ಮುಂಬೈ:ಕಳೆದ 2-3 ವರ್ಷಗಳಿಂದ ಭಾರಿ ವಿವಾದದಲ್ಲಿಯೇ ಇರುವ ನಟಿಯರಲ್ಲಿ ಮೊದಲಿಗಳೆಂದರೆ ಕಂಗನಾ ರಣಾವತ್​. ಮನಸ್ಸಿನಲ್ಲಿ ಇದ್ದುದನ್ನು ನೇರಾನೇರವಾಗಿ ಹೇಳುತ್ತಾ, ಯಾರಿಗೂ ಕ್ಯಾರೇ ಎನ್ನದೇ ವಿವಾದದಲ್ಲಿ ಸಿಲುಕುತ್ತಲೇ ಸಾಗಿರುವ ನಟಿ ಈಕೆ. ಅದ್ಭುತ ಅಭಿಯನವಿದ್ದರೂ ಇತ್ತೀಚಿನ ಇವರ ಚಿತ್ರಗಳು ಮಾತ್ರ ಸಿನಿಪ್ರಿಯರ ಮನಸ್ಸನ್ನು ಗೆಲ್ಲಲು ಸಾಧ್ಯವೇ ಆಗಲಿಲ್ಲ. ಅವರಿಗೆ ಭಾರಿ ಶಾಕ್​ ನೀಡಿದ್ದು ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದ್ದ, ಈಚೆಗೆ ಬಿಡುಗಡೆಗೊಂಡ ಧಾಕಡ್ ಚಿತ್ರ. 70 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಈ ಚಿತ್ರದಲ್ಲಿ.
ಇವುಗಳ ನಡುವೆಯೂ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ಕಂಗನಾ. 1975ರಲ್ಲಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಸಮಯದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ದಿನಗಳನ್ನು ಹೊತ್ತು ತಂದ ‘ಎಮರ್ಜೆನ್ಸಿ’ ಚಿತ್ರದಲ್ಲಿ ಇಂದಿರಾಗಾಂಧಿಯಾಗಿ ಕಂಗನಾ ಮಿಂಚಿದ್ದಾರೆ.
ಇದರ ಟೀಸರ್​ ಇದೀಗ ಬಿಡುಗಡೆಗೊಂಡಿದ್ದು, ಕಂಗನಾ ಅವರ ಅಭಿನಯದಿಂದ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಈ ಟೀಸರ್​ನಲ್ಲಿ ಕಂಗನಾ, ಇಂದಿರಾಗಾಂಧಿಯವರನ್ನೇ ಹೋಲುವುದನ್ನು ನೋಡಬಹುದಾಗಿದೆ. ಮಾತ್ರವಲ್ಲದೇ ಇಂದಿರಾಗಾಂಧಿಯವರು ಮಾತನಾಡುವ ಶೈಲಿಯನ್ನೇ ಕಂಗನಾ ಅನುಸರಿಸಿದ್ದಾರೆ. ಇದಕ್ಕಾಗಿ ಅವರ ದನಿಯನ್ನು ಕೂಡ ಬದಲಾಯಿಸಲಾಗಿದೆ.
1.21 ನಿಮಿಷದ ಈ ಟೀಸರ್​ನಲ್ಲಿ ಇಂದಿರಾಗಾಂಧಿಯವರ ಗೆಟಪ್​ನಲ್ಲಿ ಕಂಗನಾ ಮಿಂಚಿದ್ದಾರೆ. ಸಹಾಯಕನೊಬ್ಬ ಕಂಗನಾ (ಇಂದಿರಾಗಾಂಧಿ) ಅವರ ಬಳಿ ಬಂದು, ‘ಅಮೆರಿಕದ ಅಧ್ಯಕ್ಷರ ಕರೆ ಮಾಡಿದ್ದಾರೆ, ಅವರು ನಿಮ್ಮನ್ನು ಮೇಡಂ ಎಂದು ಸಂಬೋಧಿಸಬಹುದೇ ಎಂದು ಕೇಳುತ್ತಿದ್ದಾರೆ’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಇಂದಿರಾಗಾಂಧಿಯವರು ‘ಸರಿ’ ಎಂದು ಉತ್ತರಿಸಿದರೂ ನಂತರ, ಅವರು, ಅಮೆರಿಕದ ಅಧ್ಯಕ್ಷರಿಗೆ ಹೇಳಿ, ನನಗೆ ಇಲ್ಲಿ ಎಲ್ಲರೂ ಮೇಡಂ ಅಲ್ಲ ಬದಲಿಗೆ ಸರ್​ ಎಂದು ಸಂಬೋಧಿಸುತ್ತಾರೆ’ ಎಂದು ಹೇಳುವುದನ್ನು ಟೀಸರ್​ನಲ್ಲಿ ಕಾಣಬಹುದು.
