ವಿಶಾಖಪಟ್ಟಣ (ಆಂಧ್ರಪ್ರದೇಶ):ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಯು.ಯು ಲಲಿತ್​​ ಅವರು ಮತ್ತೊಮ್ಮೆ ಮದುಮಗ ಆಗಿದ್ದಾರೆ. ತಮ್ಮ ಪತ್ನಿಯ ಜತೆ ಮತ್ತೊಮ್ಮೆ ವಿವಾಹವಾಗಿದ್ದಾರೆ. ಆಂಧ್ರಪ್ರದೇಶದ ಅರಕು ಕಣಿವೆ ಸೌಂದರ್ಯ ವೀಕ್ಷಣೆ ಮಾಡಲು ಬಂದಿದ್ದ ನ್ಯಾಯಮೂರ್ತಿಗಳು ಇಲ್ಲಿಯ ಸಂಪ್ರದಾಯಕ್ಕೆ ಮನಸೋತು ಪತ್ನಿ ಅಮಿತಾ ಅವರ ಜತೆ ಇನ್ನೊಮ್ಮೆ ಬುಡಕಟ್ಟು ಸಮುದಾಯದ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ಈ ದಂಪತಿ ಅರಕು ಕಣಿವೆಯ ಸೌಂದರ್ಯ ವೀಕ್ಷಣೆಗೆ ವಿಶಾಖಪಟ್ಟಣಕ್ಕೆ ಬಂದಿದ್ದರು. ಇವರ ಜತೆ ಆಂಧ್ರಪ್ರದೇಶ ಹೈಕೋರ್ಟ್​​​ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಅಮಾನುಲ್ಲಾ ಖಾನ್​ ಸಹ ಸಾಥ್​ ನೀಡಿದ್ದರು.
ಈ ಸಂದರ್ಭದಲ್ಲಿ ಬುಡಕಟ್ಟು ಸಂಪ್ರದಾಯಕ್ಕೆ ಅವರು ಮನಸೋತು ಮತ್ತೆ ಮದುವೆಯಾಗಿದ್ದಾರೆ. ಪೆಡಲಬೂಡು ಸರಪಂಚ್ ಪೆಟ್ಟೇಲಿ ದಾಸುಬಾಬು ನೇತೃತ್ವದಲ್ಲಿ ವಿವಾಹ ನೆರವೇರಿತು. ಬುಡಕಟ್ಟು ಸಮುದಾಯದ ಆತಿಥ್ಯ ಉತ್ತಮವಾಗಿದ್ದು, ವಿವಾಹ ಸಂಭ್ರಮ ಸಂತಸ ತಂದಿದೆ ಎಂದು ನ್ಯಾಯಮೂರ್ತಿ ಲಲಿತ್ ಹೇಳಿದರು.
ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಇಡಿ ಶಾಕ್​ ನೀಡಿದ ಬೆನ್ನಲ್ಲೇ ಸೋನಿಯಾಗೆ ಕೋವಿಡ್​ ಪಾಸಿಟಿವ್​!

ಅವನೂ ಬೇಡ… ಅವಳೂ ಬೇಡ… ಎಂದು ತನ್ನನ್ನು ತಾನೇ ಮದುವೆಯಾಗಿ ಹನಿಮೂನ್​ಗೂ ರೆಡಿಯಾದ ಯುವತಿ!

ವಿದ್ಯಾರ್ಥಿನಿಯರಿಂದ ಮತ್ತೆ ಹಿಜಾಬ್​ ಕ್ಯಾತೆ: ಮನವಿಗೂ ಸ್ಪಂದಿಸದ ಉಪ್ಪಿನಂಗಡಿಯ ಆರು ಮಂದಿ ಸಸ್ಪೆಂಡ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + ten =
Remember me
