ಮುಂಬೈ:ಇಂದು ಕಂಗನಾ ರಣಾವತ್​ ಹೆಸರು ಕೇಳದವರೇ ಇಲ್ಲ ಎನ್ನಬಹುದೇನೋ. ಅದರಲ್ಲಿಯೂ ಕಳೆದೊಂದು ವರ್ಷದಿಂದ ಕಂಗನಾ ದಿನನಿತ್ಯವೂ ಸುದ್ದಿಯಾಗುತ್ತಿದ್ದಾರೆ. ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಅವರ ಸಾವಿನ ವಿರುದ್ಧ ಸಿಡಿದೇಳುವುದರಿಂದ ಹಿಡಿದು ಮೊನ್ನೆ ಎರಡು ರಾಷ್ಟ್ರಪ್ರಶಸ್ತಿ ಗಳಿಸಿರುವವರೆಗೆ ಕಂಗನಾ ಅವರ ಸುದ್ದಿ ದಿನವೂ ಹರಿದಾಡುತ್ತಲೇ ಇದೆ.
ಚಿತ್ರ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಟ್ವೀಟ್​ ಮೂಲಕ ಕಂಗನಾ ಅವರು ಪ್ರಶಸ್ತಿ ಪಡೆದಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದರು. ಮಾತ್ರವಲ್ಲದೇ ಅವಿರತ ಶ್ರಮದ ಮೂಲಕ, ಎಲ್ಲಾ ಸವಾಲುಗಳನ್ನು ಎದುರಿಸಿ ಛಲ ಸಾಧಿಸುವ ಎದೆಗಾರಿಕೆಯನ್ನು ಕಂಗನಾ ಅವರಿಂದ ನೋಡಿ ಕಲಿಯಬೇಕು ಎಂದು ವಿವೇಕ್​ ಶ್ಲಾಘನೆ ವ್ಯಕ್ತಪಡಿಸಿದ್ದರು.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕಂಗನಾ, ನಾನು ಯಾರಿಗೂ ಬೇಡವಾಗಿದ್ದ ಹೆಣ್ಣು ಮಗುವಾಗಿದ್ದೆ, ಇಂದು ನಾನು ಅತ್ಯುತ್ತಮ ಮತ್ತು ಉತ್ಸಾಹಭರಿತ ಚಲನಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ತಂತ್ರಜ್ಞರೊಂದಿಗೆ ಕೆಲಸ ಮಾಡುತ್ತೇನೆ. ನಾನು ನನ್ನ ಕೆಲಸವನ್ನು ಪ್ರೀತಿಸುತ್ತೇನೆ, ಹಣಕ್ಕಾಗಿ ಅಲ್ಲ, ಖ್ಯಾತಿಗಾಗಿ ಅಲ್ಲ. ಪ್ರಪಂಚದ ಅತ್ಯುತ್ತಮರು ನನ್ನನ್ನು ನೋಡಿದಾಗ ಮತ್ತು ‘ನೀವು ಮಾತ್ರ ಇದನ್ನು ಮಾಡಬಹುದು’ ಎಂದು ಹೇಳಿದಾಗ ತುಂಬಾ ಖುಷಿಯಾಗುತ್ತದೆ. ಹೀಗೆ ಹೇಳಿಕೆ ನೀಡಿದಾಗ ನಾನು ಮನೆಯವರಿಗೆ ಅನಗತ್ಯವಾಗಿರಬಹುದು ಆದರೆ ನನಗೆ ನನ್ನ ಅಗತ್ಯವಿತ್ತು ಎಂದು ನನಗೆ ತಿಳಿಯುತ್ತದೆ ಎಂದು ಖುಷಿಯಿಂದ ಬರೆದುಕೊಂಡರೂ ಮನದಾಳದ ನೋವನ್ನು ತೆರೆದಿಟ್ಟಿದ್ದಾರೆ.
https://twitter.com/KanganaTeam/status/1376049490675658754
