ನವದೆಹಲಿ:ಇದೀಗ ಬಾಲಿವುಡ್​ ನಟಿ ಕಂಗನಾ ರಣಾವತ್​ ಹೆಸರು ಭಾರಿ ಪ್ರಸಿದ್ಧಿ ಪಡೆದುಕೊಂಡಿದೆ. ನಟ ಸುಶಾಂತ್​ ರಜಪೂತ್​ ಅವರ ಸಾವಿನ ನಂತರ ಕಂಗನಾ ನೀಡುವ ಪ್ರತಿಯೊಂದು ಹೇಳಿಕೆಗಳೂ ಇದೀಗ ಭಾರಿ ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದು, ಅದೇ ಇನ್ನೊಂದೆಡೆ ವಿವಾದವನ್ನೂ ಸೃಷ್ಟಿಸುತ್ತಿದೆ.
ಇವರ ಟ್ವಿಟರ್​ ಖಾತೆಯಲ್ಲಿ ಶೇರ್​ ಆಗಿದ್ದ ಹಳೆಯ ಟ್ವೀಟ್​ ಒಂದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಕಂಗನಾ ವಿರುದ್ಧ ಪಂಜಾಬ್​, ಹರಿಯಾಣ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ತೀರ್ಪು ಹೊರಬಂದಿದ್ದು, ಕಂಗನಾ ಪರವಾಗಿ ಕೋರ್ಟ್​ ಅದೇಶ ಹೊರಡಿಸಿದೆ.
ಏನಿದು ವಿವಾದ?ಗೋಮಾಂಸದ ಕುರಿತಾದ ಟ್ವೀಟ್​ ಇದಾಗಿದೆ. 2019ರ ಮೇ ತಿಂಗಳಿನಲ್ಲಿ ಮಾಡಿರುವ ಟ್ವೀಟ್​ ಅನ್ನು ಪ್ರಶ್ನಿಸಿ ಲುಧಿಯಾನ ಮೂಲದ ನವನೀತ್ ಗೋಪಿ ಎನ್ನುವವರು ಅರ್ಜಿ ಸಲ್ಲಿಸಿದ್ದರು.
ಈ ಟ್ವೀಟ್​ನಲ್ಲಿ ಗೋಮಾಂಸದ ಕುರಿತಂತೆ ಬರೆಯಲಾಗಿದೆ. ಗೋಮಾಂಸ ತಿನ್ನುವುದು ತಪ್ಪೇನಲ್ಲ. ಇದು ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಕಂಗನಾ ಎಂಟು ವರ್ಷಗಳ ಹಿಂದೆ ಯೋಗಿಯಾಗುವ ಸಲುವಾಗಿ ಮಾಂಸಾಹಾರ ತ್ಯಜಿಸಿದ್ದಾಳೆ. ಹಾಗೆಂದು ಆಕೆಯ ಸಹೋದರ ಗೋಮಾಂಸ ತಿನ್ನುತ್ತಾನೆ ಎಂದು ಅದರಲ್ಲಿ ಬರೆಯಲಾಗಿದೆ.
ಇದನ್ನೂ ಓದಿ:ಪೇಟಿಎಂ​ ಬ್ಯಾನ್​ ಮಾಡಿದ ಗೂಗಲ್ ಪ್ಲೇಸ್ಟೋರ್​- ಕಾರಣ ಏನು ಗೊತ್ತಾ?
ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ. ಮಾತ್ರವಲ್ಲದೇ ಗೋಮಾಂಸ ತಿನ್ನುವುದನ್ನು ಉತ್ತೇಜಿಸುತ್ತದೆ ಎಂದು ನವನೀತ್​ ಆರೋಪಿಸಿದ್ದರು. ಈ ಕುರಿತು ತಾವು ಲುಧಿಯಾನದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದರು.
ಪಂಜಾಬ್ ಹಸುವಿನ ವಧೆ ನಿಷೇಧ ಕಾಯ್ದೆ 1995, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 66 ಮತ್ತು 67 ಮತ್ತು ಸೆಕ್ಷನ್ 295 ರ ಭಾರತೀಯ ದಂಡ ಸಂಹಿತೆ, 1860 ರ ಅಡಿಯಲ್ಲಿ ನಟಿಯ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಅರ್ಜಿದಾರರು ಕೋರಿದ್ದರು.
ಆದರೆ ಇದನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ. ಏಕೆಂದರೆ, ಈ ಟ್ವೀಟ್​ನಲ್ಲಿ ಅವರೇ ಬರೆದಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆಗಳು ಇಲ್ಲ. ಅರ್ಜಿಯಲ್ಲಿ ಅಸ್ಪಷ್ಟತೆ ಇದೆ.ಅವರೇ ಸ್ವತಃ ಸಸ್ಯಾಹಾರಿಯಾಗಿರುವುದಾಗಿ ಅದರಲ್ಲಿ ಬರೆಯಲಾಗಿದೆ. ಆದರೆ ಅವರೇ ಇದನ್ನು ಬರೆದಿರುವ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಭಾರತ ಮತ್ತು ವಿದೇಶಗಳಲ್ಲಿನ ಆಹಾರ ವ್ಯತ್ಯಾಸಗಳ ಕುರಿತು ಈ ಟ್ವೀಟ್​ನಲ್ಲಿ ಉಲ್ಲೇಖವಾಗಿದೆ. ಆದ್ದರಿಂದ ಅರ್ಜಿಯನ್ನು ಮಾನ್ಯ ಮಾಡಲು ಆಗುವುದಿಲ್ಲ ಎಂದು ಕೋರ್ಟ್​ ಹೇಳಿ ಅರ್ಜಿಯನ್ನು ವಜಾ ಮಾಡಿದೆ.
ಭಾರತದ ಮೇಲೆ ಬೇಹುಗಾರಿಕೆಗೆ ನೌಕೆ ಕಳುಹಿಸಿದ ಚೀನಾ: ಎಲ್ಲೆಡೆ ತೀವ್ರ ಕಟ್ಟೆಚ್ಚರ

ಅತ್ಯಾಚಾರ ಮಾಡಿದರೆ ವೃಷಣಕ್ಕೇ ಕತ್ತರಿ!​​ ಈ ದೇಶದಲ್ಲಿ ಬಂತು ಹೊಸ ಕಾನೂನು…

ಪೇಟಿಎಂ​ ಬ್ಯಾನ್​ ಮಾಡಿದ ಗೂಗಲ್ ಪ್ಲೇಸ್ಟೋರ್​- ಕಾರಣ ಏನು ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − 4 =
Remember me
