ಕರಾಚಿ:ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಭಯಾನಕ ಕಾರ್ಗಿಲ್​ ಯುದ್ಧ ಮುಗಿದು 21 ವರ್ಷಗಳ ಬಳಿಕ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಷರೀಫ್​ ತನ್ನ ಸೈನಿಕರನ್ನು ಪಾಕಿಸ್ತಾನ ನಡೆಸಿಕೊಂಡ ರೀತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಸರ್ಕಾರ ವಿರೋಧಿ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದ ವೇಳೆ 1999ರ ಕಾರ್ಗಿಲ್ ಯುದ್ಧವನ್ನು ನೆನಪಿಸಿಕೊಂಡರು. ಲಂಡನ್‌ನಿಂದ ವೀಡಿಯೊ ಲಿಂಕ್ ಮೂಲಕ ಮಾತನಾಡಿದ ಅವರು ಪಾಕಿಸ್ತಾನದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 11 ವಿರೋಧಪಕ್ಷಗಳ ಮೈತ್ರಿಕೂಟ ನಡೆಸುತ್ತಿರುವ ಪಾಕಿಸ್ತಾನ್ ಡೆಮಾಕ್ರಟಿಕ್ ಚಳವಳಿಯ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
“ನಮ್ಮ ಕೆಚ್ಚೆದೆಯ ಸೈನಿಕರ ಸಾವಿಗೆ ಕಾಣವಾದದ್ದು ಅವರಿಗೆ ಪಾಕಿಸ್ತಾನ ಸರ್ಕಾರ ನಡೆಸಿಕೊಂಡಿರುವ ರೀತಿ. ಅವರನ್ನು ಸರ್ಕಾರ ಅವಮಾನಿಸಿತು. ಕಾರ್ಗಿಲ್ ಯುದ್ಧದ ಆರಂಭವಾದಾಗಿನಿಂದಲೂ ನಮ್ಮ ಸೈನಿಕರಿಗೆ ಯಾವುದೇ ರೀತಿಯ ಸೂಕ್ತ ರಕ್ಷಣೆಯನ್ನು ಸರ್ಕಾರ ನೀಡಲಿಲ್ಲ. ಇದರಿಂದಾಗಿ ಸೈನಿಕರು ಅಪಾರ ಸಂಖ್ಯೆಯಲ್ಲಿ ಸಾವು-ನೋವು ಅನುಭವಿಸಬೇಕಾಯಿತು ಎಂದು ನವಾಜ್​ ಷರೀಫ್​ ಆರೋಪಿಸಿದ್ದಾರೆ.
ಇದನ್ನೂ ಓದಿ:VIDEO: ಕಾಂಗ್ರೆಸ್​ ಮುಖಂಡನ ನೇತೃತ್ವದಲ್ಲಿ ರಾವಣನ ಸುಡುವಾಗ ಸ್ಫೋಟ!
ನಮ್ಮ ಸೈನಿಕರು ಆಹಾರವಿಲ್ಲದೆ ಬದುಕುಳಿಯುವ ಸ್ಥಿತಿ ಒಂದು ಹಂತಕ್ಕೆ ಬಂದಿತ್ತು. ಗಾಯಾಳುಗಳನ್ನು ಅವರ ಬಿಡಾರಗಳಿಗೆ ಕಳುಹಿಸಿದಾಗಲೂ ಅವರಿಗೆ ಸರಿಯಾದ ಊಟದ ವ್ಯವಸ್ಥೆಯನ್ನು ಮಾಡಿರಲಿಲ್ಲ. ಇದು ಅತ್ಯಂತ ನೋವಿನ ಸಂಗತಿ. ಅಷ್ಟೇ ಅಲ್ಲದೇ ಯುದ್ಧಭೂಮಿಗೆ ಕಳುಹಿಸುವಾಗಲೂ ಶಸ್ತ್ರಾಸ್ತ್ರ ನೀಡಿರಲಿಲ್ಲ. ಎತ್ತರದ ಪರ್ವತ ಪ್ರದೇಶಗಳಿಗೆ ನಮ್ಮ ಧೈರ್ಯಶಾಲಿ ಸೈನಿಕರನ್ನು ಕಳುಹಿಸಿದಾಗ ಅವರು ಬಳಲಿ ಹೋಗಿದ್ದರು, ಏಕೆಂದರೆ ಅವರಿಗೆ ಆಹಾರವೇ ಇರಲಿಲ್ಲ’ ಎಂದು ಷರೀಫ್​ ಆರೋಪಿಸಿದ್ದಾರೆ.
ಅಂದಿನ ಪ್ರಧಾನಿ ಪರ್ವೇಜ್ ಮುಷರಫ್ ಮತ್ತು ಅವರ ಸಹಚರರು ಸೈನ್ಯವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡರು. ಸೈನಿಕರು ತಮ್ಮ ಜೀವಗಳನ್ನು ತ್ಯಾಗ ಮಾಡಿದ್ದರೂ ಅವರ ಬಗ್ಗೆ ಕಾಳಜಿ ತೋರಲಿಲ್ಲ. ಸೈನಿಕರ ಬಲಿದಾನದಿಂದ ದೇಶ ಅಥವಾ ಸಮುದಾಯ ಸಾಧಿಸಿದ್ದೇನು? ಎಂದು ಪ್ರಶ್ನಿಸಿದ್ದಾರೆ.
‘ಕ್ರಿಸ್ಮಸ್​ಗೆ ವಿಷ್ಣುಸಹಸ್ರನಾಮ ಪಾರಾಯಣ, ಈದ್​ಗೆ ಗಣಹೋಮ ಮಾಡ್ತಾರಾ?’

ಸೆಕ್ಸ್​ ದಂಧೆಗೆ ಆನ್​ಲೈನ್​ನಲ್ಲಿರುವ ಮಕ್ಕಳೇ ಟಾರ್ಗೆಟ್​- ಖತರ್ನಾಕ್​ ನಟ ಸಿಬಿಐ ಬಲೆಗೆ

ಚುನಾವಣೆಗೆ ವಾರದ ಮೊದಲೇ ಆರು ಕೋಟಿ ಮತ ಚಲಾವಣೆ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × 1 =
Remember me
