ಲಖನೌ:ಇಡೀ ದೇಶವೇ ಇಂದು ಲಖನೌ ಸಿಬಿಐ ವಿಶೇಷ ಕೋರ್ಟ್​ನತ್ತ ಗಮನ ನೆಟ್ಟಿತ್ತು. ಎಲ್ಲರ ಕಣ್ಣು, 28 ವರ್ಷಗಳಷ್ಟು ಹಳೆಯ ಬಾಬರಿ ಮಸೀದಿಯ ತೀರ್ಪು ನೀಡುವ ನ್ಯಾಯಾಧೀಶ ಎಸ್.ಕೆ. ಯಾದವ್ ಅವರ ಮೇಲಿತ್ತು.
ಈ ಪ್ರಕರಣದ ಎಲ್ಲಾ 32 ಆರೋಪಿಗಳನ್ನೂ ಖುಲಾಸೆ ಮಾಡಿ ಆದೇಶ ಹೊರಡಿಸಿರುವ ಈ ನ್ಯಾಯಾಧೀಶರ ಕುರಿತಾದ ಒಂದು ಕುತೂಹಲದ ಮಾಹಿತಿ ಇದೆ.ಅದೇನೆಂದರೆ ನ್ಯಾಯಾಧೀಶ ಯಾದವ್​ ಅವರ ಕೊನೆಯ ಅಧಿಕಾರದ ದಿನವಿದು. ಲಖನೌ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಕೊನೆಯ ದಿನದಿಂದು ಐತಿಹಾಸಿಕ ತೀರ್ಪು ಪ್ರಕಟಿಸಿರುವ ಇವರು ಇಂದು ನಿವೃತ್ತರಾಗಲಿದ್ದಾರೆ.
ವಿಶೇಷ ಎಂದರೆ, ಎಸ್​.ಕೆ.ಯಾದವ್​ ಅವರ ನಿವೃತ್ತಿ ಕಳೆದ ವರ್ಷವೇ ಅಂದರೆ 2019ರಲ್ಲಿಯೇ ಆಗಿದೆ. 28 ವರ್ಷಗಳಿಂದ ಹಲವಾರು ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದ್ದಾರೆ. 2017ರಲ್ಲಿ ಎಸ್​.ಕೆ.ಯಾದವ್​ ಅವರು ವಿಚಾರಣೆ ಕೈಗೆತ್ತಿಕೊಂಡಿದ್ದರು.
ಇನ್ನೇನು ವಾದ-ಪ್ರತಿವಾದ ಮುಗಿದು ಅಂತಿಮ ಹಂತ ತಲುಪಿತ್ತು. ಈ ವೇಳೆಗಾಗಲೇ ಯಾದವ್​ ಅವರು ನಿವೃತ್ತರಾದರು. ಆದರೆ ಈ ವಿವಾದ ಬಹು ಚರ್ಚಿತವಾಗಿಯೂ, ಬಹಳ ವಿವಾದಾತ್ಮಕವಾಗಿಯೂ ಹಾಗೂ ತೀರಾ ಹಳೆಯದಾಗಿರುವ ಇರುವ ಹಿನ್ನೆಲೆಯಲ್ಲಿ ಮತ್ತೊಬ್ಬ ನ್ಯಾಯಾಧೀಶರು ಇದನ್ನು ಕೈಗೆತ್ತಿಕೊಂಡರೆ ಅವರು ಪುನಃ ಆರಂಭದಿಂದ ವಿಚಾರಣೆ ಶುರು ಮಾಡಬೇಕಾಗಿತ್ತು. ಹೀಗಾದಲ್ಲಿ ಪ್ರಕರಣದ ವಿಚಾರಣೆ ಇನ್ನಷ್ಟು ವರ್ಷ ವಿಳಂಬವಾಗುವ ಸಾಧ್ಯತೆ ಇತ್ತು.
ಇದನ್ನೂ ಓದಿ:ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳು ನಿರ್ದೋಷಿಗಳು
ಹೈಪ್ರೊಫೈಲ್​ ಪ್ರಕರಣವಾಗಿರುವ ಇದನ್ನು ಮುಗಿಸಲು ಸುಪ್ರೀಂಕೋರ್ಟ್​ ಒಂದು ವರ್ಷ ಹೆಚ್ಚುವರಿ ಅವಧಿಯನ್ನು ನ್ಯಾಯಾಧೀಶ ಯಾದವ್​ ಅವರಿಗೆ ನೀಡುವ ಮೂಲಕ ಅವರ ಅಧಿಕಾರಾವಧಿಯನ್ನು ಎರಡು ಬಾರಿ ವಿಸ್ತರಣೆ ಮಾಡಿತು. ಆರು ತಿಂಗಳಿಗೊಮ್ಮೆಯಂತೆ ಎರಡು ಬಾರಿ ಇವರ ಅಧಿಕಾರದ ಅವಧಿಯನ್ನು ಮುಂದಕ್ಕೆ ಹಾಕಲಾಯಿತು.
ದಿನನಿತ್ಯದ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಸುವ ಮೂಲಕ ವರ್ಷದೊಳಗೆ ಕಡ್ಡಾಯವಾಗಿ ಈ ಪ್ರಕರಣದ ಅಂತಿಮ ತೀರ್ಪು ನೀಡುವಂತೆ ಸುಪ್ರೀಂಕೋರ್ಟ್​ ಯಾದವ್​ ಅವರಿಗೆ ನಿರ್ದೇಶಿಸಿತ್ತು.
ಈ ನಿರ್ದೇಶನದ ಹಿನ್ನೆಲೆಯಲ್ಲಿ ಪ್ರತಿದಿನವೂ  ವರ್ಷಪೂರ್ತಿ ವಿಚಾರಣೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಇಂದು ತೀರ್ಪು ಪ್ರಕಟಿಸಿದ್ದಾರೆ.
ಇನ್ಮುಂದೆ ಈ ದೇಶದಲ್ಲಿ ಗೋಹತ್ಯೆ ಮಾಡುವಂತಿಲ್ಲ: ಜಾರಿಯಾಗಲಿದೆ ಹೊಸ ಕಾನೂನು

ಅಕ್ಟೋಬರ್​ನಲ್ಲಿ 10 ದಿನಗಳು ಬ್ಯಾಂಕ್​ಗೆ ರಜೆ: ಇಲ್ಲಿದೆ ಮಾಹಿತಿ…

ವಂಚನೆ ತಪ್ಪಿಸಲು ನಾಳೆಯಿಂದ ಡೆಬಿಟ್​-ಕ್ರೆಡಿಟ್​ ಕಾರ್ಡ್​ ಹೊಸ ರೂಲ್ಸ್​: ಏನಿದೆ ಇದರಲ್ಲಿ?

ಇನ್ನೊಂದು ನಿರ್ಭಯಾ ಕೇಸ್​: ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ ಎಸ್​ಐಟಿ ತನಿಖೆಗೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − four =
Remember me
