ಕಾಶ್ಮೀರ: ಇತ್ತ ಕರ್ನಾಟಕದಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಲಿಲ್ಲ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಗಲಾಟೆ ಮಾಡುತ್ತಿದ್ದರೆ, ಅತ್ತ ಕಾಶ್ಮೀರದ 12ನೇ ತರಗತಿ ಟಾಪರ್‌ ಹಿಜಾಬ್‌ ಬಗ್ಗೆ ಖಡಕ್‌ ಉತ್ತರ ನೀಡಿದ್ದಾಳೆ. ಹಿಜಾಬ್‌ ಧರಿಸದೇ ಇದ್ದುದಕ್ಕೆ ಅತ್ಯಾಚಾರ, ಕೊಲೆ ಬೆದರಿಕೆಯನ್ನು ಎದುರಿಸಿರುವ ವಿದ್ಯಾರ್ಥಿನಿ ಯಾವುದಕ್ಕೂ ಜಗ್ಗದೇ ಪ್ರತಿಕ್ರಿಯೆ ನೀಡಿದ್ದಾಳೆ.
ಈ ವಿದ್ಯಾರ್ಥಿನಿ ಹೆಸರು  ಅರೋಸಾ ಪರ್ವೈಜ್. ಜಮ್ಮು ಮತ್ತು ಕಾಶ್ಮೀರ ಸ್ಟೇಟ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್‌ನ 12 ನೇ ತರಗತಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಕಾಶ್ಮೀರಿ ವಿದ್ಯಾರ್ಥಿನಿ ಅರೋಸಾ ಪರ್ವೈಜ್ ಇದೀಗ ಭಾರಿ ಸುದ್ದಿಯಲ್ಲಿದ್ದಾಳೆ. ಅಷ್ಟಕ್ಕೂ ಆಗಿದ್ದೇನೆಂದರೆ, ಅರೋಸಾ, ಜಮ್ಮು ಮತ್ತು ಕಾಶ್ಮೀರ ಸ್ಟೇಟ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್‌ನ 12 ನೇ ತರಗತಿ ಪರೀಕ್ಷೆಯಲ್ಲಿ 500 ಅಂಕಗಳಲ್ಲಿ 499 ಅಂಕಗಳನ್ನು ಗಳಿಸುವ ಮೂಲಕ ಶೇಕಡ 99.8 ರಷ್ಟು ಅಂಕ ಗಳಿಸಿ ಟಾಪರ್ ಆಗಿದ್ದಾಳೆ. ಈ ಹಿನ್ನೆಲೆಯಲ್ಲಿ ಈಕೆಯ ಸಂದರ್ಶನವನ್ನು ಅನೇಕ ಪತ್ರಿಕೆಗಳು ನಡೆಸಿದವು. ಸಂದರ್ಶನ ನೀಡುವ ವೇಳೆ ಈಕೆ ಹಿಜಾಬ್‌ ಧರಿಸಿರಲಿಲ್ಲ. ಸಂದರ್ಶನ ಪ್ರಕಟಗೊಂಡ ನಂತರ ಇವಳ ಫೋಟೋ ನೋಡಿ ಹಲವರಿಗೆ ಉರಿ ಹತ್ತಿದೆ. ಹಿಜಾಬ್‌ ಧರಿಸದೇ ಸಂದರ್ಶನ ನೀಡಿರುವ ಇವಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಟ್ರೋಲ್‌ ಮಾಡಲಾಗುತ್ತಿದೆ.
ಅರೋಸಾ ಪರ್ವೈಜ್ ಹಿಜಾಬ್ ಧರಿಸದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಆಕೆಗೆ ಕೆಲವರು ಅತ್ಯಾಚಾರ, ಕೊಲೆ ಬೆದರಿಕೆಯನ್ನು ಕೂಡಾ ಹಾಕಿದ್ದಾರೆ. ಆಕೆಗೆ ಇಸ್ಲಾಮಿನ ಪಾಠಗಳನ್ನು ಕಲಿಸಬೇಕು ಎಂದು ಹೇಳುತ್ತಾ, ಕರ್ನಾಟಕದಲ್ಲಿ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲು ಏರಿರುವ ಬಗ್ಗೆ ಉಲ್ಲೇಖ ಮಾಡಿದ್ದಾರೆ.
ಇದನ್ನು ನೋಡಿದ ಅರೋಸಾ ಟ್ರೋಲ್‌ ಮಾಡುತ್ತಿರುವವರಿಗೆ ಖಡಕ್‌ ಉತ್ತರ ಕೊಟ್ಟಿದ್ದಾಳೆ. ‘ನಾನು ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ, ಹಿಜಾಬ್‌ ಧರಿಸದಿದ್ದರೂ ನಾನು ಉತ್ತಮ ಮುಸ್ಲಿಂ ಎಂಬ ಹೆಮ್ಮೆ ನನಗಿದೆ. ಅದನ್ನು ಸಾಬೀತು ಮಾಡಲು ಹಿಜಾಬ್‌ ಧರಿಸಲೇ ಬೇಕೆಂದೇನು ಇಲ್ಲ. ಹಿಜಾಬ್ ಧರಿಸುವುದು ಅಥವಾ ಧರಿಸದಿರುವುದು ತಮ್ಮ ಧರ್ಮದ ಮೇಲೆ ನಾವು ಎಷ್ಟು ನಂಬಿಕೆ ಇರಿಸಿದ್ದೇವೆ ಎಂದು ಸಾಬೀತುಪಡಿಸುವ ಮಾನದಂಡವಲ್ಲ. ನಂಬಿಕೆಯನ್ನು ವ್ಯಾಖ್ಯಾನ ಮಾಡುವ ಅಸ್ತ್ರವೂ ಅಲ್ಲ. ಬಹುಶಃ, ನಾನು ಅವರಿಗಿಂತ ಹೆಚ್ಚು ಅಲ್ಲಾನನ್ನು ಪ್ರೀತಿಸುತ್ತೇನೆ. ನಾನು ಹೃದಯದಿಂದ ಮುಸಲ್ಮಾನನಾಗಿದ್ದೇನೆ, ಹಿಜಾಬ್‌ನಿಂದಲ್ಲ’ ಎಂದು ಟ್ರೋಲಿಗರ ಬಾಯಿ ಮುಚ್ಚಿಸಿದ್ದಾಳೆ.
VIDEO: ‘ಏಯ್‌… ವಿಡಿಯೋ ಮತ್ ಕರ್…’ ತಲೆಗೆ ಕೇಸರಿ ಶಾಲು ಧರಿಸಿದವರಾರು? ಕಿಚ್ಚು ಹೊತ್ತಿಸಿದ ವೈರಲ್‌ ವಿಡಿಯೋ
VIDEO: ಹಿಜಾಬ್‌ ವಿವಾದ- ಗಲಾಟೆ ಮಾಡ್ಬೇಡಿ ಎಂದು ಶಿಕ್ಷಕಿ ಮನವಿ ಮಾಡಿದ್ರೆ, ಈ ವಿದ್ಯಾರ್ಥಿನಿ ಹೇಳಿದ್ದು…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − 13 =
Remember me
