ನ್ಯೂಯಾರ್ಕ್​:ಜಾನ್ಸ್​ನ್​ ಆ್ಯಂಡ್​ ಜಾನ್ಸ್​ನ್​ ಕಂಪೆನಿಯ ಪೌಡರ್​ ವಿರುದ್ಧ ಇದಾಗಲೇ ಹಲವಾರು ಕಡೆಗಳಲ್ಲಿ ಕೇಸು ದಾಖಲಾಗಿರುವ ಬೆನ್ನಲ್ಲೇ, ಆತಂಕದ ವರದಿಯೊಂದು ನ್ಯೂಯಾರ್ಕ್​ನಿಂದ ಬಂದಿದೆ. ಈ ಪೌಡರ್​ ಬಳಸುತ್ತಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬರು ಕ್ಯಾನ್ಸರ್​ಗೆ ತುತ್ತಾಗಿರುವುದಾಗಿ ವರದಿಯಾಗಿದೆ.
ಬ್ರೂಕ್ಲಿನ್​ ಎಂಬ ಮಹಿಳೆ ಹಾಗೂ ಅವರ ಪತಿ ಈ ಬೇಬಿ ಪೌಡರ್​ ಬಳಸುತ್ತಿದ್ದ ಕಾರಣ, ಕ್ಯಾನ್ಸರ್​ಗೆ ತುತ್ತಾಗಿರುವುದಾಗಿ ಆರೋಪ ಬಂದಿದ್ದು, ಈ ಸಂಬಂಧ ಅವರ ಕಂಪೆನಿಯ ವಿರುದ್ಧ ಕೋರ್ಟ್​ನಲ್ಲಿ ಕೇಸ್​ ಹಾಕಿದ್ದರು.
ಆರೋಪಕ್ಕೆ ಸಂಬಂಧಿಸಿದಂತೆ 14 ವಾರಗಳ ವಿಚಾರಣೆ ನಡೆಸಿದ ಅಮೆರಿಕದ ಸುಪ್ರೀಂಕೋರ್ಟ್​, ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಅವರ ಪತಿಗೆ 120 ಮಿಲಿಯನ್​ ಡಾಲರ್​ (ಸುಮಾರು 890 ಕೋಟಿ ರೂಪಾಯಿ) ಪರಿಹಾರ ನೀಡುವಂತೆ ಆದೇಶಿಸಿದೆ.
ಸಂತ್ರಸ್ತರಿಗೆ 325 ಮಿಲಿಯನ್​ ಡಾಲರ್​ ನೀಡುವಂತೆ ಹೈಕೋರ್ಟ್​ ಆದೇಶಿಸಿದ್ದನ್ನು ಕಂಪೆನಿ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿತ್ತು ಹಾಗೂ ತನ್ನ ವಿರುದ್ಧ ವೃಥಾ ಆರೋಪ ಮಾಡಲಾಗಿದೆ, ಅರ್ಜಿದಾರರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಕಂಪೆನಿ ವಾದಿಸಿತ್ತು.
ಇದನ್ನೂ ಓದಿ:ಪ್ರಯೋಗಾಲಯದಲ್ಲೇ ತಯಾರಾಯ್ತು ವಜ್ರ, ಇನ್ನು ನಿಸರ್ಗದಲ್ಲಿ ಹುಡುಕೋದೇ ಬೇಡ!
ಆದರೆ ಆರೋಪ ನಿರಾಧಾರ ಎನ್ನುವುದನ್ನು ಸುಪ್ರೀಂಕೋರ್ಟ್​ ತಳ್ಳಿಹಾಕಿದೆ. ಕ್ಯಾನ್ಸರ್​ನಂಥ ಮಾರಕ ರೋಗಕ್ಕೆ ತುತ್ತಾಗಿರುವುದು ವೃಥಾ ಆರೋಪವಲ್ಲ. ಹೈಕೋರ್ಟ್​ ಎಲ್ಲ ರೀತಿಯ ಸತ್ಯಾಸತ್ಯತೆಗಳನ್ನು ಪರಿಶೀಲಿಸಿಯೇ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್​ ತೀರ್ಪನ್ನು ರದ್ದು ಮಾಡಲಾಗದು ಎಂದಿದೆ.
ಆದರೆ 325 ಮಿಲಿಯನ್​ ಡಾಲರ್​ ಪರಿಹಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪರಿಹಾರದ ಮೊತ್ತವನ್ನು ಕಡಿಮೆ ಮಾಡಲಾಗುವುದು ಎಂದು ಹೇಳಿದ ನ್ಯಾಯಮೂರ್ತಿಗಳು 120 ಮಿಲಿಯನ್​ ಡಾಲರ್​ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.
ಮಾತ್ರವಲ್ಲದೇ ಮಾರುಕಟ್ಟೆಯಲ್ಲಿ ಅಧಿಕ ಪಾಲು ಮತ್ತು ಲಾಭವನ್ನು ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಜಾನ್​ಸನ್​ ಆ್ಯಂಡ್​ ಜಾನ್​ಸನ್​ ಕಂಪೆನಿಯು ಆರೋಗ್ಯಕ್ಕೆ ಅಪಾಯ ಎನ್ನುವಂಥ ಅಂಶಗಳನ್ನು ಬಳಸುತ್ತಿರುವುದು ದುರದೃಷ್ಟಕರ ಎಂದು ಕೋರ್ಟ್​ ಹೇಳಿದೆ.
ಈ ಪೌಡರ್​ನಿಂದ ಅಂಡಾಂಶಯದ ​ ಕ್ಯಾನ್ಸರ್​ಗೆ ಕಾರಣವಾಗಿದೆ ಎಂದು ಕ್ಯಾಲಿಫೋರ್ನಿಯಾದ ಮಹಿಳೆ 417 ಮಿಲಿಯನ್​ ಡಾಲರ್​ ಪರಿಹಾಕೋರಿ ಕಂಪನಿ ವಿರುದ್ಧ ಈ ಹಿಂದೆ ಮೊಕದ್ದಮೆ ಹೂಡಿದ್ದರು.ಇನ್ನು ಈ ಕಂಪನಿಯ ಶಾಂಪೂವಿನಲ್ಲಿ ಕೂಡ ಕ್ಯಾನ್ಸರ್​ಕಾರಕ ಫಾರ್ಮಲೆಹೈಡ್​ ಎಂಬ ರಾಸಾಯನಿಕ ವಿದೆ ಎಂಬ ಆರೋಪ ಕೇಳಿಬಂದಿತ್ತು.
ಮದ್ವೆಯಾಗಲು ‘ಎಸ್’​ ಹುಡುಗೀನ್ನ ಹುಡುಕುತ್ತಿದ್ದಾನೀತ- ಮೂರು ಹೆಂಡ್ತಿಯರೂ ನೀಡ್ತಿದ್ದಾರೆ ಸಾಥ್​!

ಕಾಂಗ್ರೆಸ್‌ ಮುಖಂಡನ ಪತ್ನಿ ಜತೆ ಇನ್ನೋರ್ವ ಕಾಂಗ್ರೆಸ್‌ ಮುಖಂಡ ಪರಾರಿ! ಬಯಲಾಯ್ತು ಸತ್ಯ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 5 =
Remember me
