1999ರ ಜುಲೈ ತಿಂಗಳು.ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್​ನಲ್ಲಿ ಭಯಾನಕ ಕಾಳಗ ನಡೆಯುತ್ತಿತ್ತು.
ಟೈಗರ್​ ಹಿಲ್​ನ ತುತ್ತ ತುದಿಯಲ್ಲಿ ಪಾಕಿಸ್ತಾನದ ಸೈನಿಕರು ನಿಂತಿದ್ದರು. ಎಲ್ಲೆಡೆ ಗುಂಡಿನ ಮೊರೆತ. ಹೆಣಗಳ ರಾಶಿ. ಟೈಗರ್​ ಹಿಲ್​ ಹತ್ತಿ ಹೋಗುವ ದಾರಿ ಬಲು ದುರ್ಗಮ. ಕಾಲರ್​ ಎಂಬ ಜಾಗ ಬಹು ಕಡಿದಾಗಿದ್ದು, ಸಾಮಾನ್ಯರು ಅದರನ್ನು ಹತ್ತುವುದು ಅಸಂಭವವೇ ಆಗಿತ್ತು. ಆದರೆ ಪಾಕ್​ ಸೈನಿಕರನ್ನು ಹೊಡೆದುರುಳಿಸಲು ಆ ಪರ್ವತವನ್ನೇರುವುದು ಅನಿವಾರ್ಯವಾಗಿತ್ತು. ಭಾರತದ ಕೀರ್ತಿ ಪತಾಕೆ ಹಾರಿಸುವುದನ್ನಷ್ಟೇ ಗುರಿಯಾಗಿಸಿಕೊಂಡಿದ್ದ ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ ಏಳು ಯೋಧರೊಂದಿಗೆ ಮೇಲಕ್ಕೇರಿದರು.
6 ಯೋಧರು ಯೋಗೇಂದ್ರ ಸಿಂಗ್​ ಯಾದವ್​ ಅವರ ಜತೆ ಮೇಲೇರಿದರು. ಸ್ವಲ್ಪವೇ ಸದ್ದಾದರೂ ಮೇಲೆ ಇರುವ ಪಾಕಿಗಳು ಎಚ್ಚರಗೊಂಡು ಮೇಲಿನಿಂದ ಗುಂಡಿನ ಸುರಿಮಳೆಯಾದರೆ ಅಷ್ಟೇ ಕಥೆ. ಆದರೆ ಏಳನೇ ಯೋಧ ಗುಡ್ಡ ಹತ್ತಬೇಕು ಎನ್ನುವಷ್ಟರಲ್ಲಿ ಕಲ್ಲು ಜಾರಿಬಿಟ್ಟಿತ್ತು. ಸದ್ದು ಬಂದಾಗ ಮೇಲಿದ್ದ ಪಾಕಿಸ್ತಾನಿ ಸೈನಿಕರು ಎಚ್ಚೆತ್ತುಕೊಂಡು ಗುಂಡಿನ ದಾಳಿ ಶುರು ಮಾಡಿದರು. ದಾಳಿ- ಪ್ರತಿದಾಳಿ ನಡೆಯಿತು.
ಏಳೂ ಯೋಧರು ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ ನೇತೃತ್ವದಲ್ಲಿ ಪಾಕಿಸ್ತಾನ ಸೇನೆಯನ್ನು ಅಡ್ಡಗಟ್ಟಿ ನಿಂತರು. ಬಂಕರ್​ನಿಂದ ಬರುತ್ತಿದ್ದ ದಾಳಿಯನ್ನು ತಡೆದರು. ಅಲ್ಲಿದ್ದ ಎಲ್ಲಾ ಪಾಕ್​ ಸೈನಿಕರನ್ನು ಹೊಡೆದುರುಳಿಸುವಲ್ಲಿಯೂ ಯಶಸ್ವಿಯಾದರು. ಅಲ್ಲಿದದ ಬಂಕರ್​ ಅನ್ನು ವಶಪಡಿಸಿಕೊಂಡರು. ಇದೇ ಸಂತಸದಲ್ಲಿತ್ತು ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ ತಂಡ.
ಆದರೆ ಗುಡ್ಡದ ಮೇಲಿರುವುದು ಕೇವಲ ಏಳು ಮಂದಿ ಭಾರತೀಯ ಯೋಧರು ಎಂದು ಅರಿವಿಗೆ ಬರುತ್ತಿದ್ದಂತೆಯೇ ಪಾಕಿಸ್ತಾನದ 100 ಜನ ಯೋಧರು ದಾಳಿ ಶುರು ಮಾಡಿದರು. ಈ ಸಂದರ್ಭದಲ್ಲಿ ಈ ಏಳೇ ಯೋಧರು 30 ಮಂದಿಯನ್ನು ಹೊಡೆದುರುಳಿಸಿದರು. ಆದರೆ ದುರಾದೃಷ್ಟ ಎಂದರೆ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಜೊತೆಗಿದ್ದ ಆರು ಯೋಧರು ಹುತಾತ್ಮರಾದರು.
