ಮುಂಬೈ:ಹಲವು ಕಂಪನಿಗಳ ಕಾರುಗಳಿಗೆ ಹೊಸರೂಪ ನೀಡುತ್ತ, ಮೂಲ ವಿನ್ಯಾಸವನ್ನೇ ಮರೆಸುವಂಥ ಪ್ರತಿಭೆ ಹೊಂದಿರುವ, ಕಾರು ವಿನ್ಯಾಸದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ‘ಡಿಸಿ’ ದಿಲೀಪ್ ಛಾಬ್ರಿಯಾ ತಮಗೂ ಮೋಸ ಮಾಡಿರುವುದಾಗಿ ನಿರೂಪಕ, ಹಾಸ್ಯನಟ ಕಪಿಲ್​ ಶರ್ಮಾ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
ಮುಂಬೈನಲ್ಲಿ ಖರೀದಿಸುವ ಕಾರುಗಳ ಮೂಲ ಕಂಪನಿಯ ಲಾಂಛನಗಳಿಗಿಂತ ಅದರ ಜಾಗದಲ್ಲಿ ಡಿಸಿ ಎಂದು ಇದ್ದರೆ ಅದಕ್ಕೇ ಹೆಚ್ಚು ಬೆಲೆ ಎಂದು ಈಗಲೂ ಚಾಲ್ತಿಯಲ್ಲಿದೆ. ಅದನ್ನು ಮಾಡಿರುವ ಶಿಲ್ಪಿಯೇ ಈ ದಿಲೀಪ್​ ಛಾಬ್ರಿಯಾ.
ತಮ್ಮ ಕಾರುಗಳನ್ನು ಎರೆಡೆರಡು ಕಡೆ ನೋಂದಣಿ ಮಾಡಿಸಿ, ಅದಕ್ಕೆ ಎರಡೂ ಕಡೆ ಸಾಲವನ್ನು ಪಡೆದು, ಅದನ್ನು ಮರುಪಾವತಿಸದೆ ಮರಳಿ ಅದೇ ಕಾರನ್ನು ಬೇರೊಬ್ಬರಿಗೆ ಮಾರಾಟ ಮಾಡುವ ದೊಡ್ಡ ಜಾಲವನ್ನು ಹೊಂದಿರುವ ಆರೋಪದ ಮೇರೆಗೆ ಇವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಅವರು ತಮ್ಮ ಹೊಸ ವ್ಯಾನಿಟಿ ವ್ಯಾನ್ ವಿನ್ಯಾಸಕ್ಕಾಗಿ 5.5 ಕೋಟಿ ರೂಪಾಯಿ ಕೊಟ್ಟು ಮೋಸ ಮಾಡಿರುವುದಾಗಿ ಕಪಿಲ್​ ಶರ್ಮಾ ಅವರು ಇಂದು ಮುಂಬೈ ಪೊಲೀಸರಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಇಂದು ಮುಂಬೈನ ಅಪರಾಧ ಗುಪ್ತಚರ ಘಟಕ (ಸಿಐಯು) ಕಚೇರಿಗೆ ಹೋಗಿ ತಮ್ಮ ಹೇಳಿಕೆಯನ್ನು ಕಪಿಲ್​ ದಾಖಲು ಮಾಡಿ ಬಂದಿದ್ದಾರೆ.
ದಿಲೀಪ್ ಅವರ ಬಂಧನದ ಬಗ್ಗೆ ಓದಿದ ನಂತರ ಮುಂಬೈ ಪೊಲೀಸ್ ಆಯುಕ್ತರನ್ನು ಭೇಟಿಯಾಗಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ವ್ಯಾನಿಟಿ ವ್ಯಾನ್ ವಿನ್ಯಾಸಗೊಳಿಸಲು ಛಾಬ್ರಿಯಾ ಅವರನ್ನು ವಿಚಾರಿಸಿದ್ದೆವು. ಸಂಪೂರ್ಣ ಹಣ ಪಾವತಿಸಲು ಅವರು ಹೇಳಿದಂತೆ ಹಣ ಪಾವತಿಸಿದ್ದೇವೆ. ಆದರೆ ಇದುವರೆಗೆ ಅವರು ತಾವು ಹೇಳಿದ ಕೆಲಸ ಮಾಡಿಲ್ಲ, ಹಣವನ್ನೂ ನೀಡಲಿಲ್ಲ. ಇದೀಗ ಅವರನ್ನು ಬಂಧಿಸಿರುವುದು ಸಂತೋಷವಾಗಿದೆ ಎಂದಿದ್ದಾರೆ.
ಅಷ್ಟಕ್ಕೂ ಛಾಬ್ರಿಯಾ ಸಿಕ್ಕಿಬಿದ್ದದ್ದೇ ರೋಚಕ. ತಮಿಳುನಾಡಿನಲ್ಲಿ ನೋಂದಣಿಯಾದ ಕಾರೊಂದು ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಸಿಲುಕಿಕೊಂಡಿತ್ತು. ಅಲ್ಲಿನ ಪೊಲೀಸರು ಚಾಲಕನಿಗೆ ದಂಡ ವಿಧಿಸುವ ಸಮಯದಲ್ಲಿ ಇದೇ ಕಾರು ಹರಿಯಾಣದಲ್ಲೂ ನೋಂದಣಿಯಾಗಿರುವುದು ತಿಳಿದುಬಂತು. ಮುಂಬೈನ್ ನರಿಮನ್ ಪಾಯಿಂಟ್, ಕೊಲಾಬಾದ ತಾಜ್‌ ಹೋಟೆಲ್ ಬಳಿಯೂ ಡಿಸಿ ಕಾರುಗಳನ್ನು ತಡೆದಿದ್ದ ಪೊಲೀಸರು ಎರಡು ಕಡೆ ನೋಂದಣಿಯಾಗಿರುವುದನ್ನು ಪತ್ತೆ ಮಾಡಿದ್ದರು. ಇದರ ಹಿಂದೆ ಇರುವುದು ದಿಲೀಪ್​ ಎಂದು ತಿಳಿದುಬಂದಿತ್ತು. ಆಗಲೇ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.
10 ಪುಷ್‍ಅಪ್ಸ್, 20 ಬಸ್ಕಿ ಹೊಡೆಯಬಲ್ಲಿರಾ? ಭಾರತೀಯ ನೌಕಾಪಡೆಯಲ್ಲಿ ನಿಮಗಿವೆ 358 ಹುದ್ದೆಗಳು..

33ಕ್ಕೇ ಲೈಂಗಿಕಾಸಕ್ತಿ ಕುಂದುಹೋಗಿದೆ- ಪತಿ ಹತ್ತಿರ ಬಂದರೆ ಸಿಟ್ಟುಬರುತ್ತದೆ: ಏನು ಮಾಡಲಿ?

ವಿಶ್ವದ ಮೊದಲ ವಿದ್ಯುತ್ ಚಾಲಿತ ಡಬಲ್-ಸ್ಟ್ಯಾಕ್ ಟ್ರೇನಿಗೆ ಚಾಲನೆ: ಹೇಗೆ ಓಡುತ್ತೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen − eleven =
Remember me
