ಮುಂಬೈ:ಚಿತ್ರನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಹಾಗೂ ಅವರ ಗೆಳತಿ ರಿಯಾ ಚಕ್ರವರ್ತಿ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು ನಟಿ ಕಂಗನಾ ವಿರುದ್ಧ ಕಿಡಿಕಾರಿದ್ದಾರೆ.
ಕಂಗನಾ ಮುಂಬೈ, ಮಹಾರಾಷ್ಟ್ರ ಪೊಲೀಸ್ ಮತ್ತು ಉದ್ಧವ್​ ಅವರ ಪುತ್ರ ಆದಿತ್ಯ ಕುರಿತು ಅಪಪ್ರಚಾರ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ನಮ್ಮ ಮನೆಯಲ್ಲಿ ಬೆಳೆಯುತ್ತಿರುವುದು ತುಳಸೀಗಿಡ, ಗಾಂಜಾ ಅಲ್ಲ ಎನ್ನುವುದು ಅವರಿಗೆ ತಿಳಿದಂತೆ ಕಾಣುತ್ತಿಲ್ಲ ಎಂದು ಕಂಗನಾ ಹೆಸರು ಹೇಳದೇ ಟೀಕಿಸಿದರು.
ಕೆಲವರು ನ್ಯಾಯಕ್ಕಾಗಿ ಅಳುತ್ತಿರುವವರು ಮುಂಬೈ ಪೊಲೀಸರನ್ನು ನಿಷ್ಪ್ರಯೋಜಕರು ಎಂದು ದೂರುತ್ತಿದ್ದಾರೆ. ಮುಂಬೈ ಪಾಕ್ ಆಕ್ರಮಿತ ಕಾಶ್ಮೀರ ಥರ ಮಹಾರಾಷ್ಟ್ರ ಎನ್ನುತ್ತಿದ್ದಾರೆ, ಎಲ್ಲೆಂದರಲ್ಲಿ ಡ್ರಗ್ಸ್‌ ಅಡಿಕ್ಟ್​ಗಳೇ ಇರುವುದಾಗಿ ಹೇಳುತ್ತಿದ್ದಾರೆ, ಅವರಿಗೆ ಬಹುಶಃ ತುಳಸಿ ಮತ್ತು ಗಾಂಜಾ ಗಿಡದ ಬಗ್ಗೆ ತಿಳಿದಿಲ್ಲ ಎಂದು ಕಾಣಿಸುತ್ತದೆ ಎಂದು ಚುಚ್ಚಿದರು.
ಇದನ್ನೂ ಓದಿ:ಮೈಸೂರು ದಸರಾ; ಆನೆಗಳ ಮೇಲೆ ಗಂಡಭೇರುಂಡ.. ಬಿಗಿ ಭದ್ರತಾ ವ್ಯವಸ್ಥೆ…
ಶಿವಸೇನೆ ಆಯೋಜಿಸಿದ್ದ ದಸರಾ ವಾರ್ಷಿಕ ಸಮಾವೇಶದಲ್ಲಿ ಠಾಕ್ರೆ ಮಾತನಾಡುತ್ತಿದ್ದರು. ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ‘ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನೀವು ಈಗ ಬಿಹಾರದ ಮಗ ಎಂದು ಹೇಳುತ್ತಿದ್ದೀರಿ. ಅದು ಹಾಗೆ ಆಗಿರಲಿಕ್ಕೂ ಸಾಕು. ಆದರೆ ಇದೇ ಕಾರಣವನ್ನು ಮುಂದಿಟ್ಟುಕೊಂಡು ನೀವು ಮಹಾರಾಷ್ಟ್ರದ ಪುತ್ರರನ್ನು ಕೆಟ್ಟದಾಗಿ ಚಿತ್ರಿಸಿದ್ದು ಸರಿಯಲ್ಲ. ನನ್ನ ಮಗ ಆದಿತ್ಯನನ್ನೂ ಈ ಪ್ರಕರಣದಲ್ಲಿ ಎಳೆದು ತರುವ ಯತ್ನ ಮಾಡ್ತಿದ್ದೀರಿ ಎಂದು ಹೇಳಿದರು.
‘ಮುಂಬೈ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಮುಂಬೈ ದಾಳಿಕೋರ ಕಸಬ್‌ನಂಥ ಉಗ್ರನನ್ನು ಜೀವಂತವಾಗಿ ಸೆರೆಹಿಡಿದ ಏಕೈಕ ಪೊಲೀಸರು ನಮ್ಮ ಮುಂಬೈ ಪೊಲೀಸರು. ಇದು ನನಗೆ ಹೆಮ್ಮೆಯ ವಿಷಯ ಎಂದ ಠಾಕ್ರೆ, ಕಂಗಾನಾಗೆ ಮುಂಬೈ ಪಿಓಕೆ ಥರ ಕಾಣಿಸಿದೆ ಎಂದರೆ ಇದು ಪ್ರಧಾನಿ ಮೋದಿಗೆ ಮಾಡಿದ ಅವಮಾನವೂ ಆಗಿದೆ. ಪಿಓಕೆಯನ್ನು ಮತ್ತೆ ವಶಪಡಿಸಿಕೊಳ್ಳುವುದಾಗಿ ಮೋದಿ ಹೇಳಿ ಆರು ವರ್ಷಗಳಾಗಿದೆ, ಆದರೆ ಇನ್ನೂ ಆಗಿಲ್ಲ. ಹೀಗಾಗಿ ಇದು ಮೋದಿ ವೈಫಲ್ಯವೂ ಹೌದು ಎಂದು ಟೀಕಿಸಿದರು.
ಈಕೆಯ ಎದೆಹಾಲಿಗೆ ಲಕ್ಷ ಲಕ್ಷ ರೂಪಾಯಿ- ಮನೆಯಲ್ಲೇ ಕೂತು ಸಿಕ್ಕಾಪಟ್ಟೆ ಸಂಪಾದನೆ!

ಮೋದಿಜೀ… ಸುಳ್​ ಹೇಳ್ಬೇಡಿ… ಬಿಹಾರಿಗಳಿಗೆ ಎಷ್ಟು ಉದ್ಯೋಗ ಕೊಟ್ಟಿದ್ದೀರಿ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + 6 =
Remember me
