ಮುಂಬೈ:ಬಾಲಿವುಡ್‌ನ ಪ್ರಖ್ಯಾತ ಜೋಡಿ ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಎರಡನೇ ಬಾರಿ ಅಪ್ಪ- ಅಮ್ಮ ಆಗಿದ್ದಾರೆ. ಇಂದು ನಸುಕಿನಲ್ಲಿ ಕರೀನಾ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.
ಈ ಮೊದಲು ಒಂದು ಗಂಡು ಮಗುವಿನ ಪಾಲಕರಾಗಿರುವ ಈ ಜೋಡಿ, ಇದೀಗ ಮತ್ತೊಂದು ಮಗನ ಪಾಲಕರಾಗಿದ್ದಾರೆ. ಮೊದಲ ಮಗ ತೈಮೂರ್‌ಗೆ ಈಗ ನಾಲ್ಕು ವರ್ಷ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ 4:45ರ ಸುಮಾರಿಗೆ ಡೆಲಿವರಿ ಆಗಿದೆ.
ಫೆಬ್ರವರಿ 15ರಂದು ಕರೀನಾ ಅವರಿಗೆ ಡೆಲಿವರಿ ದಿನಾಂಕ ನೀಡಲಾಗಿತ್ತು. ಆದರೆ ಒಂದು ವಾರ ಡೆಲಿವರಿ ಮುಂದಕ್ಕೆ ಹೋಗಿ ಇಂದು ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯದಿಂದ ಇರುವುದಾಗಿ ವೈದ್ಯರು ತಿಳಿಸಿದ್ದಾರೆ.
ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಕಳೆದ ಆಗಸ್ಟ್‌ನಲ್ಲಿ ಈ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು. ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಬಾರೀ ವೈರಲ್ ಆಗುತ್ತಿದ್ದು ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಕರೀನಾ ಕಪೂರ್ ಖಾನ್ ಗರ್ಭವತಿಯಾಗಿದ್ದ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳದೆ ತಮ್ಮೆಲ್ಲಾ ನಿಗದಿತ ಕೆಲಸಗಳನ್ನು ಮುಗಿಸುವಲ್ಲಿ ನಿರತರಾಗಿದ್ದರು. ಬಾಲಿವುಡ್ ಮೂಲದಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕರೀನಾ ಚಿತ್ರ ಹಾಗೂ ಜಾಹಿರಾತಿನ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ತಮ್ಮೆಲ್ಲಾ ಕೆಲಸಗಳನ್ನು ಡೆಲಿವರಿಗೆ ಮೊದಲೇ ಪೂರ್ಣಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಪತ್ನಿಗೆ ಮಕ್ಕಳಾಗುವುದಿಲ್ಲ, ಇನ್ನೊಂದು ಮದ್ವೆಯಾಗಲು ಬಿಡ್ತಿಲ್ಲ- ಕಾನೂನಿನಡಿ ನಾನು ಏನು ಮಾಡಬಹುದು?

10ನೇ ತರಗತಿ ಪರೀಕ್ಷೆ ಬರಿಯುತ್ತಲೇ ಹೆರಿಗೆ ನೋವು- ಮಗುವಿಗೆ ಜನ್ಮ: ಪಾಪುವಿಗೆ ಪರೀಕ್ಷೆಯ ಹೆಸರು

ಅಂದು ಕಾರಸೇವಕರ ಮೇಲೆ ಶೂಟೌಟ್‌ಗೆ ಆದೇಶಿಸಿದ್ದ ಮಾವ: ಇಂದು ರಾಮಮಂದಿರಕ್ಕೆ 11 ಲಕ್ಷ ರೂ ದೇಣಿಗೆ ಕೊಟ್ಟ ಸೊಸೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 + ten =
Remember me
