ಮುಂಬೈ:ಬಾಲಿವುಡ್​ ನಟಿ ಕಂಗನಾ ಒಂದಲ್ಲೊಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಈಗ ಮತ್ತೊಮ್ಮೆ ಇವರು ಸುದ್ದಿಯಲ್ಲಿದ್ದಾರೆ. ಅದ್ಯಾಕೆ ಅಂದರೆ ಅಮಿತಾಭ್​ ಬಚ್ಚನ್​ ಕಾರಣಕ್ಕಾಗಿ!
ಅಷ್ಟಕ್ಕೂ ಆಗಿದ್ದೇನೆಂದರೆ, ಕಂಗನಾ ಅವರು ನಟಿಸಿರುವ ‘ಧಾಕಡ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ‘ಧಾಕಡ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಇದು ಭಾರಿ ಜನಪ್ರಿಯತೆ ಪಡೆಯುತ್ತಿದೆ. ಚಿತ್ರ ರಸಿಕರಷ್ಟೇ ಅಲ್ಲದೇ ಸಿನಿ ತಾರೆಯರು ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಟ್ರೈಲರ್​ಗೆ ಬಾಲಿವುಡ್​ ಬಿಗ್​-ಬಿ ಅಮಿತಾಭ್​ ಬಚ್ಚನ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ಕಂಗನಾಗೆ ಶುಭ ಹಾರೈಸಿದ್ದರು.
ಇಷ್ಟೇ ಆಗಿದ್ದರೆ ಇದು ಸುದ್ದಿಯಾಗುತ್ತಿರಲಿಲ್ಲ. ಹೀಗೆ ಶುಭ ಹಾರೈಸಿ ಅವರು ಪೋಸ್ಟ್​ ಮಾಡಿದ ಕೆಲವೇ ನಿಮಿಷಗಳಲ್ಲಿ ಅದನ್ನು ಡಿಲೀಟ್​ ಮಾಡಿಬಿಟ್ಟಿದ್ದೇ ಈಗ ಭಾರಿ ಸುದ್ದಿಯಾಗಿದೆ.
ಇದರಿಂದ ಭಾರಿ ಅಸಮಾಧಾನ ವ್ಯಕ್ತಪಡಿಸಿರುವ ಕಂಗನಾ, ’ಎಲ್ಲರಿಗೂ ವೈಯಕ್ತಿಕ ಅಭದ್ರತೆಗಳಿವೆ. ತಾವು ಉದ್ಯಮದಿಂದ ಬಹಿಷ್ಕಾರಕ್ಕೆ ಒಳಗಾಗುತ್ತೇವೆ ಎಂದು ಕೆಲವರು ಹಿಂದೆ ಸರಿಯಬಹುದು ಎಂದು ನಾನು ಭಾವಿಸುವುದಿಲ್ಲ. ಆದರೆ, ಅಮಿತಾಭ್ ಬಚ್ಚನ್ ಅವರು ಪೋಸ್ಟ್ ಹಾಕಿ 5-10 ನಿಮಿಷಗಳಲ್ಲಿ ಡಿಲೀಟ್ ಮಾಡಿದ್ದಾರೆ. ಅವರಂತಹ ದೊಡ್ಡ ನಟರಿಗೆ ಯಾವ ಪ್ರೆಷರ್ ಇರುತ್ತದೆ? ನನಗಂತೂ ಗೊತ್ತಿಲ್ಲ. ಇದು ಕೊಂಚ ವಿಚಿತ್ರವಾಗಿದೆ ಎಂದಿದ್ದಾರೆ. ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ‘ಧಾಕಡ್’ ಚಿತ್ರದ ಕುರಿತು ನಡೆದ ಸಂದರ್ಶನವೊಂದರಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.
ಈ ನಡುವೆ ನಟ ಸಲ್ಮಾನ್ ಖಾನ್ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ಚಿತ್ರತಂಡಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ಸಲ್ಮಾನ್​ ಖಾನ್​ ಅವರ ಪೋಸ್ಟ್‌ಅನ್ನು ರೀ-ಶೇರ್ ಮಾಡಿಕೊಂಡು, ‘’ನನ್ನ ದಬಂಗ್ ಹೀರೋಗೆ ಧನ್ಯವಾದ. ಚಿತ್ರರಂಗದಲ್ಲಿ ನಾನು ಒಂಟಿ ಎಂದು ಇನ್ಯಾವತ್ತೂ ಹೇಳುವುದಿಲ್ಲ. ಇಡೀ ‘ಧಾಕಡ್’ ಚಿತ್ರತಂಡದಿಂದ ನಿಮಗೆ ಥ್ಯಾಂಕ್ಸ್’’ ಎಂದಿದ್ದಾರೆ. ಇನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಕಂಗನಾಗೆ ಶುಭ ಹಾರೈಸಿದ್ದು, ‘’ಟೈಗರ್ ಶ್ರಾಫ್ ಮತ್ತು ಹೃತಿಕ್ ರೋಷನ್ ಅವರುಗಳನ್ನು 10 ಬಾರಿ ಗುಣಿಸಿದಂತೆ ಕಂಗನಾ ರನೌತ್ ಕಾಣುತ್ತಿದ್ದಾರೆ’’ ಎಂದು ಟ್ವೀಟ್​ನಲ್ಲಿ ಹಾಡಿ ಹೊಗಳಿದ್ದಾರೆ.
ಧಾರವಾಡ ಜೈಲಲ್ಲಿ ಪಾಕ್​ ಉಗ್ರನ ಹುಚ್ಚಾಟ: ಬೇಡಿಕೆ ಇಟ್ಟು ಒಂದ್ವಾರ ಉಪವಾಸ: ಬಿರಿಯಾನಿ ಕೊಟ್ಟಾಗ ಹೀಗ್​ ಮಾಡ್ದ…

ತಾಳಿ ಕಟ್ಟಬೇಕೆನ್ನುವಷ್ಟರಲ್ಲಿಯೇ ಕುಸಿದುಬಿದ್ದು ವಧು ಸಾವು! ಬೆಚ್ಚಿಬೀಳಿಸಿದ ಮರಣೋತ್ತರ ಪರೀಕ್ಷೆ

ಹೊಸ ಅವತಾರ ತಾಳೋವರೆಗೂ ಗುಡ್​ ಬೈ ಎಂದ ಶಿಲ್ಪಾ: ಫೋಟೋ ಇಲ್ಲದ ಇನ್​ಸ್ಟಾಗ್ರಾಂ… ಅಭಿಮಾನಿಗಳಿಗೆ ಚಿಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