ಈ ಟೀಸರ್​ ಅನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ ನಟಿ. ಇದು #EmergencyFirstLook ಟೀಸರ್​. ವಿಶ್ವದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ವಿವಾದಾತ್ಮಕ ಮಹಿಳೆಯೊಬ್ಬರನ್ನು ಚಿತ್ರಿಸಲಾಗುತ್ತಿದೆ… #ತುರ್ತು ಪರಿಸ್ಥಿತಿಯ ಚಿತ್ರೀಕರಣ ಪ್ರಾರಂಭವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
2021 ರಲ್ಲಿ, ಕಂಗನಾ ‘ಎಮರ್ಜೆನ್ಸಿ’ ಕುರಿತು ಹೇಳಿಕೊಂಡಿದ್ದರು. ಧಾಕಡ್ ಚಿತ್ರಕಥೆ ಬರೆದಿರುವ ರಿತೇಶ್ ಷಾ ‘ಎಮರ್ಜೆನ್ಸಿ’ ಚಿತ್ರಕಥೆಯನ್ನೂ ಬರೆದಿದ್ದಾರೆ. ಈ ಚಿತ್ರದ ನಿರ್ದೇಶಕಿಯಾಗಿದ್ದಾರೆ ಖುದ್ದು ಕಂಗನಾ.
ಈ ಬಗ್ಗೆ ಹೇಳಿಕೊಂಡಿರುವ ಕಂಗನಾ ತುರ್ತು ಪರಿಸ್ಥಿತಿಯ ದಿನಗಳ ಬಗ್ಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಅಧ್ಯಯನ ಮಾಡಿದೆ. ನಂತರ ನನಗೆ ಅನ್ನಿಸಿದ್ದು, ಇದನ್ನು ನಾನೇ ಉತ್ತಮವಾಗಿ ನಿರ್ದೇಶಿಸಲು ಸಾಧ್ಯವೆಂದು. ಆದ್ದರಿಂದ ನಾನೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ ಎಂದಿದ್ದಾರೆ.
ಅದರ ಟೀಸರ್​ ಇಲ್ಲಿದೆ ನೋಡಿ


A post shared by Kangana Ranaut (@kanganaranaut)

VIDEO: ಹಿಜಾಬ್​ ವಿರುದ್ಧ ಇರಾನ್​ನಲ್ಲಿ ಪ್ರತಿಭಟನೆ- ಬಟ್ಟೆ ಕಿತ್ತೆಸೆದು ಓಪನ್ ಚಾಲೆಂಜ್!​ ಮುಸ್ಲಿಂ ರಾಷ್ಟ್ರ​ ಅಲ್ಲೋಲ ಕಲ್ಲೋಲ

ಯಾರಿಗುಂಟು, ಯಾರಿಗಿಲ್ಲ 25 ಕೋಟಿ ರೂಪಾಯಿ ಗೆಲ್ಲುವ ಅದೃಷ್ಟ: ಓಣಂ ನಿಮಿತ್ತ ಹಣದ ಹೊಳೆ

ಬ್ಲಾಕ್​ಬಸ್ಟರ್​ ಸಿನಿಮಾ ‘ಪುಷ್ಪಾ’ ನೋಡಿ ಪ್ರೇರೇಪಿತನಾದ ಅಭಿಮಾನಿ ಈಗ ಪೊಲೀಸರ ಅತಿಥಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 19 =
Remember me
