ಉದಯಪುರ (ರಾಜಸ್ಥಾನ):ಕಳೆದ ಕೆಲ ತಿಂಗಳಿನಿಂದ ಭಾರಿ ಸುದ್ದಿಯಲ್ಲಿರುವ ನಟಿ ಎಂದರೆ ಬಾಲಿವುಡ್​ ತಾರೆ ಕಂಗನಾ ರಣಾವತ್​. ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವಿನ ನಂತರ ನಡೆದ ಬೆಳವಣಿಗೆಯಿಂದ ಹಿಡಿದು, ಕೇಂದ್ರ ಸರ್ಕಾರದಿಂದ ಝೆಡ್​ ಪ್ಲಸ್​ ಭದ್ರತೆ ಪಡೆದವರೆಗೆ ಹಾಗೂ ಮೊನ್ನೆ ತಾನೆ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸ್ವೀಕರಿಸಿದವರೆಗೆ ಕಂಗನಾ ಹೆಸರು ಭಾರಿ ಪ್ರಚಲಿತದಲ್ಲಿದೆ.
ಇದೀಗ ಕಂಗನಾ ಅವರು ದೇವರ ಮುಂದೆ ಭಾವುಕರಾಗಿ ಕಣ್ಣೀರು ಸುರಿಸಿ ಮತ್ತೆ ಸುದ್ದಿಯಾಗಿದ್ದಾರೆ. ರಾಜಸ್ಥಾನದ ಉದಯಪುರದ ಸಮೀಪ ಇರುವ ನಾಥ್ವಾರದ ಪ್ರಸಿದ್ಧ ಶ್ರೀನಾಥಜಿ ದೇಗುಲಕ್ಕೆ ಹೋಗಿದ್ದ ಕಂಗನಾ ದೇವರ ಮುಂದೆ ತೀವ್ರವಾಗಿ ಭಾವುಕರಾದಂತೆ. ಈ ಕುರಿತು ಖುದ್ದು ಕಂಗನಾ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಉದಯಪುರಕ್ಕೆ ವಿಶೇಷ ವ್ಯಕ್ತಿಯ ಭೇಟಿಗಾಗಿ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದ ಕಂಗನಾ ಆ ವ್ಯಕ್ತಿ ಯಾರು ಎಂದು ಬಹಿರಂಗಗೊಳಿಸಲಿಲ್ಲ, ಬದಲಿಗೆ ಶ್ರೀನಾಥಜಿ ದೇಗುಲಕ್ಕೆ ಹೋದಾಗ ಅಲ್ಲಿ ತಮಗೆ ವಿಭಿನ್ನ ಅನುಭೂತಿಯಾದ ಬಗ್ಗೆ ಹೇಳಿಕೊಂಡಿದ್ದಾರೆ. ಇಂಥದೊಂದು ಅನುಭವ ಹಿಂದೆ ಎಲ್ಲಿಯೂ ಆಗಿರಲಿಲ್ಲ. ಇದೇ ಕಾರಣಕ್ಕೆ ಶ್ರೀನಾಥಜಿಯ ಮುಂದೆ ನನ್ನ ಕಣ್ಣೀರನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ರಾಜಸ್ಥಾನದ ಪ್ರಾದೇಶಿಕ ಉಡುಗೆಯನ್ನು ತೊಟ್ಟ ಕಂಗನಾ ಇಲ್ಲಿಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ಆ ವೇಳೆ ವಿಚಿತ್ರ ಅನುಭವದಿಂದ ಭಾವುಕರಾಗಿ ಕಣ್ಣೀರು ಹರಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಅಂದಹಾಗೆ ಕಂಗನಾ ಈ ಹಿಂದೆ ಕೂಡ ಉದಯಪುರಕ್ಕೆ ಅನೇಕ ಬಾರಿ ಭೇಟಿ ಕೊಟ್ಟಿದ್ದಾರೆ. ಇವರ ಸಹೋದರ ಅಕ್ಷತ್ ಅವರ ವಿವಾಹವೂ ಉದಯಪುರದಲ್ಲಿ ನಡೆದಿದೆ. ಕಂಗನಾ ಅವರ ಕುಲದೇವಿ ಮಾ ಅಂಬಿಕಾ ದೇವಾಲಯವನ್ನು ಉದಯಪುರದ ಸಮೀಪದಲ್ಲಿಯೇ ಇದ್ದು ಅಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
ಇವರ ಈ ಟ್ವೀಟ್​ ನೋಡಿದ ಅಭಿಮಾನಿಗಳು ಆ ವಿಶೇಷ ವ್ಯಕ್ತಿ ಯಾರಿರಬಹುದು ಎಂದು ಬಗ್ಗೆ ವಿಭಿನ್ನ ರೀತಿಯಲ್ಲಿ ಚರ್ಚೆ ಶುರು ಮಾಡಿದ್ದಾರೆ. ಇದಾಗಲೇ ನಟ ಹೃತಿಕ್​ ರೋಷನ್​ ಸೇರಿದಂತೆ ಕೆಲ ಬಾರಿ ಪ್ರೇಮ ವೈಫಲ್ಯದಿಂದ ನೊಂದಿರುವ ಈ ಬಾಲಿವುಡ್​ ನಟಿಯ ಜೀವನದಲ್ಲಿ ಮತ್ತೆ ಯಾವ ವಿಶೇಷ ವ್ಯಕ್ತಿಯ ಪ್ರವೇಶವಾಗಿದೆ ಎಂಬ ಕುತೂಹಲ ಈಕೆಯ ಅಭಿಮಾನಿಗಳಲ್ಲಿ ಶುರುವಾಗಿದೆ.
ಮಗು ಗರ್ಭದಲ್ಲಿದ್ದಾಗಲೇ ಮತ್ತೊಮ್ಮೆ ಗರ್ಭ ಧರಿಸಿದ ಮಹಿಳೆ- ನಂಬಲು ಆಗ್ತಿಲ್ವಾ? ಈ ಘಟನೆ ಓದಿ..

ಕರೊನಾ ಮಾರ್ಗಸೂಚಿ ಎರ್ರಾಬಿರ್ರಿ ಮಾಡಿದ್ರೆ ಹುಷಾರ್​, ಸರ್ಕಾರಕ್ಕೇ ಎಚ್ಚರಿಕೆ ನೀಡಿದ ಡಿಕೆಶಿ!

ಹೋಳಿ ಹಬ್ಬಕ್ಕೆ ಫುಲ್​ ಟೈಟ್​: ವಾಟರ್​ಟ್ಯಾಂಕ್​ ಸರಸರ ಏರಿ ಡಾನ್ಸ್​ ಮಾಡಿದ ಭೂಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 20 =
Remember me
