ್ದಿರಿಸಿಕೊಳ್ಳಲು ಸೂಚಿಸಲಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ಆರಂಭಿಕ ಹಂತದಲ್ಲಿ 7ನೇ ವೇತನ ಆಯೋಗ ಅನುಸಾರ ಮಾಸಿಕ 19,900ರೂ. ನಿಂದ 38,000 ರೂ. ವೇತನ ಇದೆ. 24 ಹುದ್ದೆಗಳಲ್ಲಿ ಸಾಮಾನ್ಯವರ್ಗಕ್ಕೆ 13 ಸ್ಥಾನ, ಎಸ್‍ಸಿಗೆ 2, ಇತರ ಹಿಂದುಳಿದ ವರ್ಗಕ್ಕೆ 7, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 2 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಹುದ್ದೆ, ಸಂಖ್ಯೆ ವಿವರ1. ಜೂನಿಯರ್ ಸೆಕ್ರೇಟರಿಯೇಟ್ ಅಸಿಸ್ಟೆಂಟ್ (ಜನರಲ್ ಆ್ಯಂಡ್ ಎಸ್ ಆ್ಯಂಡ್ ಪಿ) – 122. ಜೂನಿಯರ್ ಸೆಕ್ರೇಟರಿಯೇಟ್ ಅಸಿಸ್ಟೆಂಟ್ (ಎï ಆ್ಯಂಡ್ ಎ) – 53. ಜೂನಿಯರ್ ಸ್ಟೆನೋಗ್ರ್ರಾಫರ್ (ಇಂಗ್ಲಿಷ್) – 7
ಶೈಕ್ಷಣಿಕ ಅರ್ಹತೆಪಿಯುಸಿ ಅಥವಾ ತತ್ಸಮಾನ ಶಿಕ್ಷಣ. ಪ್ರತಿ ನಿಮಿಷಕ್ಕೆ 35 ಇಂಗ್ಲಿಷ್ ಪದಗಳನ್ನು ಹಾಗೂ 30 ಹಿಂದಿ ಪದಗಳನ್ನು ಟೈಪ್ ಮಾಡುವ ಸಾಮಥ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅವಶ್ಯ. (ಅಪೇಕ್ಷಣೀಯ: ಕಲಾ, ವಿಜ್ಞಾನ, ಕಾಮರ್ಸ್ ಪದವಿ ಜತೆ ಎಂಎಸ್ ಆಫೀಸ್, ಎಂಎಸ್ ವರ್ಡ್, ಎಂಎಸ್ ಎಕ್ಸೆಲ್, ಪವರ್ ಪಾಯಿಂಟ್ ಹಾಗೂ ಇತರ ಕಂಪ್ಯೂಟರ್ ಜ್ಞಾನ )
ವಯೋಮಿತಿಸ್ಟೆನೋಗ್ರಾಫರ್ ಹುದ್ದೆಗೆ ಗರಿಷ್ಠ 28 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 28 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ1 ಮತ್ತು 2ನೇ ಹುದ್ದೆಗೆ ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಟೈಪ್‍ರೈಟಿಂಗ್ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ 2 ಪತ್ರಿಕೆಗಳಿರಲಿದ್ದು, ಮೊದಲ ಪತ್ರಿಕೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ 2ನೇ ಪತ್ರಿಕೆ ಬರೆಯಲು ಅವಕಾಶ. ಮೊದಲ ಪ್ರಶ್ನೆ ಪತ್ರಿಕೆಯು ಮೆಂಟಲ್ ಎಬಿಲಿಟಿ ಕುರಿತು ಹಾಗೂ 2ನೇ ಪತ್ರಿಕೆಯು ಸಾಮಾನ್ಯ ಜ್ಞಾನ ಹಾಗೈ ಇಂಗ್ಲಿಷ್ ಭಾಷೆಗಳ ಕುರಿತಾಗಿರುತ್ತದೆ. 3ನೇ ಹುದ್ದೆಗೆ ಓಪೆನ್ ಕಾಂಪಿಟೇಟೀವ್ ಪರೀಕ್ಷೆ / ಲಿಖಿತ ಪರೀಕ್ಷೆ ಜತೆ ಕಂಪ್ಯೂಟರ್ ಟೈಪಿಂಗ್ ಪರೀಕ್ಷೆ ಇರುತ್ತದೆ.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಹಾಗೂ ಸಿಎಸ್‍ಐಆರ್ ಸಿಬ್ಬಂದಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ಪಾವತಿಸಬೇಕು. ಆನ್‍ಲೈನ್ ಪಾವತಿ ಮಾತ್ರ ಸ್ವೀಕೃತ.
ಅರ್ಜಿ ಸಲ್ಲಿಸಲು ಕೊನೇ ದಿನ: 27.12.2020ಅಧಿಸೂಚನೆಗೆ:https://bit.ly/3gTfaUV
ಮಾಹಿತಿಗೆ:https://www.nal.res.in/en
ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ
ಎಸ್​ಎಸ್​ಎಲ್​ಸಿ, ಡಿಪ್ಲೋಮಾ, ಪದವೀಧರರಿಗೆ ಕೇಂದ್ರ ಸರ್ಕಾರದ 74 ಹುದ್ದೆಗಳಿಗೆ ಆಹ್ವಾನ
ಲೆದರ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ನಲ್ಲಿ 31 ಹುದ್ದೆಗಳಿಗೆ ನೇರ ಸಂದರ್ಶನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 7 =
Remember me
