ನವದೆಹಲಿ:ಇಂದು ಕಾರ್ಗಿಲ್​ ವಿಜಯ್​ ದಿವಸ. ಇದರ ಅಂಗವಾಗಿ ಭಾರತೀಯ ಸೇನೆ ಕಾಶ್ಮೀರದ ಕಣಿವೆ ಹಾಗೂ ಲಡಾಖ್​​ನ ಕಡಿದಾಗಿರುವ ಪರ್ವತ ಶ್ರೇಣಿಯಲ್ಲಿ 11,649 ಅಡಿಯಷ್ಟು ಎತ್ತರದಲ್ಲಿ ಎರಡು ಬೈಕ್​ ರ‍್ಯಾಲಿಗಳನ್ನು ನಡೆಸಿದೆ.
ಕಾರ್ಗಿಲ್​ ಯುದ್ಧ ಸ್ಮಾರಕದಲ್ಲಿನ ಹುತಾತ್ಮ ಭಾರತೀಯ ಸೇನೆ ಯೋಧರಿಗೆ ಈ ಮೂಲಕ ನಮನ ಸಲ್ಲಿಸಿದೆ. ರ‍್ಯಾಲಿ ಆರಂಭದ ಕುರಿತು ಟ್ವಿಟರ್​ನಲ್ಲಿ ವಿಡಿಯೋ ವೈರಲ್​ ಆಗಿದೆ. ಒಂದು ಬೈಕ್ ​ರ‍್ಯಾಲಿ ಮುನ್ನಡಿಸಿದ, ಕಾರ್ಗಿಲ್​ ಹೀರೋ, ಉತ್ತರ ಸೈನ್ಯದ ಕಮಾಂಡರ್​ ಲೆಫ್ಟಿನಂಟ್​ ಜನರಲ್​ ವೈ.ಕೆ. ಜೋಶಿ ಹೇಗಿದೆ ಜೋಶ್​ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉಳಿದ ಯೋಧರು ಹೈ ಸರ್​ ಎಂದು ಉತ್ತರ ಕೊಟ್ಟಿದ್ದು, ಅದೀಗ ಸಹಸ್ರಾರು ಮಂದಿಯ ಹೃದಯ ಗೆದ್ದಿದೆ.
11,649 ಅಡಿಯಲ್ಲಿರುವ ಭಯಾನಕ ಜೋಜಿಲಾ ಪಾಸ್​ನ್ನು ಬೈಕ್​ ಸವಾರರು ದಾಟಲಿದ್ದಾರೆ. ಟ್ವಿಟರ್​ನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದ್ದು ಆರ್ಮಿ ಕಮಾಂಡರ್​ ತಂಡವನ್ನ ಮುನ್ನಡೆಸೋದು ಅಂದರೆ ಜೋಶ್​ ಹೆಚ್ಚಾಗಿಯೇ ಇರಬೇಕು ಎಂದು ಶೀರ್ಷಿಕೆ ನೀಡಲಾಗಿದೆ.
#SundayInspirationWhen Army Commander leads from the front, the Josh has to be Sky high!"The easier portion of the Dhruva Bike rally starts now"…says Lt Gen YK Joshi,#ArmyCdrNCjust before crossing the dangerous Zojila pass which is at 11649 feet!#DhruvaKargilRidepic.twitter.com/GOYWEoCvpy
— PRO Udhampur, Ministry of Defence (@proudhampur)July 25, 2021

20 ಗುಂಡು ಎದೆ ಸೀಳಿದರೂ 17 ಪಾಕಿಗಳ ಸದೆಬಡಿದ ಯೋಧನ ಮೈ ನವಿರೇಳಿಸುವ ಘಟನೆಯಿದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
