ಕಾಬುಲ್:ಅಫ್ಘನಿಸ್ತಾನದಲ್ಲಿ ತಾಲಿಬಾನಿಗಳಿಂದ ನಡೆಯುತ್ತಿರುವ ದೌರ್ಜನ್ಯ ಹಾಗೂ ಅವರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಅಲ್ಲಿಯ ಪ್ರಜೆಗಳು ಹೆಣಗಾಡುತ್ತಿರುವ ರೀತಿಯನ್ನು ನೋಡಿದರೆ ಮನುಷ್ಯತ್ವ ಇರುವವರೆಲ್ಲರೂ ಯಾವ ಶತ್ರುವಿಗೂ ಇಂಥ ಸ್ಥಿತಿ ಬರದೇ ಇರಲಿ ಎಂದು ಅಂದುಕೊಳ್ಳುತ್ತಾರೆ.
ಜೀವವನ್ನು ರಕ್ಷಿಸಿಕೊಳ್ಳಲು ಇದಾಗಲೇ ಏನೇನೋ ಸಾಹಸ ಮಾಡಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಎಷ್ಟೋ ಪುರುಷರು ತಮ್ಮ ಹೆಂಡತಿ, ಮಕ್ಕಳ ಬಗ್ಗೆಯೂ ಯೋಚನೆ ಮಾಡದೇ ಓಡಿ ಹೋಗಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಮುಗಿಬಿದ್ದು ವಿಮಾನ ಏರುತ್ತಿರುವ ವಿಡಿಯೋಗಳನ್ನು ನೋಡಿದರೆ ಇದು ಸ್ಪಷ್ಟವಾಗಿ ತಿಳಿಯುತ್ತದೆ. ಏಕೆಂದರೆ ಇಲ್ಲಿರುವ ಶೆ.90ರಷ್ಟು ಮಂದಿ ಪುರುಷರೇ.
ಅದೇ ಇನ್ನೊಂದೆಡೆ ತಮ್ಮ ಮಕ್ಕಳ ಜೀವ ಉಳಿದರೆ ಸಾಕು ಎನ್ನುವಂತೆ ಅಮ್ಮಂದಿರು ಹಾಗೂ ಕೆಲವು ಅಪ್ಪಂದಿರು ಕಾಬೂಲ್‍ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಕ್ಷಣಾ ಗೋಡೆಯ ಸುತ್ತಲೂ ನಿಂತುಕೊಂಡು ಸಣ್ಣ ಮಕ್ಕಳನ್ನು ಗೋಡೆ ಆಚೆಗೆ ಎಸೆದು, ಅಲ್ಲಿರುವ ಅಮೆರಿಕ ಬ್ರಿಟನ್ ಯೋಧರಿಗೆ ಮಕ್ಕಳನ್ನು ಪೋಷಿಸಲು ಕೈ ಮುಗಿಯುತ್ತಿದ್ದಾರೆ. ಇಲ್ಲಿ ಮುಳ್ಳಿನ ಬೇಲಿ ಕೂಡ ಇದ್ದು, ಅದನ್ನೂ ಗಮನಿಸದ ಮಹಿಳೆಯರು ಹೇಗೋ ಮಕ್ಕಳ ಜೀವ ಉಳಿದರೆ ಸಾಕು ಎನ್ನುತ್ತಿದ್ದಾರೆ.
ಮಕ್ಕಳು ದೊಡ್ಡವರಿದ್ದರೆ ಅವರನ್ನು ಗೋಡೆಯ ಮೇಲೆ ಹತ್ತಿಸಿ, ಬ್ರಿಟನ್ ಯೋಧರಿಗೆ ಒಪ್ಪಿಸಿಕೊಳ್ಳಲು ಅಂಗಲಾಚುತ್ತಿದ್ದಾರೆ. ಮಕ್ಕಳನ್ನು ಪುನರ್ವಸತಿ ಶಿಬಿರಗಳಲ್ಲಿ ಜೋಪಾನ ಮಾಡುವಂತೆ ಯೋಧರನ್ನು ಬೇಡುತ್ತಿದ್ದಾರೆ.
ಈ ಬಗ್ಗೆ ನೋವು ತೋಡಿಕೊಂಡಿರುವ ಬ್ರಿಟನ್ ರಕ್ಷಣಾ ಸಚಿವ ಬೆನ್ ವ್ಯಾಲ್ಲೇಸ್, ‘ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ನಮ್ಮ ಯೋಧರು ಹಾಗೆಯೇ ಪಾಲಕರಿಂದ ಸ್ವೀಕರಿಸಿ, ಶಿಬಿರಗಳಲ್ಲಿ ಇರಿಸಿಕೊಳ್ಳುವುದು ಕಾನೂನುಬಾಹಿರ ಆಗುತ್ತದೆ. ಹಾಗಾಗಿ ಮಕ್ಕಳನ್ನು ಹಿಂದಿರುಗಿಸುತ್ತಿದ್ದೇವೆ” ಎಂದಿದ್ದಾರೆ. ಒಟ್ಟಿನಲ್ಲಿ ಇಲ್ಲಿಯ ಜೀವನ ಅಯೋಮಯವಾಗಿದೆ.
ತಾಲಿಬಾನ್‌ ಮುಖ್ಯಸ್ಥ ತರಬೇತಿ ಪಡೆದದ್ದು ಭಾರತೀಯ ಸೇನೆಯಲ್ಲಿ! ಸೇರಿದ್ದು ಹೇಗೆ? ಆಗ ಹೇಗಿದ್ದ?

ತಾಲಿಬಾನಿಗಳಿಗೆ ಹೆದರಿ ಜೀವ ಕಳೆದುಕೊಂಡ ವಿಶ್ವಖ್ಯಾತಿ ಫುಟ್ಬಾಲ್‌ ಆಟಗಾರ: ವಿಮಾನದಿಂದ ಬಿದ್ದು ಸಾವು!

VIDEO: ನಾವು ಬದಲಾಗಿದ್ದೇವೆ ಎಂದರು… ನಂಬಿ ಕಚೇರಿಗೆ ಹೋದೆ.. ಆದರೆ… ಕರಾಳ ಅನುಭವ ಬಿಚ್ಚಿಟ್ಟ ಪತ್ರಕರ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 14 =
Remember me
