ಪುಣೆ:ಕಾಶಿ ಪೀಠದ ಉಭಯ ಜಗದ್ಗುರುಗಳ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಒಂದು ತಿಂಗಳ ತಪೋನುಷ್ಠಾನ ಮತ್ತು ಇಷ್ಟಲಿಂಗ ಮಹಾಪೂಜೆಯ ಮಂಗಲ ಕಾರ್ಯಕ್ರಮವು ಮಹಾರಾಷ್ಟ್ರದ ಪುಣೆ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು.
ಪ್ರತಿ ವರ್ಷದ ಪದ್ಧತಿಯಂತೆ, ಕಾಶಿ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಪುಣೆಯ ಚಿಂಚವಾಡ ಶಾಖಾ ಮಠದಲ್ಲಿ ಶ್ರಾವಣ ಮಾಸದ ಅನುಷ್ಠಾನ ಕೈಗೊಂಡಿದ್ದರು. ಕಿರಿಯ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸೊಲ್ಲಾಪುರದ ಸಿದ್ಧರಾಮೇಶ್ವರ ದೇವಾಲಯದ ಆವರಣದಲ್ಲಿ ಅನುಷ್ಠಾನ ಕೈಗೊಂಡಿದ್ದರು. ಉಭಯ ಜಗದ್ಗುರುಗಳ ಅನುಷ್ಠಾನ ಮಂಗಲವು ಪುಣೆಯ ಚಿಂಚವಾಡದಲ್ಲಿ ನಡೆಯಿತು.
ಸಮಾರಂಭಕ್ಕೂ ಮುನ್ನ ನೂತನ ಜಗದ್ಗುರುಗಳನ್ನು ಅಡ್ಡಪಲ್ಲಕ್ಕಿ ಮಹೋತ್ಸವದೊಂದಿಗೆ ಪುರಪ್ರವೇಶಕ್ಕೆ ಸ್ವಾಗತ ಮಾಡಲಾಯಿತು. ನಂತರ ಉಭಯ ಜಗದ್ಗುರುಗಳ ಸಾನಿಧ್ಯದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಸೇರಿದಂತೆ ವಿವಿಧ ಪ್ರಾಂತ್ಯದ 20ಕ್ಕೂ ಹೆಚ್ಚು ಶಿವಾಚಾರ್ಯರ ನೇತೃತ್ವದಲ್ಲಿ ಮಂಗಲ ಸಮಾರಂಭ ನಡೆಯಿತು.
ಕಾಶಿ ಜಗದ್ಗುರುಗಳು ಪ್ರತಿವರ್ಷ ನಡೆಸಿಕೊಂಡು ಬಂದ ಪದ್ಧತಿಯಂತೆ, ಈ ವರ್ಷವೂ ಶ್ರಾವಣ ಮಾಸದಲ್ಲಿ ತಮಗೆ ಬಂದ ಪಾದ ಕಾಣಿಕೆಯ ಒಟ್ಟು 16 ಲಕ್ಷ ರೂಪಾಯಿಗಳನ್ನು ಆ ಭಾಗದ ಬಡ ವಿದ್ಯಾರ್ಥಿಗಳ ಮಾಸಿಕ ವಿದ್ಯಾರ್ಥಿ ವೇತನಾ ನಿಧಿಗೆ ನೀಡಿ ಸಾಮಾಜಿಕ ಮತ್ತು ಶೈಕ್ಷಣಿಕ ಕಳಕಳಿ ಮೆರೆದರು.
ಬೆಂಗಳೂರಿನ ಈದ್ಗಾ ಮೈದಾನದಲ್ಲಿನ ಗಣೇಶೋತ್ಸವಕ್ಕೆ ಭಾರಿ ಹಿನ್ನಡೆ: ಎರಡೇ ಗಂಟೆಗಳಲ್ಲಿ ಸುಪ್ರೀಂನಿಂದ ಬಂತು ಈ ರೀತಿ ತೀರ್ಪು

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ- ಹೈಕೋರ್ಟ್​ನಿಂದ ಹೊರಟಿದೆ ಮಹತ್ವದ ತೀರ್ಪು- ಗೊಂದಲಕ್ಕೆ ತೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
