ನವದೆಹಲಿ:ದೇಶದ 15ನೇ ರಾಷ್ಟ್ರಪತಿಯಾಗಿ, ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಬುಡಕಟ್ಟು ಜನಾಂಗದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಡೆದಿರುವ ಇವರು, ಎರಡನೆಯ ಮಹಿಳಾ ರಾಷ್ಟ್ರಪತಿ ಎನಿಸಿದ್ದಾರೆ.
ಅಷ್ಟಕ್ಕೂ ಕುತೂಹಲ ಎನ್ನುವ ಅಂಶವೊಂದು ಭಾರತದ ರಾಷ್ಟ್ರಪತಿಯ ಸ್ಥಾನಕ್ಕಿದೆ. ಅದು ಪ್ರಮಾಣ ವಚನ ಸ್ವೀಕರಿಸುವ ದಿನದ ಕುರಿತು. 1977ರಿಂದಲೂ ಇದೇ ದಿನ ಅಂದರೆ ಜುಲೈ 25ರಂದೇ ಪ್ರಮಾಣ ವಚನವನ್ನು ಭಾರತದ ರಾಷ್ಟ್ರಪತಿಗಳು ಸ್ವೀಕರಿಸುತ್ತಾರೆ.
ಇದು ಕುತೂಹಲದ ಅಂಶವಾದರೆ ಇದಕ್ಕೇನು ನಿಯಮವಾಗಲಿ ಅಥವಾ ಇಂದೇ ಪ್ರಮಾಣವಚನ ಸ್ವೀಕರಿಸಬೇಕು ಎಂಬ ಕಾನೂನೇನೂ ಇಲ್ಲ. ಯಾವುದೇ ಲಿಖಿತ ನಿಯಮಗಳೂ ಇಲ್ಲ. ಆದರೆ 1977ರಿಂದಲೂ ಇದೇ ದಿನವನ್ನು ವಿಶೇಷ ದಿನವೆಂದು ಪರಿಗಣಿಸಲಾಗುತ್ತಿದೆ.
ಮೊದಲೇ ಹೇಳಿದ ಹಾಗೆ ಜುಲೈ 25ರ ನಂಟು ಶುರುವಾಗಿದ್ದು 1977ರಲ್ಲಿ. ಅಂದು ಭಾರತದ 6ನೇ ರಾಷ್ಟ್ರಪತಿಯಾಗಿ ನೀಲಂ ಸಂಜೀವ ರೆಡ್ಡಿ ಅಧಿಕಾರ ಸ್ವೀಕರಿಸಿದ್ದರು. ತದನಂತರ ರಾಷ್ಟ್ರಪತಿ ಹುದ್ದೆ ಏರಿದ ಗಿಯಾನಿ ಜೈಲ್ ಸಿಂಗ್, ಆರ್.ವೆಂಕಟರಾಮನ್, ಶಂಕರ್ ದಯಾಳ್ ಶರ್ಮಾ, ಕೆ.ಆರ್.ನಾರಾಯಣನ್, ಎ.ಪಿ.ಜೆ.ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಮತ್ತು ರಾಮನಾಥ್ ಕೋವಿಂದ್ ಅವರು ಕೂಡ ಜುಲೂ 25ರಂದೇ ರಾಷ್ಟ್ರಪತಿಗಳಾಗಿ ಅಧಿಕಾರ ಸ್ವೀಕರಿಸಿದರು.
ಅದಕ್ಕೂ ಮುನ್ನ ಬೇರೆ ಬೇರೆ ದಿನಾಂಕಗಳಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಾಗುತ್ತಿತ್ತು. ಭಾರತದ ಮೊದಲ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಬಾಬು ರಾಜೇಂದ್ರ ಪ್ರಸಾದ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದು 1950 ಜನವರಿ 25 ರಂದು. ಅವರ ನಂತರ ಈ ಹುದ್ದೆ ಏರಿದ ಸರ್ವಪಲ್ಲಿ ರಾಧಾಕೃಷ್ಣನ್, ಝಾಕಿರ್ ಹುಸೇನ್ ಮತ್ತು ಫಕ್ರುದ್ದೀನ್ ಆಲಿ ಅಹ್ಮದ್ ಅವರು ಬೇರೆ ಬೇರೆ ದಿನಾಂಕಗಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.(ಏಜೆನ್ಸೀಸ್​)
ದೇಶದ ಮೊದಲ ಪ್ರಜೆಯಾಗಿ ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು: ಸಿಜೆಐ ಪ್ರಮಾಣ ವಚನ ಬೋಧನೆ

VIDEO: ‘ಹೆಜ್ಜೆ ಇಟ್ಟಿಹಳು ದ್ರೌಪದಿ ರಾಷ್ಟ್ರಪತಿಯ ಭವನದಲಿ…’: ನೂತನ ರಾಷ್ಟ್ರಪತಿಗೆ ಬಾಲಕಿಯಿಂದ ಯಕ್ಷಗಾನ ನಮನ…

VIDEO: ಇಂದು ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು- ಸಂಘರ್ಷದಿಂದ ಶಿಖರದವರೆಗೆ… ಪುಸ್ತಕ ಬರೆದ 13ರ ಬಾಲಕಿ,

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + thirteen =
Remember me