ಬದುಕುಳಿದ್ದವರು ಯಾದವ್​ ಅವರು ಮಾತ್ರ. ಅತ್ತ ಪಾಕಿಸ್ತಾನಿ ಯೋಧರ ಆಕ್ರಮಣ ತೀವ್ರವಾಯಿತು. ಆಗ ಏನು ಮಾಡಲು ತೋಚದ ಯಾದವ್​ ಅವರು ಸತ್ತಂತೆ ನಟಿಸಿದರು. ಆದರೂ ಬಿಡದ ಪಾಕ್​ ಸೈನಿಕರು ಸತ್ತವರ ಮೇಲೂ ಗುಂಡಿನ ದಾಳಿ ನಡೆಸಲು ಶುರು ಮಾಡುತ್ತಿದ್ದಂತೆಯೇ ಯೋಗೇಂದ್ರ ಸಿಂಗ್ ಯಾದವ್ ಅವರ ದೇಹವನ್ನು 20 ಗುಂಡುಗಳು ಛೇದಿಸಿದವು. ಅಲ್ಲಿದ್ದ ಎಲ್ಲಾ ಶಸ್ತ್ರಗಳನ್ನು ಪಾಕಿಗಳು ಕೊಂಡೊಯ್ದರು. ಆದರೆ ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರ ಜೇಬಿನಲ್ಲಿದ್ದ ಗ್ರೆನೇಡ್ ಇದ್ದವು. ಅದು ಪಾಕಿಗಳ ಗಮನಕ್ಕೆ ಬರಲಿಲ್ಲ. 20 ಗುಂಡು ದೇಹವನ್ನು ಹೊಕ್ಕಿದ್ದರೂ ಲೆಕ್ಕಿಸದ ಯಾದವ್​ ಅವರು ಜೇಬಿನಲ್ಲಿದ್ದ ಗ್ರೆನೇಡ್ ತೆಗೆದು ಸೈನಿಕರ ಮೇಲೆ ಎಸೆದರು. 17 ಮಂದಿ ಪಾಕಿಸ್ತಾನದ ಸೈನಿಕರು ಮೃತಪಟ್ಟರು. ಏಕಾಏಕಿ ಏನಾಯಿತು ಎಂದು ತಿಳಿಯದ ಈ ಸೈನಿಕರು ಭಾರತೀಯ ಸೇನೆ ಬಂದಿದೆ ಎಂದು ದಿಕ್ಕಾಪಾಲಾಗಿ ಓಡಿದರು.
ನಂತರ ಚಿಕಿತ್ಸೆಯ ನಂತರ ಯೋಗೇಂದ್ರ ಸಿಂಗ್​ ಯಾದವ್​ ಗುಣಮುಖರಾದರು. ಈ ಯುದ್ಧದಲ್ಲಿ 527 ಭಾರತದ ಯೋಧರು ಹುತಾತ್ಮರಾಗಿದ್ದಾರೆ. ಈ ಯೋಧರ ಪೈಕಿ ನಾಲ್ವರಿಗೆ ಪರಮವೀರ ಚಕ್ರ ಗೌರವ ದೊರೆತಿದ್ದು, ಈ ಪೈಕಿ ಮೂವರಿಗೆ ಮರಣೋತ್ತರವಾಗಿ ಈ ಗೌರವ ಸಿಕ್ಕಿದೆ. ಬದುಕುಳಿದು, ಪರಮವೀರ ಚಕ್ರ ಪಡೆದುಕೊಂಡವರು ಮೀರತ್​ನ ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್. ಈ ಗೌರವ ಪಡೆದಿರುವ ಅತಿ ಚಿಕ್ಕವಯಸ್ಸಿನ ಯೋಧ ಎಂಬ ಹೆಮ್ಮೆ ಕೂಡ ಇವರದ್ದು. 20 ಗುಂಡುಗಳನ್ನು ದೇಹದ ಮೇಲೆ ಹೊಕ್ಕಿಸಿಕೊಂಡ ನಂತರವೂ ಏಕಾಂಗಿಯಾಗಿ ಪಾಕಿಸ್ತಾನದ ಸೇನೆಯನ್ನು ಹಿಮ್ಮೆಟ್ಟಿಸಿದ್ದ ಇವರ ದಿಟ್ಟತನಕ್ಕೊಂದು ಸಲಾಂ.
ಕಾರ್ಗಿಲ್ ವಿಜಯ್ ದಿವಸ್| ಕಾರ್ಗಿಲ್​​ನಲ್ಲಿ ಸತ್ಯ ಮೇವ ಜಯತೆ ಸಂಭ್ರಮಕ್ಕೆ 22 ವಸಂತಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + twenty =
Remember me
