ರಾಯ್ಪುರ್‌ (ಛತ್ತೀಸ್‌ಗಢ):ಭಾರತ ದೇಶವನ್ನು ಹಾಳು ಮಾಡಿದವರೇ ಗಾಂಧಿ. 1947ರಲ್ಲಿ ದೇಶ ವಿಭಜನೆಯಾಗಲು ಅವರೇ ಕಾರಣ, ಇಲ್ಲದಿದ್ದರೆ ದೇಶ ಸುಭೀಕ್ಷವಾಗಿರುತ್ತಿತ್ತು ಎನ್ನುವ ಮೂಲಕ ಗಾಂಧಿಯನ್ನು ನಿಂದಿಸಿ, ಅವರ ಹಂತಕ ನಾಥೂರಾಮ್ ಗೊಡ್ಸೆಯನ್ನು ಹೊಗಳಿದ್ದ ಮಹಾರಾಷ್ಟ್ರದ ಸಂತ ಕಾಲಿಚರಣ್‌ ಮಹಾರಾಜ್ ಅವರನ್ನು ಬಂಧಿಸಲಾಗಿದೆ.
ಗಾಂಧಿ ದೇಶವನ್ನು ಸತ್ಯನಾಶ ಮಾಡಿದರು. 1947ರಲ್ಲಿ ದೇಶ ವಿಭಜನೆಯಾಗಲು ಗಾಂಧಿಯೇ ಕಾರಣ. ಅವರು ದೇಶವನ್ನು ನಾಶಪಡಿಸಿದರು ಎಂದು ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಗಾಂಧಿಯನ್ನು ಕೊಂದ ಗೋಡ್ಸೆಗೆ ನಾನು ದೊಡ್ಡ ನಮಸ್ಕಾರ ಮಾಡುತ್ತೇನೆ ಎಂದರು. ಇದರ ಜತೆಗೆ, ‘ದೇಶದ ಆಡಳಿತದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಕಟ್ಟಾ ಹಿಂದೂ ಧರ್ಮೀಯನೇ ಆಗಿರಬೇಕು, ಶಾಸಕ, ಸಂಸದ ಎಲ್ಲರೂ ಹಿಂದೂ ಧರ್ಮಿಯಾಗಿರಬೇಕು. ದೇಶದಲ್ಲಿ ಯಾರು ಮತ ಚಲಾಯಿಸುವುದಿಲ್ಲವೋ ಅಂಥವರು ಪರೋಕ್ಷವಾಗಿ ಇಸ್ಲಾಂಗೆ ಬೆಂಬಲ ನೀಡಿದ ಹಾಗೆಯೇ ಆಗುತ್ತದೆ. ಈ ಮೂಲಕ ಇಸ್ಲಾಂ ಪ್ರಬಲಗೊಳ್ಳಲು ದಾರಿ ಮಾಡಿ ಕೊಡುತ್ತೀರಿ ಎಂದು ಕಾಲಿಚರಣ್‌ ಹೇಳಿದ್ದರು.
ಈ ಮಾತು ಇಡೀ ಸಭೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿ, ಭಾರಿ ವಿವಾದದ ಅಲೆಯನ್ನೂ ಹುಟ್ಟುಹಾಕಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲಿಚರಣ್​ ಅವರನ್ನು ರಾಯ್‌ಪುರ​ ಪೊಲೀಸರು ಬೆಳಗ್ಗೆ 4 ಗಂಟೆಯ ಸುಮಾರಿಗೆ ಬಂಧಿಸಿದ್ದಾರೆ. ಮಧ್ಯಪ್ರದೇಶದ ಖಜುರಾಹೊದಿಂದ ಸುಮಾರು 25 ಕಿಮೀ ದೂರದಲ್ಲಿರುವ ಭಾಗೇಶ್ವರ ಧಾಮ್ ಬಳಿ ಬಾಡಿಗೆ ವಸತಿಗೃಹದಲ್ಲಿ ಸ್ವಾಮೀಜಿ ಮಹಾರಾಜ್​ ತಂಗಿದ್ದರು. ಇಂದು ಸಂಜೆ ವೇಳೆಗೆ ಪೊಲೀಸ್ ತಂಡ ಆರೋಪಿ ಜತೆ ರಾಯ್‌ಪುರ ತಲುಪಲಿದೆ ಎಂದು ರಾಯ್‌ಪುರ ಸಬ್‌ ಇನ್ಸ್‌ಪೆಕ್ಟರ್‌ ಪ್ರಶಾಂತ್ ಅಗರ್‌ವಾಲ್ ತಿಳಿಸಿದ್ದಾರೆ.
ಯಾರೀ ಕಾಲಿಚರಣ್‌:ಸಂತ ಕಾಲಿಚರಣ್‌ ಮಹಾರಾಜ್‌ ಅವರ ಮೂಲ ಹೆಸರು ಅಭಿಜಿತ್ ಧನಂಜಯ್ ಸರಾಗ್. ಭಾವಸಾರ್ ಸಮಾಜಕ್ಕೆ ಸೇರಿದವರು. ಇವರು ಮಹಾರಾಷ್ಟ್ರದ ಅಕೋಲಾದ ಹಳೆನಗರದ ಶಿವಾಜಿ ನಗರದ ನಿವಾಸಿ. ಅಧ್ಯಯನದಲ್ಲಿ ಆಸಕ್ತಿ ಇಲ್ಲದಿದ್ದ ಇವರು 8ನೇ ಕ್ಲಾಸ್‌ಗೆ ತರಗತಿ ಬಿಟ್ಟಿದ್ದರು.
ಇವರು ವಿದ್ಯಾಭ್ಯಾಸ ಮಾಡಲಿ ಎಂದು ಪಾಲಕರು ಇಂದೋರ್‌ಗೆ ಕಳುಹಿಸಿದ್ದರು. ಇಲ್ಲಿ ಹಿಂದಿ ಕಲಿತ ಕಾಲಿಚರಣ್‌ ನಂತರ ಭಯ್ಯಾಜಿ ಮಹಾರಾಜರ ಆಶ್ರಮಕ್ಕೆ ಹೋಗತೊಡಗಿದರು. ಇಲ್ಲಿಂದಲೇ ಅವರ ಆಧ್ಯಾತ್ಮಿಕ ಜೀವನ ಶುರುವಾಗಿ, ಕಾಲಿಚರಣ್‌ ಎಂಬ ಹೆಸರು ಪಡೆದರು.
VIDEO: ಸಿಎಂ ತವರಲ್ಲೇ ಮುದುಡಿದ ಕಮಲ, ಸಚಿವ ಶ್ರೀರಾಮುಲು ಕ್ಷೇತ್ರದಲ್ಲೂ ಬಿಜೆಪಿಗೆ ಭಾರಿ ಹಿನ್ನಡೆ!

ಇಟಲಿಗೆ ಹಾರಿದ ರಾಹುಲ್‌ ಗಾಂಧಿ: ಪ್ಲೀಸ್‌… ಪ್ಲೀಸ್‌… ಜನರಲ್ಲಿ ಕೈಮುಗಿದು ಹೀಗೆ ಬೇಡಿಕೊಂಡ್ರು ಕಾಂಗ್ರೆಸ್‌ ವಕ್ತಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + fifteen =
Remember me
