ಮುಂಬೈ:ಒಂದಿಲ್ಲೊಂದು ಘಟನೆಗೆ ಸಂಬಂಧಿಸಿದಂತೆ ಕಳೆದೊಂದು ವರ್ಷದಿಂದ ಸುದ್ದಿ ಮಾಡುತ್ತಲೇ ಇರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಇದೀಗ ದುಃಖ ತೋಡಿಕೊಂಡು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತೆರಿಗೆ ಕಟ್ಟಲು ತಮ್ಮ ಬಳಿ ಹಣ ಇಲ್ಲ ಎಂದು ಅವರು ಜಾಲತಾಣದಲ್ಲಿ ನೋವು ತೋಡಿಕೊಂಡಿದ್ದಾರೆ.
ಕರೊನಾ, ಲಾಕ್‌ಡೌನ್‌ನಿಂದಾಗಿ ಸದ್ಯ ಶೂಟಿಂಗ್‌ ನಿಂತಿದೆ. ಆದರೂ ನಟಿ ಕಂಗನಾ ಕೈಯಲ್ಲಿ ಹಲವಾರು ಚಿತ್ರಗಳಿವೆ. ಅಷ್ಟೇ ಅಲ್ಲದೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯ ಸಾಲಿನಲ್ಲಿಯೂ ಕಂಗನಾ ಇದ್ದಾರೆ. ಇವರು ಒಂದು ಚಿತ್ರಕ್ಕೆ ಕೋಟಿಗಿಂತಲೂ ಅಧಿಕ ಸಂಭಾವನೆ ಪಡೆಯುತ್ತಾರೆ. ಅದರಲ್ಲಿ ಶೇ. 45ರಷ್ಟನ್ನು ತೆರಿಗೆಗೆ ಕಟ್ಟುತ್ತಾರಂತೆ.
ಈ ಕುರಿತು ಅವರೇ ಇದೀಗ ಹೇಳಿಕೊಂಡಿದ್ದಾರೆ. ಕಳೆದ ವರ್ಷದ ನಾನು ತೆರಿಗೆಯಲ್ಲಿ ಅರ್ಧದಷ್ಟನ್ನು ಮಾತ್ರ ಪಾವತಿ ಮಾಡಿದ್ದೇನೆ. ಈ ಬಾರಿ ನನಗೆ ತೆರಿಗೆ ಕಟ್ಟಲು ಆಗುತ್ತಿಲ್ಲ. ನನ್ನ ಒಟ್ಟು ಆದಾಯದಲ್ಲಿ ಶೇ. 45ರಷ್ಟು ತೆರಿಗೆ ಪಾವತಿಸುತ್ತೇನೆ. ನಾನು ಅತೀ ಹೆಚ್ಚು ತೆರಿಗೆ ಪಾವತಿಸುವ ನಟಿಯಾಗಿದ್ದೇನೆ. ಆದರೆ ಸದ್ಯ ಕೆಲಸ ಇಲ್ಲದೇ ಇರುವ ಕಾರಣ, ತೆರಿಗೆ ಕಟ್ಟಲು ಆಗುತ್ತಿಲ್ಲ. ಇದು ನನ್ನ ಲೈಫ್‌ನಲ್ಲಿಯೇ ಪ್ರಥಮ ಬಾರಿ ಎಂದಿದ್ದಾರೆ.
ತೆರಿಗೆ ಪಾವತಿಸುವುದು ತಡ ಮಾಡಿದರೆ ಸರ್ಕಾರ ಬಡ್ಡಿ ವಿಧಿಸುತ್ತದೆ. ಇದು ಸ್ವಾಗತಾರ್ಹವೇ ಆಗಿದ್ದರೂ, ತೆರಿಗೆ ಪಾವತಿ ಕಷ್ಡವಾಗಿದೆ. ಅನೇಕ ಮಂದಿಗೆ ಇದು ಕಠಿಣದ ಸಮಯ. ಎಲ್ಲರೂ ಒಗ್ಗಟ್ಟಾಗಬೇಕಿದೆ ಎಂದಿದ್ದಾರೆ.
ನಕ್ಕರಾ ಸಿಎಂ ಸಾಹೇಬ್ರು… ಬಿಗಿಮೋರೆಯ ಮೊಗದಲ್ಲಿ ಚೆಂದದ ನಗು ಹರಿಸಿದ ಮಹಿಳೆ…

ಮನೆಬಾಗಿಲಿಗೆ ಆನಂದಯ್ಯನವರ ಆಯುರ್ವೇದ ಔಷಧ: ಟಿಟಿಡಿಯಿಂದ ದೇಶಾದ್ಯಂತ ಪೂರೈಕೆಗೆ ಮುಂದಾದ ಸರ್ಕಾರ

ಸೇನೆಯಲ್ಲಿ ಮಹಿಳೆಯರಿಗೆ ಭರ್ಜರಿ ಅವಕಾಶ: 100 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 1 =
Remember me
