ಮುಂಬೈ:ಬಾಲಿವುಡ್ ನಟಿ ಕರೀನಾ ಕಪೂರ್ ಈಗ ಎರಡನೆಯ ಮಗುವಿನ ತಾಯಿ. 40 ವರ್ಷದ ಈ ಬೆಡಗಿ ಎರಡನೆಯ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಸದ್ಯ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದರು. ಮನೆಯಲ್ಲಿಯೇ ಇದ್ದು, ವರ್ಕ್‌ಔಟ್‌ ಎಲ್ಲಾ ಕಷ್ಟವಾಗಿದ್ದರಿಂದ ಸಹಜ ಎಂಬಂತೆ ಡೆಲಿವರಿ ನಂತರ ಈಕೆ ಕೂಡ ತೂಕ ಹೆಚ್ಚಿಸಿಕೊಂಡಿದ್ದರು.
ಆದರೆ ನಟ-ನಟಿಯರ ಜೀವನ ಇಷ್ಟಕ್ಕೇ ಮುಗಿಯುವದಿಲ್ಲವಲ್ಲ! ಪುನಃ ಕರೀನಾ ಸಿನಿರಂಗದತ್ತ ಮುಖ ಮಾಡಿದ್ದಾರೆ. ಅದಕ್ಕಾಗಿ ಮೊದಲಿನಂತೆಯೇ ಸ್ಲಿಮ್‌ ಆಗುವ ಪಣತೊಟ್ಟು ಅದರಲ್ಲಿ ಸಕ್ಸಸ್‌ ಕೂಡ ಆಗಿದ್ದಾರೆ. ಅದರ ಫೋಟೋ ಅನ್ನು ತಮ್ಮ ಇನ್ಟಾಗ್ರಾಂ ಖಾತೆಯಲ್ಲಿ ಕರೀನಾ ಹಂಚಿಕೊಂಡಿದ್ದಾರೆ.
A post shared by Kareena Kapoor Khan (@kareenakapoorkhan)
ಕರೀನಾ ಪ್ರಿಂಟೆಡ್ ಬ್ಯಾಂಡೊ ಮೇಲುಡುಪಿನ ಜತೆ, ಗ್ಲಾಸ್‍ವೊಂದರ ಮುಂದೆ ಫೋಟೋಗೆ ಪೋಸ್ ಕೊಟ್ಟಿದ್ದನ್ನು ಫೋಟೋದಲ್ಲಿ ನೋಡಬಹುದು. ಫೋಟೋದ ಹಿಂಬದಿಯಲ್ಲಿ ಸ್ವಿಮಿಂಗ್ ಪೂಲ್ ಕಾಣಿಸುತ್ತದೆ. ಜತೆಗೆ ವರ್ಕ್‌ಔಟ್‌ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿ ಯೋಗದ ಮ್ಯಾಟ್ ಕೂಡ ಹಿಂದುಗಡೆ ಕಾಣಿಸುತ್ತಿದ್ದಾರೆ.
ಫೋಟೊ ಜೊತೆಗೆ ಗ್ಲಾಸ್‍ನಲ್ಲಿ ಕಾಣಿಸುತ್ತಿರುವ ವಸ್ತುಗಳು ಬಹಳಷ್ಟು ಹತ್ತಿರದಲ್ಲಿದೆ. ಆದ್ದರಿಂದ ಅಂತರವನ್ನು ಕಾಯ್ದುಕೊಳ್ಳಿ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್‌ಗೆ 2012ರಲ್ಲಿ ಮದುವೆಯಾಗಿದ್ದು, ಮೊದಲ ಮಗು ತೈಮೂರ್‌ 2016ರಲ್ಲಿ ಹುಟ್ಟಿದ್ದ. ನಂತರ ಇದೀಗ ಎರಡನೆಯ ಮಗು ಜನಿಸಿದೆ.
ಕಿಸ್‌ ಮಾಡೋಕೂ ಇಲ್ಲಿದೆ ಕಾನೂನು: ಎರ್ರಾಬಿರ್ರಿ ಮನಸ್ಸು ಬಂದಲ್ಲೆಲ್ಲಾ ಮುತ್ತಿಕ್ಕಿದ್ರೆ ಜೈಲು ಶಿಕ್ಷೆ ಗ್ಯಾರೆಂಟಿ!

ರಿಲಯನ್ಸ್‌ನಿಂದ ಸಿಬ್ಬಂದಿಗೆ ನೆರವಿನ ಮಹಾಪೂರ: ಐದು ವರ್ಷದ ವೇತನ, ಶಿಕ್ಷಣ ಸೌಲಭ್ಯ, ಆಸ್ಪತ್ರೆ ಖರ್ಚು…

ಪಾಪಿ ಅಪ್ಪ ಮಗನಿಗೆ ಕೊಟ್ಟ ಈ ಭಯಾನಕ ಶಿಕ್ಷೆ ನೋಡಿದರೆ ಎದೆ ಝಲ್ಲೆನ್ನದೇ ಇರಲಾರದು! ಫೋಟೋ ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
