ಬೆಂಗಳೂರು:400 ವರ್ಷಗಳ ನಂತರ ನಿನ್ನೆ (ಸೋಮವಾರ-ಡಿ.21) ಆಕಾಶದಲ್ಲಿ ನಡೆದ ಅಚ್ಚರಿಯನ್ನು ಬಹುತೇಕ ಮಂದಿ ವೀಕ್ಷಣೆ ಮಾಡುತ್ತೀರಿ. ಅದು ಗುರು ಮತ್ತು ಶನಿಯ ‘ಮಹಾ ಸಂಯೋಗ’. ಈ ಎರಡೂ ಗ್ರಹಗಳು ಅತ್ಯಂತ ಸಮೀಪ ಬಂದಿರುವ ದೃಶ್ಯವಿದು.
ಎರಡು ಪ್ರಕಾಶಮಾನವಾದ ಗ್ರಹಗಳು ಒಟ್ಟಿಗೇ ಗೋಚರಿಸಿದ್ದು ಜನಸಾಮಾನ್ಯರಿಗೆ ಸಾಮಾನ್ಯ ಎನ್ನಿಸಿದ್ದರೂ ಖಗೋಳವಿಜ್ಞಾನಿಗಳಿಗೆ ಇದು ಅತ್ಯಂತ ಅಪರೂಪದ ವಿದ್ಯಮಾನವಾಗಿತ್ತು. ಗುರು ಮತ್ತು ಶನಿಗ್ರಹಗಳು ಅತ್ಯಂತ ಸಮೀಪಕ್ಕೆ ಬಂದಿದ್ದು, ಇದನ್ನು ವಿಜ್ಞಾನಿಗಳು ‘ಮಹಾ ಸಂಯೋಗ’ ಎಂದೇ ಕರೆದಿದ್ದಾರೆ.
ಈ ಎರಡೂ ಗ್ರಹಗಳು ಡಿಸೆಂಬರ್ 13ರಿಂದಲೇ ಸಮೀಪಿಸುತ್ತಿವೆ. ಅದರ ಅಂತರ ಇಂದು ಅತ್ಯಂತ ಕಡಿಮೆಯಾಗಿದ್ದು, ಅಂಥ ಅಪೂರ್ವ ನೋಟವನ್ನು ಬಹುತೇಕರು ಕಣ್ತುಂಬಿಸಿಕೊಂಡರು. ಇಂದಿನಿಂದ ಮತ್ತೆ ಈ ಎರಡೂ ಗ್ರಹಗಳು ದೂರ ದೂರ ಸರಿಯಲು ಆರಂಭಿಸುತ್ತವೆ.ಇಂಥದ್ದೊಂದು ಅಪೂರ್ವದ ದೃಶ್ಯದ ಫೋಟೋವನ್ನು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಬಿಡುಗಡೆ ಮಾಡಿದೆ. ಇದರ ಜತೆಜತೆಗೆ ಈ ಗುರು-ಶನಿಯ ಸಂಯೋಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗಿದ್ದು, ತಾವು ಸೆರೆ ಹಿಡಿದಿರುವ ದೃಶ್ಯಗಳನ್ನು ಜನರು ಶೇರ್​ ಮಾಡತೊಡಗಿದ್ದಾರೆ.
Skywatchers, you're in for a once-in-a-lifetime treat! Jupiter & Saturn are doing a planetary dance that will result in the Great Conjunction on Dec 21, just after sunset. Find out:
🤩 When and where to look up📷 How to photograph the conjunction
Visit:https://t.co/SdQSLex2Expic.twitter.com/DkaB5XyO9B
— NASA (@NASA)December 20, 2020

ಏನಿದು ಸಂಯೋಗ?ಗುರು ಮತ್ತು ಶನಿ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುತ್ತಿರುತ್ತವೆ. ಆದ್ದರಿಂದ ಎರಡೂ ಗ್ರಹಗಳು ಇದೀಗ ಪರಸ್ಪರ ಹಾದುಹೋಗಲಿವೆ. ಈ ಎರಡೂ ಗ್ರಹಗಳು ಪ್ರತಿ 20 ವರ್ಷಗಳಿಗೆ ಒಮ್ಮೆ ಹೀಗೆ ಪರಸ್ಪರ ಹಾದುಹೋಗಲಿವೆ. ಆದರೆ, ಈ ಬಾರಿ ಗುರು ಮತ್ತು ಶನಿ ಅತ್ಯಂತ ಹತ್ತಿರದಲ್ಲಿ ಭೂಮಿಯೂ ಹಾದುಹೋಗಲಿರುವ ಕಾರಣ, ಇಂಥದ್ದೊಂದು ವಿದ್ಯಮಾನ ನಡೆದಿದೆ ಎಂದಿರುವ ‘ನಾಸಾ’ದ ವಿಜ್ಞಾನಿಗಳು, ಮತ್ತೆ ಇಂಥದ್ದೊಂದು ದೃಶ್ಯಕ್ಕಾಗಿ 60 ವರ್ಷ ಕಾಯಬೇಕು ಎಂದಿದ್ದಾರೆ.
TOMORROW Jupiter and Saturn will be at their closest separation in the sky since 1623 at 0.1° apart. 🪐😘🌟Credit:@physicsJpic.twitter.com/NLgq6NIMdx
— venus 🧜‍♀️ (@VENUS__6942)December 21, 2020

1610ರಲ್ಲಿ ಗೆಲಿಲಿಯೊ ಗೆಲಿಲಿ ಅವರು ತಮ್ಮ ದೂರದರ್ಶಕದ ಮೂಲಕ ಗುರುಗ್ರಹ ಮತ್ತು ಅದರ ನಾಲ್ಕು ಚಂದ್ರಗಳನ್ನು ಗುರುತಿಸಿದ್ದರು. 1623ರಲ್ಲಿ ಮತ್ತೊಮ್ಮೆ ಗುರುಗ್ರಹವನ್ನು ವೀಕ್ಷಿಸುವಾಗ ಶನಿಗ್ರಹವು ಅತ್ಯಂತ ಸಮೀಪದಲ್ಲಿ ಗೋಚರಿಸಿತ್ತು. ಆನಂತರ ಇಲ್ಲಿಯವರೆಗೆ ಇಂತಹ ವಿದ್ಯಮಾನ ಘಟಿಸಿಲ್ಲ.
ಬಸ್ ಒಳಗೆ ಆಡುತ್ತಿದ್ದ ಬಾಲಕಿಯ ರೇಪ್​ ಮಾಡಿ ಗೋಣಿ ಚೀಲದಲ್ಲಿ ತುಂಬಿಟ್ಟ ಚಾಲಕ!

ಕೋರ್ಟ್‍ನಲ್ಲಿವೆ ವಿವಿಧ ಹುದ್ದೆಗಳು: ಎಸ್​ಎಸ್​ಎಲ್​ಸಿ ಪಾಸ್​ ಆದವರಿಗೂ ಇವೆ ಅವಕಾಶ

ಲಂಡನ್​ ವೈರಸ್​ನಿಂದಾಗಿ ಮುಂಬೈನಂತೆ ಇಲ್ಲೂ ನೈಟ್​ ಕರ್ಫ್ಯೂ ಇರತ್ತಾ? ಸಿಎಂ ಏನೆಂದ್ರು ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 6 =
Remember me
