ಮುಂಬೈ:ಸದಾ ಬಿಜೆಪಿಯನ್ನು ಬೆಂಬಲಿಸುವ ನಟಿ ಕಂಗನಾ ರಣಾವತ್​ ಅವರ ಕಚೇರಿ “ಮಣಿಕರ್ಣಿಕಾ” ಕಟ್ಟಡವನ್ನು ಅಲ್ಲಿನ ಪಾಲಿಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸೂಚನೆ ಮೇರೆಗೆ ಕಳೆದ ವರ್ಷ ನೆಲಸಮಗೊಳಿಸಿತ್ತು. ಈ ವೇಳೆ ರೊಚ್ಚಿಗೆದ್ದಿದ್ದ ಕಂಗನಾ ಮಣಿಕರ್ಣಿಕಾ ಕಚೇರಿಯನ್ನು ಕೆಡವಿದ್ದೀರಿ, ಇಂದು ನನ್ನ ಮನೆ ಮುರಿದಿದೆ, ನಾಳೆ ನಿಮ್ಮ ಅಹಂಕಾರವೂ ಮುರಿಯಲಿದೆ ಎಂದು ನೇರವಾಗಿಯೇ ಟ್ವಿಟರ್​ ಮೂಲಕ ಅಸಮಾಧಾನ ಹೊರಹಾಕಿದ್ದರು. ಇದೀಗ ಠಾಕ್ರೆ ಅವರು ರಾಜೀನಾಮೆ ನೀಡುವ ಸ್ಥಿತಿ ಬಂದಿದ್ದರಿಂದ ಅವರ ಹಳೆಯ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇದರ ನಡುವೆಯೇ ನಟಿ ಕಂಗನಾ ಇದೀಗ ಮತ್ತೆ ಆಕ್ರೋಶ ಹೊರಹಾಕಿದ್ದಾರೆ. ಠಾಕ್ರೆ ರಾಜೀನಾಮೆ ನೀಡಿ, ಅದು ರಾಜ್ಯಪಾಲರಿಂದ ಅಂಗೀಕಾರ ಆಗಿರುವ ಹಿನ್ನೆಲೆಯಲ್ಲಿ ನಟಿ ಮತ್ತೊಮ್ಮೆ ಟ್ವೀಟ್​ ಮಾಡಿ ಟೀಕಿಸಿದ್ದಾರೆ. ಈಗ ಅವರು ಹನುಮಾನ್​ ಚಾಲೀಸಾದ ಕುರಿತು ಹೇಳಿದ್ದಾರೆ.
ಠಾಕ್ರೆ ಈ ಹಿಂದೆ ಹನುಮಾನ್​ ಚಾಲೀಸಾವನ್ನು ಬ್ಯಾನ್​ ಮಾಡಿ ಎಂದು ಪದೇಪದೇ ಸೂಚನೆ ನೀಡಿದ್ದರು. . ಇದನ್ನು ಉಲ್ಲೇಖಿಸಿರುವ ನಟಿ ಕಂಗನಾ, ಹನುಮಾನ್​ ಚಾಲೀಸಾವನ್ನು ಬ್ಯಾನ್​ ಮಾಡಲು ಹೊರಟಿದ್ರಲ್ವಾ? ಈಗ ಗೊತ್ತಾಯ್ತಾ ಅದರ ತಾಕತ್ತು. ಹನುಮಂತನನ್ನು ಶಿವನ 12ನೇ ಅವತಾರ ಎಂದು ಹೇಳಲಾಗುತ್ತದೆ. ಶಿವ ಸೇನೆಯೇ ಹನುಮಾನ್​ ಚಾಲೀಸಾವನ್ನು ಬ್ಯಾನ್​ ಮಾಡಿದರೆ ಅವರನ್ನು ಸ್ವತಃ ಶಿವನೂ ಕಾಪಾಡಲು ಸಾಧ್ಯವಿಲ್ಲ ಎಂದ ನಟಿ, ಹರಹರ ಮಹದೇವ್​ ಎಂದು ಬರೆದುಕೊಂಡಿದ್ದಾರೆ.
‘1975ರ ಬಳಿಕ ಇತಿಹಾಸದಲ್ಲಿ ಇದು ತುಂಬ ಮಹತ್ವವಾದ ಸಮಯ. 1975ರಲ್ಲಿ ಜೆಪಿ ನಾರಾಯಣ್​ ಅವರ ಘೋಷಣೆಯಿಂದ ಸಿಂಹಾಸನ ಅಲುಗಾಡಿತ್ತು. ಪ್ರಜಾಪ್ರಭುತ್ವ ಎಂಬುದು ಒಂದು ವಿಶ್ವಾಸ. ಅಧಿಕಾರದ ಅಹಂಕಾರದಿಂದ ಆ ವಿಶ್ವಾಸವನ್ನು ಮುರಿದರೆ ಅಂಥವರ ಪ್ರತಿಷ್ಠೆ ನುಚ್ಚುನೂರಾಗುತ್ತದೆ ಎಂದು ನಾನು 2020ರಲ್ಲೇ ಹೇಳಿದ್ದೆ. ಇದು ಯಾವುದೇ ವ್ಯಕ್ತಿಯ ಶಕ್ತಿ ಅಲ್ಲ. ಇದು ಚರಿತ್ರೆಯ ಶಕ್ತಿ’ ಎಂದಿ​ದ್ದಾರೆ ಕಂಗನಾ ರಣಾವತ್​.
ವಿಡಿಯೋ ಇಲ್ಲಿದೆ ನೋಡಿ


A post shared by Kangana Ranaut (@kanganaranaut)

ಬಾಳ್​ ಠಾಕ್ರೆ ಪರಂಪರೆ ಮುಂದುವರೆಸಲು ಜೈಲಿಗೆ ಹೋಗಲೂ ಸಿದ್ಧ ಎಂದು ಭಾವುಕರಾದ ಸಂಸದ ರಾವುತ್​!

ಸಿಎಂ ಸೀಟಿನಿಂದ ಇಳಿಯುತ್ತಲೇ ಸ್ಟೀರಿಂಗ್​ ಹಿಡಿದ ಠಾಕ್ರೆ: ರಾಜ್ಯಪಾಲರಿಂದ ರಾಜೀನಾಮೆ ಅಂಗೀಕಾರ- ಅಧಿವೇಶನ ರದ್ದು

ಟೈಲರ್​ ರುಂಡ ಕಡಿದಿರೋದು ಸಣ್ಣ ಘಟನೆ, ಪಾಪ ಪಾಕ್​ ಏನ್​ ಮಾಡುತ್ತೆ ಎಂದ ಟಿಕಾಯತ್​ ಹೇಳಿದ್ದೇನು ಕೇಳಿ…

Sign in to your account
Please enter an answer in digits:seven − two =
Remember me
