ಮುಂಬೈ:ಕಳೆದೊಂದು ವರ್ಷಗಳಿಂದ ಭಾರಿ ವಿವಾದದಲ್ಲಿರುವ ನಟಿಯೆಂದರೆ ಕಂಗನಾ ರಣಾವತ್. ಇದಾಗಲೇ ಸಾಕಷ್ಟು ಕಮೆಂಟ್‌ ಮಾಡುವ ಮೂಲಕ ಈಕೆ ವಿವಾದ ಸೃಷ್ಟಿಸುತ್ತಲೇ ಇದ್ದಾರೆ. ನೇರ- ದಿಟ್ಟ ನುಡಿಗಳಿಂದ ತಮಗೆ ಅನ್ನಿಸಿದ್ದನ್ನು ಹೇಳುತ್ತಾ ಧೈರ್ಯದಿಂದ ಯಾರಿಗೂ ಜಗ್ಗದೇ ಬಗ್ಗದ ಈ ನಟಿ ವಿವಾದದ ಮಾತುಗಳನ್ನಾಡಿದರೂ, ಇವರು ನಿಜವಾದದ್ದನ್ನೇ ಹೇಳುತ್ತಿದ್ದಾರೆ, ಯಾರೂ ಮಾಡದ ಸಾಹಸ ಇವರು ಮಾಡುತ್ತಾ ಕಹಿ ಸತ್ಯವನ್ನೇ ನುಡಿಯುತ್ತಿದ್ದಾರೆ ಎಂದು ಹಲವರು ಇವರಿಗೆ ಭೇಷ್‌ ಎನ್ನುವುದೂ ಇದೆ.ಅದೇನೇ ಇರಲಿ. ಈಗ ಕಂಗನಾ ಇನ್ನೊಂದು ಕಮೆಂಟ್‌ ಮಾಡಿದ್ದು, ಇದು ಕೂಡ ಈಗ ಸಾಕಷ್ಟು ವೈರಲ್‌ ಆಗಿದೆ. ಈ ಮಾತು ವಿವಾದ ಸೃಷ್ಟಿ ಮಾಡದಿದ್ದರೂ ಇವರ ಮಾತಿಗೆ ಪರ- ವಿರೋಧಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿವೆ.‘ಶ್ರೀಮಂತ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆ ಆಗುತ್ತಿರುವುದು ನೋಡಲು ಖುಷಿ ಆಗುತ್ತದೆ. ‘ಯಶಸ್ವಿ ಪುರುಷರು ವಯಸ್ಸಿನಲ್ಲಿ ತಮಗಿಂತ ಬಹಳ ಚಿಕ್ಕವರಾದ ಮಹಿಳೆಯರ ಜತೆ ಮದುವೆ ಆದ ಕಥೆಗಳನ್ನು ಕೇಳುತ್ತ ನಾವು ಬೆಳೆದಿದ್ದೇವೆ. ಗಂಡನಿಗಿಂತ ಹೆಂಡತಿಯೇ ಹೆಚ್ಚು ಸಾಧನೆ ಮಾಡಿದರೆ ಅದನ್ನು ಮಹಿಳೆಯರ ಪಾಲಿಗೆ ಒಂದು ಬಿಕ್ಕಟ್ಟು ಎಂದೇ ಪರಿಗಣಿಸಲಾಗುತ್ತಿತ್ತು. ಚಿಕ್ಕ ವಯಸ್ಸಿನ ಹುಡುಗರನ್ನು ಮದುವೆ ಮಾಡಿಕೊಳ್ಳುವುದು ಹಾಗಿರಲಿ, ಒಂದು ವಯಸ್ಸು ದಾಟಿದ ನಂತರ ಮಹಿಳೆಯರು ಮದುವೆ ಆಗುವುದೇ ಅಸಾಧ್ಯ ಎಂಬ ಮಾತಿತ್ತು. ಅದರೆ ಈಗ ಎಲ್ಲವೂ ಬದಲಾಗಿದೆ. ಶ್ರೀಮಂತ ಮಹಿಳೆಯರು, ಯಶಸ್ವಿ ನಟಿಯರು ಆ ಎಲ್ಲ ಹಳೆಯ ನಿಯಮಗಳನ್ನು ಮುರಿಯುತ್ತಿರುವುದನ್ನು ನೋಡಲು ತುಂಬಾ ಖುಷಿ ಆಗುತ್ತದೆ. ಲಿಂಗ ಸಮಾನತೆ ಬಗೆಗಿನ ದೃಷ್ಟಿಕೋನ ಬದಲಿಸುತ್ತಿರುವ ಮಹಿಳೆಯರಿಗೆ ಮತ್ತು ಪುರುಷರಿಗೆ ಅಭಿನಂದನೆಗಳು’ ಎಂದು ಕಂಗನಾ ಬರೆದಿದ್ದಾರೆ.ಇದು ಯಾರಿಗೆ, ಏಕೆ ಹೇಳಿದ್ದಾರೆ ಎಂಬುದನ್ನು ಅವರು ನೇರಾನೇರ ಹೇಳದಿದ್ದರೂ ಸದ್ಯದ ಸ್ಥಿತಿಯಲ್ಲಿ ಅದು ಶೀಘ್ರ ಮದುವೆಯಾಗಲಿರುವ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಅವರನ್ನೇ ಉದ್ದೇಶಿಸಿ ಎನ್ನುವುದು ಬಹಿರಂಗ ಗುಟ್ಟು. ಈ ಹಿಂದೆ ಐಶ್ವರ್ಯ ರೈ, ಪ್ರಿಯಾಂಕಾ ಛೋಪ್ರಾ ಸೇರಿದಂತೆ ಕೆಲವು ಜೋಡಿಗಳು ಇದೇ ರೀತಿ ಮದುವೆಯಾಗಿದ್ದು, ಅವರ ಸಾಲಿಗೆ ಕತ್ರಿನಾ ಕೂಡ ಈಗ ಸೇರ್ಪಡೆಗೊಂಡಿದ್ದಾರೆ.
ಇವರನ್ನೆಲ್ಲಾ ಉದ್ದೇಶಿಸಿ ಕಂಗನಾ ಈ ಮಾತು ಹೇಳಿದ್ದರೂ, ಸದ್ಯ ಇದು ಕತ್ರಿನಾ ಜೋಡಿಗೆ ಎನ್ನುವುದು ಎಲ್ಲರ ಭಾವನೆ. ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ನಾಳೆ (ಡಿ.9) ಕತ್ರಿನಾ ಮದುವೆ ನಡೆಯಲಿದೆ. ಅಂದಹಾಗೆ ಕತ್ರಿನಾಗೆ 38 ವರ್ಷ ವಯಸ್ಸು. ವಿಕ್ಕಿ ಕೌಶಲ್​ಗೆ ಈಗಿನ್ನೂ 33ರ ವಯಸ್ಸು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 4 =
Remember me
