ಮುಂಬೈ: ಜಿಮ್​ನಲ್ಲಿ ವರ್ಕೌಟ್​ ಮಾಡುವ ವೇಳೆ ಚಿಕ್ಕವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಸಾಗಿದೆ. ನಟ ಪುನೀತ್​ ರಾಜ್​ಕುಮಾರ್​ ಅವರ ನಿಧನದ ಬಳಿಕ ಅತಿಯಾದ ವರ್ಕೌಟ್​ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವ ನಡುವೆಯೇ ಹದಿಹರೆಯದವರು ಜೀವ ಕಳೆದುಕೊಳ್ಳುತ್ತಿದ್ದಾರೆ.
ಇದೀಗ ಅವರ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದ್ದಾರೆ ಸಾಗರ್ ಪಾಂಡೆ. ಜ್ಯೂನಿಯರ್​ ಸಲ್ಮಾನ್​ ಖಾನ್​ ಎಂದೇ ಪ್ರಸಿದ್ಧಿ ಪಡೆದಿರುವ ಸಾಗರ್​ ಪಾಂಡೆ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯ ಸ್ತಂಭನವಾಗಿ ಪ್ರಾಣ ಬಿಟ್ಟಿದ್ದಾರೆ. ಇವರಿಗೆ 50 ವರ್ಷ ವಯಸ್ಸಾಗಿತ್ತು.
ಸಾಗರ್​ ಪಾಂಡೆ ಅವರು, ಸಲ್ಮಾನ್ ಖಾನ್ ಅವರ ಸಿನಿಮಾಗಳಲ್ಲಿ ಡೂಪ್ ಆಗಿ ಅಭಿನಯಿಸುತ್ತಿದ್ದರು. ಭಜರಂಗಿ ಭಾಯಿಜಾನ್‌ ಸಿನಿಮಾ ಸೇರಿದಂತೆ ಸುಮಾರು 50 ಸಿನಿಮಾಗಳಲ್ಲಿ ಡೂಪ್ ಆಗಿದ್ದರು.
ಜಿಮ್‌ನಲ್ಲಿ ವರ್ಕೌಟ್​ ಮಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಮುಂಬೈನ ಜೋಗೇಶ್ವರಿ ಪೂರ್ವದಲ್ಲಿರುವ ಹಿಂದೂ ಹೃದಯ್ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಟ್ರಾಮಾ ಕೇರ್ ಮುನ್ಸಿಪಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದರು.

ಇವರ ಸಾವಿನ ಕುರಿತು ಹಲವರು ಸಂತಾಪ ಸೂಚಿಸಿದ್ದಾರೆ. ಕಬೀರ್ ಖಾನ್ ನಿರ್ದೇಶನದ 2015ರ ಭಜರಂಗಿ ಭಾಯಿಜಾನ್ ಸೆಟ್‌ನ ಥ್ರೋಬ್ಯಾಕ್ ಚಿತ್ರವನ್ನು ಸಲ್ಮಾನ್ ಹಂಚಿಕೊಂಡು ರೆಸ್ಟ್ ಇನ್ ಪೀಸ್ ಎಂದು ಸಂತಾಪ ಸೂಚಿಸಿದ್ದಾರೆ. ಸಾಗರ್ ಪಾಂಡೆ ಅವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ವರ್ಕೌಟ್​ ಮಾಡುವಾಗ ಹೃದಯಸ್ತಂಭನವಾಗಿ  ಸ್ಟ್ಯಾಂಡ್-ಅಪ್​ ಕಾಮಿಡಿಯನ್​ ಹಾಗೂ ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ಮೃತಪಟ್ಟಿದ್ದರು.(ಏಜೆನ್ಸೀಸ್​)
ಅಪ್ಪನಿಗಾಗಿ ನನ್ನನ್ನೇಕೆ ವಿರೋಧಿಸುತ್ತೀರಿ? ಜಮೀರ್ ಪುತ್ರನ ಪ್ರಶ್ನೆ- ನಾಡಗೀತೆಗಾಗಿ ಸಿಎಂಗೆ ಹೀಗೊಂದು ಮನವಿ…
ಅವರಿಗೆ ಜೀವಾವಧಿ ಶಿಕ್ಷೆ ಆಗುವವರೆಗೂ ನನ್ನ ಅಂತಿಮ ವಿಧಿವಿಧಾನ ಮಾಡ್ಬೇಡಿ: ಗ್ರಾಪಂ ಸದಸ್ಯನ ಪತ್ನಿ ಸಾವಿಗೆ ಪೊಲೀಸರು ಕಾರಣವೆ?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:fifteen + one =
Remember me
