ನ್ಯೂಯಾರ್ಕ್‌:‌ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶ್ವೇತಭವನಕ್ಕೆ ಭೇಟಿ ಕೊಟ್ಟಿದ್ದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಜತೆಗೆ ದ್ವಿಪಕ್ಷೀಯ ಸಭೆ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಅವರು ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದು, ಬೈಡೆನ್ ಅಧಿಕಾರ ವಹಿಸಿಕೊಂಡ ನಂತರ ಇದು ದೇಶಕ್ಕೆ ಅವರ ಮೊದಲ ಅಧಿಕೃತ ಭೇಟಿಯಾಗಿದೆ.
ಈ ಸಭೆಯಲ್ಲಿ ಕೋವಿಡ್-19 ಮತ್ತು ಹವಾಮಾನ ಬದಲಾವಣೆ, ಆರ್ಥಿಕ ಸಹಕಾರ ಮತ್ತು ಆಫ್ಘಾನಿಸ್ತಾನ ಸೇರಿದಂತೆ ಹಲವಾರು ವಿಷಯಗಳ ಚರ್ಚೆ ನಡೆಯಲಿದೆ. ಕಳೆದ ಜನವರಿಯಲ್ಲಿ ಬೈಡೆನ್‌ ಅಮೆರಿಕದ 46ನೇ ಅಧ್ಯಕ್ಷರಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವುದು ಇದೇ ಮೊದಲು.
ಮೂರು ದಿನಗಳ ಭೇಟಿಯ ಅಂತಿಮ ದಿನದಂದು ಪ್ರಧಾನಿ ಮೋದಿ ಅವರು ಭಾರತಕ್ಕೆ ತೆರಳುವ ಮುನ್ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.ಇದಕ್ಕೂ ಮುನ್ನ ಪ್ರಧಾನಿ ಮೋದಿಯವರು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಹಿಂದೆ ಭಾರತದಲ್ಲಿ ವಿವಿಧ ಇಲಾಖೆಯಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದ ಕಮಲಾ ಹ್ಯಾರಿಸ್ ಅವರ ಅಜ್ಜ ಪಿವಿ ಗೋಪಾಲನ್ ಅವರಿಗೆ ಸೇರಿದ್ದ ಹಳೆಯ ಅಧಿಸೂಚನೆಗಳ ಪ್ರತಿಗಳು, ವಾರಣಾಸಿಯ ವಿಶಿಷ್ಟ ಕಲಾಕೃತಿ, ಚೆಸ್ ಸೆಟ್, ಮರದಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳನ್ನು ಮೊಮ್ಮಗಳಾದ ಕಮಲಾ ಹ್ಯಾರಿಸ್ ಗೆ ಪ್ರಧಾನಿ ಮೋದಿ ಅವರು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿಗೊಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಮಲಾ ಅವರಿಗೆ ಮೋದಿ ಗುಲಾಬಿ ಮೀನಾಕಾರಿ ಚೆಸ್ ಸೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಲಾಕೃತಿ ಕಾಶಿ ಜತೆ ನಿಕಟ ಸಂಬಂಧ ಹೊಂದಿದ್ದು, ಕಾಶಿ ಜಗತ್ತಿನಲ್ಲಿಯೇ ಅತೀ ಪುರಾತನ ನಗರಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಗಿಫ್ಟ್‌ ನೀಡಿದ್ದಾರೆ ಎನ್ನಲಾಗಿದೆ.

Washington, DC | Prime Minister Narendra Modi and US President Joe Biden engage in a bilateral meeting at the Oval Office in the White House.pic.twitter.com/cqbw5mtkxs
— ANI (@ANI)September 24, 2021

ಅವಿವಾಹಿತನೊಬ್ಬನ ಜತೆ ಸುದೀರ್ಘ ಸಂಬಂಧ ಹೊಂದಿದ್ದೇನೆ ಎಂದ ಸಲ್ಮಾನ್‌ ಖಾನ್‌ ಹೇಳಿದ್ದು ಈ ಹೆಸರು!

ಸ್ನಾನ ಅಂದ್ರೆ ಹೆಂಡ್ತಿಗೆ ಆಗಲ್ಲ, ಅವಳ ಜತೆ ಮಲಗಲಾರೆ- ತಲಾಖ್‌ ಬೇಕು: ಕೋರ್ಟ್‌ನಲ್ಲಿ ಪತಿ ಅಳಲು

Sign in to your account
Please enter an answer in digits:twenty − 6 =
Remember me
