ಮುಂಬೈ:ಈಗ ಕರೊನಾ ಯಾವ ಕ್ಷೇತ್ರವನ್ನೂ, ಎಂಥ ದಿಗ್ಗಜರನ್ನು, ಎಂತೆಂಥ ಸೆಲೆಬ್ರಿಟಿಗಳನ್ನೂ ಬಿಡುತ್ತಿಲ್ಲ. ಸಿನಿಮಾ ರಂಗದಲ್ಲಿಯೂ ಕೂಡ ಅನೇಕ ಮಂದಿ ನಟ- ನಟಿಯರು ಸೋಂಕಿಗೆ ಒಳಗಾಗಿದ್ದಾರೆ, ಕೆಲವರು ಚಿಕಿತ್ಸೆ ಮುಂದುವರೆಸಿದ್ದಾರೆ.
ಈ ನಡುವೆ ಬಾಲಿವುಡ್​ ತಾರೆ ಕರೀನಾ ಕಪೂರ್​ 26 ಸಾವಿರ ರೂಪಾಯಿಯ ಮಾಸ್ಕ್​ ಧರಿಸಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಸುಮಾರು 26 ಸಾವಿರ ರೂಪಾಯಿ ಬೆಲೆಯ ಮಾಸ್ಕ್​ ಇದಾಗಿದ್ದು, ಇದನ್ನು ಧರಿಸಿ ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.


A post shared by Kareena Kapoor Khan (@kareenakapoorkhan)

ನಾನು ಮಾಸ್ಕ್​ ಧರಿಸಿರುವುದು ಪ್ರಚಾರಕ್ಕೆ ಅಲ್ಲ. ಅದೇ ರೀತಿ ಮಾಸ್ಕ್​ ಕೂಡ ಪ್ರಚಾರಕ್ಕಾಗಿ ಧರಿಸಬೇಡಿ. ಬದಲಿಗೆ ಸುಮ್ನೆ ಮಾಸ್ಕ್ ಹಾಕಿಕೊಳ್ಳಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಮೂಲಕ ಎಲ್ಲರಿಗೂ ಮಾಸ್ಕ್​ ಧರಿಸುವಂತೆ ಸಂದೇಶ ನೀಡಿದ್ದಾರೆ. ಸಿನಿ ಪ್ರಿಯರು ತಮ್ಮ ಅಭಿಮಾನಿಗಳನ್ನೇ ಫಾಲೋ ಮಾಡುವುದು ಹೆಚ್ಚು. ಆದ್ದರಿಂದ ಈ ಮೂಲಕ ತಮ್ಮ ನೆಚ್ಚಿನ ತಾರೆ ಇಂಥದ್ದೊಂದು ಸಂದೇಶ ನೀಡಿದ್ದರಿಂದ ತಾವೂ ಮಾಸ್ಕ್​ ಧರಿಸಲು ಮುಂದಾಗಬಹುದು ಎನ್ನುವ ಕಾರಣಕ್ಕೆ ಕರೀನಾ ಈ ಪೋಸ್ಟ್​ ಶೇರ್​ ಮಾಡಿಕೊಂಡಿದ್ದಾರೆ.
ಕರೀನಾ ಮಾತ್ರವಲ್ಲದೇ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ ಮುಂತಾದ ಹಲವಾರು ಪ್ರಸಿದ್ಧ ವ್ಯಕ್ತಿಗಳು ಈ ದುಬಾರಿ ಬೆಲೆಯ ಮಾಸ್ಕ್ ಬಳಸುತ್ತಿದ್ದಾರೆ. ಈ ಮಾಸ್ಕ್ ಮರುಬಳಕೆ ಮಾಡಬಹುದಾಗಿದೆ. ಇದರ ವಿಶೇಷತೆ ಎಂದರೆ ಇದನ್ನು ಇಡಲು ರೇಷ್ಮೆ ಬ್ಯಾಗ್ ಕೂಡ ಇದೆ. ಕರೀನಾ ಕಪೂರ್​ ತಮ್ಮ ಫೋಟೋ ಶೇರ್​ ಮಾಡಿದ್ದು, ಅಭಿಮಾನಿಗಳ ಮೇಲೆ ಮಾಸ್ಕ್​ ಧರಿಸಲು ಎಷ್ಟು ಪ್ರೇರಣೆ ನೀಡಿತೋ ಗೊತ್ತಿಲ್ಲ, ಒಟ್ಟಿನಲ್ಲಿ ಇಷ್ಟು ದುಬಾರಿಯ ಮಾಸ್ಕ್​ ಮಾತ್ರ ಸಂಪೂರ್ಣ ಸೋಲ್ಡ್​ ಔಟ್​ ಆಗಿದೆಯಂತೆ!
ನಾನು ಇಷ್ಟಪಟ್ಟಾಕೆ ಬೇರೆ ಮದ್ವೆಯಾಗಲಿದ್ದು, ನನ್ನ ಜತೆ ಸೇರಲೂ ಸಿದ್ಧಳಿದ್ದಾಳೆ- ನಾನು ಒಪ್ಪಿದರೆ ತಪ್ಪಾ?

ನೀವು- ಸಿಎಂ ಮಾತಾಡಲ್ವಂತೆ ಹೌದಾ ಎಂದು ಕೇಳಿದ್ರೆ…. ​ ಹೆಂಡ್ತಿ, ಮಕ್ಳ ಜತೆ ನೀವ್​ ಮಾತಾಡಲ್ವಂತೆ ನಿಜನಾ ಎನ್ನೋದಾ?

ಕಾರಿನಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಮಾಸ್ಕ್​ ಬೇಕಾ? ಹೈಕೋರ್ಟ್​ ಏನು ಹೇಳಿದೆ ನೋಡಿ…

ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವಿರಾ?ವಿಜ್ಞಾನ, ತಂತ್ರಜ್ಞಾನ ಇಲಾಖೆಯಲ್ಲಿ ಇವೆ ಹುದ್ದೆಗಳು…

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:12 − ten =
Remember me
