ಲಂಡನ್:ಭಾರತದ್ದೇ ಭಾಗವಾಗಿರುವ ಕಾಶ್ಮೀರವನ್ನು ಪಾಕಿಸ್ತಾನ ಆಕ್ರಮಿಸಿಕೊಂಡು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಓಕೆ) ಆದರೆ ಬ್ರಿಟನ್‌ ಸಂಸದೆಯೊಬ್ಬರು ಭಾರತ ಆಕ್ರಮಿತ ಕಾಶ್ಮೀರದಿಂದ (ಐಓಕೆ) ಕಾಶ್ಮೀರಿಗಳನ್ನು ಪಾರು ಮಾಡಬೇಕಿದೆ ಎಂದು ಪತ್ರ ಬರೆದಿದ್ದಾರೆ.
ಹೀಗೆಂದು ವಿಚಿತ್ರವಾಗಿರುವ ಪತ್ರ ಬರೆದಿರುವವರು ಬ್ರಿಟನ್‌ನ ಲೇಬರ್ ಪಾರ್ಟಿಯ ಸಂಸದೆ ಜಾರಾ ಸುಲ್ತಾನ್‌. ಈಕೆ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಪತ್ರ ಬರೆದು ಭಾರತದ ಕೈಯಿಂದ ಕಾಶ್ಮೀರಿಗಳನ್ನು ಬಚಾವ್‌ ಮಾಡಲು ಸಹಾಯ ಮಾಡಬೇಕಿದೆ ಎಂದಿದ್ದಾರೆ! ಈ ಸಂಸದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲದವರು.
ಭಾರತದ ವಿರುದ್ಧ ಅಪಪ್ರಚಾರ ನಡೆಸಲು ಪಾಕಿಸ್ತಾನದಿಂದ ಬ್ರಿಟನ್‌ನ ಕೆಲವು ಸಂಸದರು ಹಣ ಪಡೆದುಕೊಂಡಿರುವುದಾಗಿ ಇತ್ತೀಚೆಗೆ ಭಾರಿ ಚರ್ಚೆಯಾದ ಬೆನ್ನಲ್ಲೇ ಈ ಸಂಸದೆ ಇದೀಗ ಕಾಶ್ಮೀರಿಗಳನ್ನು ಭಾರತೀಯರಿಂದ ರಕ್ಷಿಸಲು ಮುಂದಾಗಿದ್ದಾರೆ! ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಬ್ರಿಟನ್‌ ಸಂಸದರು ರಚಿಸಿಕೊಂಡಿದ್ದ ಸರ್ವಪಕ್ಷೀಯ ಸಂಸದೀಯ ಕಾಶ್ಮೀರ ನಿಯೋಗ (ಎಪಿಪಿಜಿಕೆ) ಪಾಕ್‌ನಿಂದ ಲಂಚ ಪಡೆದಿರುವುದಾಗಿ ವರದಿಯಾಗಿತ್ತು.
ಇದನ್ನೂ ಓದಿ:370 ವಿಧಿ ರದ್ದತಿಗೆ ಒಂದು ವರ್ಷ: ಉಗ್ರರ ಸ್ಥಿತಿ ಹೀಗಿದೆ ನೋಡಿ…
ಕಾಶ್ಮೀರದ ಜನರಿಗೆ ನ್ಯಾಯ ಕೊಡಿಸಬೇಕು. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಹಿಂದಕ್ಕೆ ಪಡೆಯುವ ಮೂಲಕ ಅನ್ಯಾಯ ಮಾಡಲಾಗಿದೆ. ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಗೆ ವಹಿಸಲು ಬ್ರಿಟನ್ ಸರ್ಕಾರ ಮುಂದಾಗಬೇಕಿದೆ ಎಂದು ಪತ್ರದಲ್ಲಿ ಬರೆದಿರುವ ಈಕೆ, ನೆರವು ನೀಡುವಂತೆ ಕೋರಿದ್ದಾರೆ.
ಭಾರತ ಆಕ್ರಮಿತ ಕಾಶ್ಮೀರ ಎಂದು ತನ್ನ ಪತ್ರದಲ್ಲಿ ಕರೆದಿದ್ದು 370 ಮತ್ತು 35ಎ ವಿಧಿ ರದ್ದು ಮಾಡಿ ಹಕ್ಕು ಕಸಿದುಕೊಳ್ಳಲಾಗಿದ್ದು ಬ್ರಿಟನ್ ಮಧ್ಯ ಪ್ರವೇಶ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಸ್ಮಗ್ಲಿಂಗ್‌ ರಾಣಿಗೂ ಕೇರಳ ಸಿಎಂಗೂ ಇದೆ ಲಿಂಕ್‌: ತನಿಖೆಯಿಂದ ಬಯಲಾಯ್ತು ಸತ್ಯ

ಆ.9ರಂದು ದೇಶಾದ್ಯಂತ ಮತ್ತೊಮ್ಮೆ ‘ಕ್ವಿಟ್‌ ಇಂಡಿಯಾ’ ಚಳವಳಿ- ಏಕೆ ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + 6 =
Remember me