ಈ ಟ್ವೀಟ್​ ನೋಡಿದವರಿಗೆ ಕಂಗನಾ ಹೀಗೇಕೆ ಹೇಳುತ್ತಿದ್ದಾರೆ ಎಂದು ಅರ್ಥವಾಗದೇ ಹೋದಿತು. ಆದರೆ ಅಸಲಿಗೆ ಇದಾಗಲೇ ಕಂಗನಾ ತಮ್ಮ ಬದುಕಿನ ಪುಟಗಳನ್ನು ತೆರೆದಿಟ್ಟಿದ್ದರು. ಇವರಿಗಿಂತ ಮೊದಲು ಪಾಲಕರಿಗೆ ಹುಟ್ಟಿದ್ದು ಒಂದು ಗಂಡು ಮಗು. ಆದರೆ ಆ ಮಗು 10 ದಿನದವನು ಇರುವಾಗಲೇ ಮೃತಪಟ್ಟಿದ್ದ. ತಮ್ಮ ಮುಂದಿನ ಮಗು ಗಂಡೇ ಹುಟ್ಟುತ್ತದೆ ಎಂದು ಕಂಗನಾ ಪಾಲಕರು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದರು. ಆದರೆ ಆಗ ಹುಟ್ಟಿದ್ದು ಈ ಕಂಗನಾ. ತಮಗೆ ಹುಟ್ಟಿರುವ ಮಗು ಹೆಣ್ಣು ಎಂದು ತಿಳಿಯುತ್ತಲೇ ನಿರಾಸೆಯಾಗಿದ್ದ ಪಾಲಕರಿಗೆ ತಾನು ಬೇಡದ ಹೆಣ್ಣುಮಗುವಾಗಿದ್ದೆ ಎಂದು ಕಂಗನಾ ಹಿಂದೊಮ್ಮೆ ಹೇಳಿಕೊಂಡಿದ್ದರು.
ನಾನೊಬ್ಬಳು ಬೇಡದ ಹೆಣ್ಣುಮಗು ಎಂಬ ಸನ್ನಿವೇಶ ಪದೇ ಪದೇ ತಮಗೆ ಎದುರಾಗುತ್ತಿದ್ದ ಬಗೆಯನ್ನು ಅವರು 2016ರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಹೇಳಿಕೊಂಡಿದ್ದರು. ನಾನು ದೊಡ್ಡವಳಾಗುತ್ತಿದ್ದಂತೆಯೇ ಈ ನಿರ್ಲಕ್ಷ್ಯ ಹೆತ್ತವರನ್ನು ಅಷ್ಟಾಗಿ ಕಾಡಲಿಲ್ಲ ಎಂದು ಹೇಳಿದ್ದ ಕಂಗನಾ, ಅದಕ್ಕೆ ಕೊಟ್ಟಿದ್ದ ಕಾರಣ ಎಂದರೆ, ನಮ್ಮ ಮಗಳು ಸುಂದರವಾಗಿದ್ದಾಳೆ, ಆಕೆಯನ್ನು ಸುಲಭದಲ್ಲಿ ಮದುವೆ ಮಾಡಬಹುದು ಎಂದು ಹೆತ್ತವರಿಗೆ ಅನ್ನಿಸದ್ದರಿಂದ ನನ್ನ ಬಗೆಗಿನ ತಾತ್ಸಾರ ಕೊಂಚ ಕಡಿಮೆಯಾಗಿತ್ತು ಎಂದು ಮಾರ್ಮಿಕವಾಗಿ ನುಡಿದಿದ್ದರು. ಬದುಕಿನಲ್ಲಿ ಅತ್ಯುನ್ನತ ಸಾಧನೆ ಮಾಡಿದ ಜಗತ್ತಿನ ಬಹುತೇಕ ಹೆಣ್ಣುಮಕ್ಕಳ ಜೀವನವೂ ಹೀಗೆಯೇ. ಒಂದೇ ಮನೆಯವರಿಂದ ಇಲ್ಲವೇ ಸಮಾಜದಿಂದ ಅವರು ತಿರಸ್ಕರಿಸಲ್ಪಟ್ಟವರೇ ಎಂದು ಹೇಳಿದ್ದರು.
ಅದನ್ನೇ ಈಗ ತಮ್ಮನ್ನು ಹೊಗಳಿದ ವಿವೇಕ್​ ಅವರಿಗೆ ಟ್ವೀಟ್​ಗೆ ಪ್ರತಿಯಾಗಿ ತಿಳಿಸಿದ್ದಾರೆ.
VIDEO: ತಮಿಳು ಬಿಟ್ಟು ಹಿಂದಿ ಮಾತನಾಡಿದ ನಿರೂಪಕಿ- ವೇದಿಕೆ ಬಿಟ್ಟು ಹೋದ ಎ.ಆರ್​.ರೆಹಮಾನ್​!

ತಿನ್ನುವುದಕ್ಕಾಗಿ ಬಸವನಹುಳು ಖರೀದಿಸಿದಳು: ಮುತ್ತಿನಿಂದ ರಾತ್ರೋ ರಾತ್ರಿ ಲಕ್ಷಾಧೀಶ್ವರೆ ಆದಳು!

1ರಿಂದ 9ನೇ ತರಗತಿ ಮಕ್ಕಳಿಗೆ ಸಿಹಿ ಸುದ್ದಿ ಕೊಡಲಿದೆ ಸರ್ಕಾರ- ಎಲ್ಲರೂ ಪಾಸ್​ ಪಾಸ್​….

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + six =
Remember me
