ನವದೆಹಲಿ:ನೋಟ್‌ ಬ್ಯಾನ್‌ ಎಂದಾಕ್ಷಣ ಹಲವರ ತಲೆ ಗಿರ್‌ ಎನ್ನೋದು ಸಹಜ. 2016ರ ನವೆಂಬರ್‌ 8ರಂದು ನೋಟ್‌ ಬ್ಯಾನ್‌ ಆಗಿತ್ತು. ಇದಾಗಿ ಆರು ವರ್ಷ ಕಳೆದುಹೋದರೂ ಇಂದಿಗೂ ಇದರಿಂದ ಚೇತರಿಸಿಕೊಳ್ಳದವರು ಹಲವರು. ಅದರಲ್ಲಿಯೂ ಕಪ್ಪುಹಣ ಕೂಡಿಟ್ಟವರ ನಿದ್ದೆಗೆಡಿಸಿದ ದಿನವದು.
ಇದೀಗ ಈ ಮಹತ್ವದ ನಿರ್ಧಾರದ ಬಳಿಕ ಮತ್ತೊಂದು ಹೆಜ್ಜೆಯನ್ನು ಇಡಲು ರಿಸರ್ವ್‌ ಬ್ಯಾಂಕ್ ತಯಾರಿ ನಡೆಸಿದೆ ಎಂದು ವರದಿಯಾಗಿದೆ. ಅದೇನೆಂದರೆ ಇನ್ಮುಂದೆ ನೋಟುಗಳಲ್ಲಿ ಗಾಂಧಿಯ ಫೋಟೋವನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಗಾಂಧಿಯ ಬದಲು ನೋಟುಗಳಲ್ಲಿ ಶೀಘ್ರದಲ್ಲೇ ರವೀಂದ್ರನಾಥ ಟ್ಯಾಗೋರ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋಗಳನ್ನು ಅಂದರೆ ಅವರ ವಾಟರ್‌ಮಾರ್ಕ್‌ ಚಿತ್ರಗಳನ್ನು ಹಾಕುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೆಲವು ಮುಖಬೆಲೆಯ ನೋಟುಗಳಲ್ಲಿ ಗಾಂಧಿ ಬದಲು ಇವರಿಬ್ಬರು ಮಹಾನ್‌ ನಾಯಕರ ಚಿತ್ರ ಅಳವಡಿಸಲು ಮುಂದಾಗಿದೆ ಎನ್ನಲಾಗಿದೆ. ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SPMCIL) ಮತ್ತು ಭಾರತೀಯಯ ರಿಸರ್ವ್‌ ಬ್ಯಾಂಕ್‌ ಈ ನಿರ್ಧಾರ ತೆಗೆದುಕೊಂಡಿದ್ದು, ಸದ್ಯ ಇದು ಉನ್ನತ ಮಟ್ಟದಲ್ಲಿ ಚರ್ಚೆಯಲ್ಲಿದೆ ಎನ್ನಲಾಗುತ್ತಿದೆ.
ಮೊಬೈಲ್‌ ಗೀಳಿನಿಂದಾಗಿ ಫ್ರೆಂಡ್ಸೇ ಇಲ್ಲ… ಇನ್ಯಾಕೆ ಈ ಜೀವನ? ಡೆತ್‌ನೋಟ್‌ ಬರೆದಿಟ್ಟು ಬಾಲಕಿ ಆತ್ಮಹತ್ಯೆ
https://www.vijayavani.net/s-commission-by-minister-in-drip-irrigation-accuseing-govt/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + thirteen =
Remember me
