ತಿರುವನಂತಪುರ:ಅದು 2010ರ ಜನವರಿ 3. ಛತ್ತೀಸಗಢ ಮೂಲದ ಜ್ಯೋತಿ ಬಿಎಸ್​ಇ ನರ್ಸಿಂಗ್​ ಓದುತ್ತಿದ್ದರು. ಕಾಲೇಜಿನ ಹಾಸ್ಟೆಲಿನಿಂದ ಅವರು ಬಸ್ಸಿನಲ್ಲಿ ಕೆಲಸ ನಿಮಿತ್ತ ಪ್ರಯಾಣ ಮಾಡುತ್ತಿದ್ದರು. ಅವರ ಮುಂದುಗಡೆಯ ಸೀಟಿಯಲ್ಲಿ ಕಿಟಕಿಯ ಪಕ್ಕ ವಿಕಾಸ್​ ಕುಳಿತಿದ್ದರು. ಇವರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಯುವ ಯೋಧ.
ಬಸ್ಸು ಚಲಿಸುತ್ತಿರುವ ವೇಳೆ ವಿಕಾಸ್​ ನಿದ್ದೆ ಮಾಡಿಬಿಟ್ಟರು. ನಿದ್ದೆ ಮಾಡುತ್ತಲೇ ಅವರ ತಲೆ ಕಿಟಕಿಯ ಹೊರಕ್ಕೆ ಹೋಯಿತು. ಬಸ್ಸು ವೇಗವಾಗಿ ಹೋಗುತ್ತಿತ್ತು. ಅಷ್ಟು ಹೊತ್ತಿಗಾಗಲೇ ಎದುರಿನಿಂದ ಟ್ರಕ್​ ಒಂದು ಬರುತ್ತಿತ್ತು. ಟ್ರಕ್​ ಚಾಲಕ ನಿಯಂತ್ರಣ ತಪ್ಪಿದ್ದ. ಅದು ಅಡ್ಡಾದಿಡ್ಡಿಯಾಗಿ ಬರುತ್ತಿತ್ತು.
ಇನ್ನೇನು ಆ ಟ್ರಕ್​ ಇವರು ಕುಳಿತಿದ್ದ ಬಸ್​ಅನ್ನು ಗುದ್ದುವುದರಲ್ಲಿತ್ತು. ಆದರೆ ವಿಕಾಸ್​ಗೆ ಇದ್ಯಾವುದರ ಅರಿವೇ ಇರಲಿಲ್ಲ. ಇನ್ನೇನು ಟ್ರಕ್​ ಗುದ್ದಿದ್ದರೆ ಕಿಟಕಿಯ ಹೊರಕ್ಕೆ ತಲೆ ಹಾಕಿಕೊಂಡಿದ್ದ ವಿಕಾಸ್​ ಅವರ ಪ್ರಾಣಕ್ಕೇ ಸಂಚಕಾರ ಎದುರಾಗುತ್ತಿತ್ತು. ಹಿಂದೆ ಮುಂದೆ ಯೋಚಿಸದ ಜ್ಯೋತಿ ಅವರಿಗೆ ಈ ಅನಾಹುತದ ಅರಿವಾಗಿ ಕೂಡಲೇ ತಮ್ಮ ಸೀಟಿನಿಂದ ರಭಸದಲ್ಲಿ ಮುಂದಕ್ಕೆ ಹೋಗಿ ವಿಕಾಸ್​ ಅವರ ತಲೆಯನ್ನು ತಮ್ಮ ಕೈಯಿಂದ ಇತ್ತ ದೂಡಿದರು.
ಅಷ್ಟೊತ್ತಿಗಾಗಲೇ ಟ್ರಕ್​ ಇವರ ಕೈಯನ್ನೇ ಕಟ್​ ಮಾಡಿಬಿಟ್ಟಿತ್ತು, ಯೋಧನ ಪ್ರಾಣ ಉಳಿದಿತ್ತು. ನೋವಿನಿಂದ ಚೀರಾಡುತ್ತಿದ್ದ ಜ್ಯೋತಿ ಅವರನ್ನು ವಿಕಾಸ್​ ಅವರೇ ಆಸ್ಪತ್ರೆಗೆ ಕರೆದೊಯ್ದರೂ ಕೈ ಜೋಡಿಸಲು ಸಾಧ್ಯವಾಗಲಿಲ್ಲ. ಇದೇ ಘಟನೆ ಜ್ಯೋತಿ ಮತ್ತು ವಿಕಾಸ್​ ಅವರನ್ನು ಹತ್ತಿರ ಮಾಡಿಬಿಟ್ಟಿತು.
2011ರಲ್ಲಿ ಇವರಿಬ್ಬರೂ ಮದುವೆಯಾಗಿದ್ದು, ಕೇರಳದ ಸೊಸೆಯಾಗಿದ್ದಾರೆ. ಇವರಿಗೆ ಈಗ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಇದೇ ಜ್ಯೋತಿಯವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ ಕಾರಣ, ಡಿಸೆಂಬರ್ 10ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲಂಗೋಡ್ ಬ್ಲಾಕ್ ಪಂಚಾಯತ್‍ನ ಪಾಲತ್ತಲ್ಲ್ ಡಿವಿಷನ್ ಬಿಜೆಪಿ ಅಭ್ಯರ್ಥಿ. ದುರ್ಘಟನೆಯಲ್ಲಿ ಕೈಕಳೆದುಕೊಂಡ ನಂತರ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿರುವ ಜ್ಯೋತಿ, ಇದೀಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ನಾನು ಪ್ರಧಾನಿ ಮೋದಿಯವರ ರಾಜಕಾರಣದಿಂದ ಆಕರ್ಷಿತಳಾಗಿದ್ದೇನೆ. ಅಭ್ಯರ್ಥಿಯಾಗುವಂತೆ ಪಕ್ಷವೇ ನನ್ನನ್ನು ಕೆಳಿದಾಗ ಇಲ್ಲ ಎನ್ನಲು ನನ್ನಿಂದ ಸಾಧ್ಯವಾಗಲಿಲ್ಲ. ನನ್ನ ಮನೆಯವರಿಂದಲೂ ಬೆಂಬಲ ಸಿಗುತ್ತಿದೆ. ಇನ್ನು ಜನರಿಗೆ ಬಿಟ್ಟದ್ದು ಎಂದಿದ್ದಾರೆ.
ಕ್ಲಾಸ್​ರೂಂನಲ್ಲಿ ವಿವಾಹ ಪ್ರಕರಣಕ್ಕೆ ಟ್ವಿಸ್ಟ್​- ಮದ್ವೆಯಾಯ್ತು ಅಮಾನ್ಯ: ಮಗಳಿಗೆ ಮನೆಯಲ್ಲಿ ನೋ ಎಂಟ್ರಿ

ಸಂಸತ್ ಭವನದ ಶಂಕುಸ್ಥಾಪನೆ ನೆರವೇರಿಸಲು ಸುಪ್ರೀಂ ಅನುಮತಿ- ಆದರೂ ಕೇಂದ್ರಕ್ಕೆ ಹಿನ್ನಡೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen + 10 =
Remember me
