ಛತ್ತೀಸಗಢ: ಜೀವ ಯಾವಾಗ, ಯಾವ ರೂಪದಲ್ಲಿ ಹೋಗುತ್ತದೆ ಎಂದು ಹೇಳುವುದೇ ಕಷ್ಟ. ಎಷ್ಟೋ ಕಲಾವಿದರು ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿರುವಾಗಲೇ ಮೃತಪಟ್ಟಿದ್ದನ್ನು ಕೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬ ಕಬಡ್ಡಿ ಪ್ರೇಮಿ ಯುವಕ ಕಬಡ್ಡಿ ಆಡುತ್ತಲೇ ಪ್ರಾಣ ಬಿಟ್ಟಿದ್ದಾನೆ.
ಇಂಥದ್ದೊಂದು ನೋವಿನ ಸಂಗತಿ ನಡೆದಿರುವುದು ಛತ್ತೀಸಗಢ ಧಾಮ್‌ತಾರಿ ಜಿಲ್ಲೆಯ ಗೋಜಿ ಎಂಬ ಗ್ರಾಮದಲ್ಲಿ. ಪಂದ್ಯವಾಡುತ್ತಿರುವಾಗಲೇ 20ರ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಧಾಮ್‌ತಾರಿ ಜಿಲ್ಲೆಯ ಗೋಜಿ ಎಂಬ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಕೋಕಾಡಿ ಗ್ರಾಮದ ನರೇಂದ್ರ ಸಾಹು ಎನ್ನಲಾಗಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಳೆದ ಬುಧವಾರ ಅಂದರೆ ಜ.20ರ ರಾತ್ರಿ ಕಬಡ್ಡಿ ಪಂದ್ಯವೊಂದನ್ನು ಏರ್ಪಡಿಸಲಾಗಿತ್ತು. ಈ ವೇಳೆ ರೈಡರ್ ಆಗಿ ಎದುರಾಳಿಗಳ ಕೋರ್ಟ್‌ಗೆ ನರೇಂದ್ರ ಸಾಹು ಕಾಲಿರಿಸಿದ್ದ. ಇದೇ ಕ್ಷಣಗಳಲ್ಲಿ ಅವನನ್ನು ಟ್ಯಾಕಲ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಾಹು ಮುಗ್ಗರಿಸಿ ಬಿದ್ದುಬಿಟ್ಟ. ಎದುರಾಳಿ ಆಟಗಾರರು ಆತನ ಮೇಲೆರಗಿದ್ದರು. ಈ ವೇಳೆ ಪ್ರಜ್ಞೆ ಕಳೆದುಕೊಂಡ ಸಾಹು ಕುಸಿದುಬಿದ್ದ.
ಎಲ್ಲರೂ ಬಂದು ಗಾಬರಿಯಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಿದರು. ಅದರೇ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ. ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದು, ಮರಣೋತ್ತರ ಪರೀಕ್ಷೆಗೆ ಶವ ಕಳುಹಿಸಲಾಗಿದೆ.
ಮಕ್ಕಳಾಗಿಲ್ಲವೆಂದು ಮತ್ತೊಂದು ಮದ್ವೆಯಾದ್ರೆ ಮೊದಲಾಕೆಗೆ ಆರು ಹುಟ್ಟಿದವು- ಆಸ್ತಿ ವಿಭಾಗ ಹೇಗೆ?

ಮದುವೆಯಾಗುವ ಆಸೆ- ಆದರೆ ಈ ಒಂದು ಸಮಸ್ಯೆಯಿಂದ ಕುಗ್ಗಿಹೋಗಿದ್ದೇನೆ: ಪ್ಲೀಸ್ ಪರಿಹಾರ ಹೇಳಿ

ಶಿವಮೊಗ್ಗದಲ್ಲಿ ಭೀಕರ ದುರಂತಕ್ಕೆ ಎಂಟು ಬಲಿ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 4 =
Remember me
