ನವದೆಹಲಿ:ರೈತರ ಪ್ರತಿಭಟನೆಯ ಹೆಸರಿನಲ್ಲಿ ವಿಶ್ವಮಟ್ಟದಲ್ಲಿ ಭಾರತಕ್ಕೆ ಹೇಗೆ ಕಪ್ಪುಮಸಿ ಬಳಿಯಬೇಕು ಎನ್ನುವ ಡಾಕ್ಯುಮೆಂಟರಿ ಇರುವ ಟೂಲ್​ಕಿಟ್​ ಕುರಿತು ಪೋಸ್ಟ್​ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿರುವ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್​ಬರ್ಗ್​​ಗೆ ವಿದ್ಯಾರ್ಥಿ ನಾಯಕ ಹಾಗೂ ರಾಜಕಾರಣಿ ಕನ್ನಯ್ಯ ಕುಮಾರ್ ಬೆಂಬಲ ಸೂಚಿಸಿದ್ದಾರೆ.
ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ಯಾವೆಲ್ಲಾ ರೀತಿಯಲ್ಲಿ ಪ್ರತಿಭಟನೆ ಮಾಡಬಹುದು ಎನ್ನುವ ಮಾಹಿತಿಗಳಿರುವ ಡಾಕ್ಯುಮೆಂಟ್‌ ಒಂದನ್ನು ಟ್ವೀಟ್‌ ಮಾಡಿದ್ದಳು ಗ್ರೇಟಾ. ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಗ್ರೆಟಾ ಥನ್ಬರ್ಗ್ ಸಹಾಯವಿದ್ದವರಿಗೆ ಈ ಟೂಲ್ ಕಿಟ್​ಗಳನ್ನು ನೀಡುವುದಾಗಿ ಹೇಳಿದ್ದಳು. ಈಕೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಡಿಲೀಟ್​ ಮಾಡಿದ್ದಳು.
Dear@GretaThunbergwelcome to the club! An FIR against you by Delhi Police, at the direction of Jay Shah’s father, is proof that you are fighting the good fight & are on the right side of history! Many of my friends are already in prison as part of it! Keep fighting! ✊🏽
— Kanhaiya Kumar (@kanhaiyakumar)February 4, 2021

ಈಕೆ ಪೋಸ್ಟ್​ ಮಾಡಿರುವ ಟೂಲ್​ಕಿಟ್​ ರಚನಾಕಾರರ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ. ಎಫ್​ಐಆರ್​ನಲ್ಲಿ ಗ್ರೇಟಾ ಹೆಸರು ಕೇಳಿಬಂದಿದ್ದರೂ ನಂತರ ಆಕೆಯನ್ನು ಅದರಲ್ಲಿ ಸೇರಿಸಿಲ್ಲ ಎಂಬ ಮಾಹಿತಿ ಬಂದಿದೆ. ಆದರೆ ಈಕೆಯ ವಿರುದ್ಧವೂ ಎಫ್​ಐಆರ್​ ದಾಖಲಾಗಿದೆ ಎಂದು ಸುದ್ದಿಯಾದ ಬೆನ್ನಲ್ಲೇ ಕನ್ಹಯ್ಯ ಕುಮಾರ್​ ಟ್ವೀಟ್​ ಮಾಡುವ ಮೂಲಕ ಗ್ರೇಟಾಗೆ ಹುರಿದುಂಬಿಸಿದ್ದಾರೆ.
I still#StandWithFarmersand support their peaceful protest.No amount of hate, threats or violations of human rights will ever change that.#FarmersProtest
— Greta Thunberg (@GretaThunberg)February 4, 2021

ಪ್ರೀತಿಯ ಗ್ರೆಟಾ ಥನ್ಬರ್ಗ್ ನಿನಗೆ ನಮ್ಮ ಕ್ಲಬ್ ಗೆ ಸ್ವಾಗತ. ದೆಹಲಿ ಪೊಲೀಸರು ಜಯ್ ಷಾ ಅವರ ತಂದೆಯ (ಕೇಂದ್ರ ಗೃಹ ಸಚಿವ ಅಮಿತ್ ಷಾ) ನಿರ್ದೇಶನದ ಮೇರೆಗೆ ಎಫ್‌ಐಆರ್ ದಾಖಲಿಸಿದ್ದಾರೆ. ನೀನು ಉತ್ತಮ ದಾರಿಯಲ್ಲಿ ಹೋರಾಟ ನಡೆಸುತ್ತಿರುವೆ. ಸರಿಯಾದ ದಿಕ್ಕಿನಲ್ಲಿ ಇತಿಹಾಸ ನಿರ್ಮಿಸಲಿರುವೆ. ಇದರ ಭಾಗವಾಗಿ ನನ್ನ ಹಲವು ಸ್ನೇಹಿತರು ಈಗಾಗಲೇ ಜೈಲಿನಲ್ಲಿದ್ದಾರೆ, ನೀನೂ ನಿರಂತರವಾಗಿ ಹೋರಾಟ ಮಾಡುತ್ತಿರು ಎಂದು ಶಹಬ್ಬಾಸ್​ಗಿರಿ ಕೊಟ್ಟಿದ್ದಾರೆ.
ಎಫ್‌ಐಆರ್​ನಲ್ಲಿ ತನ್ನ ಹೆಸರು ಇದೆ ಎಂದುಕೊಂಡಿದ್ದ ಗ್ರೇಟಾ ಆ ನಂತರೂ ಟ್ವೀಟ್​ ಮಾಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಳು. ದ್ವೇಷ, ಬೆದರಿಕೆಗಳಿಗೆ ಹೆದರುವುದಿಲ್ಲ, ಮಾನವ ಹಕ್ಕುಗಳ ಉಲ್ಲಂಘನೆಯಿಂದ ನನ್ನ ನಿಲುವು ಬದಲಾಗುವುದಿಲ್ಲ ಎಂದಿದ್ದಳು.
ಬಯಲಾಯ್ತು ಕರಾಳಮುಖ! ಪ್ರತಿಭಟನೆ ಹೆಸರಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯೋದು ಹೇಗೆ ಎಂದು ಪಾಠ ಮಾಡಿದ ‘ಪರಿಸರ ಹೋರಾಟಗಾರ್ತಿ’…

ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ‘ಯದುವೀರ್​ ಒಡೆಯರ್’​ ಟ್ವೀಟ್​- ಆದರೆ ಅಸಲಿಯತ್ತೇ ಬೇರೆ!

ಒಂದೇ ಗಂಟೆಯಲ್ಲಿ ₹365 ಕೋಟಿ ದುಡಿಯುವ ಆಸೆಯೆ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಚಾಲೆಂಜ್​!

ಒಂದೆಡೆ ಪತ್ನಿ, ಇನ್ನೊಂದೆಡೆ ಮದುವೆಯಾಗಲು ಪ್ರೇಯಸಿ ಒತ್ತಾಯ- ಮೈಸೂರಿನಲ್ಲಿ ಬಿತ್ತು ಎರಡು ಹೆಣ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 5 =
Remember me
