ಜಮ್ಮು:1990ರ ಮಾರ್ಚ್​ 10. ಕಾಶ್ಮೀರದಲ್ಲಿ ಹೇರಲಾಗಿದ್ದ ಕರ್ಫ್ಯೂ ಸಡಿಲಗೊಂಡಿತ್ತು. ಟೆಲಿಕಾಂ ಇಂಜಿನಿಯರ್ ಆಗಿದ್ದ ನನ್ನ ಅಣ್ಣ ಶಾಹೀದ್ ಬಾಲ್ ಕ್ರಿಶನ್ ಗಂಜು ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ. ಉಗ್ರರು ಹಿಂದೂಗಳನ್ನು ಹಿಂಬಾಲಿಸುತ್ತಿರುವ ಸುದ್ದಿ ನಮಗೆಲ್ಲಾ ಮೊದಲೇ ತಿಳಿದಿತ್ತು. ಆದರೆ ನನ್ನ ಅಣ್ಣನಿಗೆ ಉಗ್ರರು ಹಿಂಬಾಲಿಸುತ್ತಿದ್ದಾರೆ ಎಂದು ತಿಳಿದೇ ಇರಲಿಲ್ಲ.
ಮನೆಗೆ ಆತ ಬರುತ್ತಿದ್ದಂತೆಯೇ, ಅಣ್ಣನ ಪತ್ನಿಗೆ ಅಂದರೆ ನನ್ನ ಅತ್ತಿಗೆಗೆ ಯಾರೋ ಗಂಡನನ್ನು ಹಿಂಬಾಲಿಸಿಕೊಂಡು ಬರುತ್ತಿರುವುದು ಕಂಡಿತು. ಭಯದಿಂದ ಆಕೆ ಗಂಡನಿಗೆ ಕಣ್ಸನ್ನೆ ಮಾಡಿ ಪತಿಯನ್ನು ಮನೆಯೊಳಗೆ ಎಳೆದುಕೊಂಡು ಬಾಗಿಲು ಹಾಕಿಕೊಂಡರು. ವಿಷಯ ತಿಳಿದು ನನ್ನಣ್ಣ ತುಂಬಾ ಭಯಪಟ್ಟ. ಆದರೆ ಅದೃಷ್ಟ ಸರಿಯಿರಲಿಲ್ಲ. ಆತನನ್ನು ಹಿಂಬಾಲಿಸುತ್ತಿದ್ದ ಭಯೋತ್ಪಾದಕರು ಬಾಗಿಲು ಒಡೆದರು, ಮನೆಗೆ ನುಗ್ಗಿದರು.
ಮನೆಯಲ್ಲಿದ್ದ ಅಣ್ಣನ ಮಕ್ಕಳು, ಅತ್ತಿಗೆ ಸೇರಿದಂತೆ ಎಲ್ಲರ ಮೇಲೆ ಗುಂಡು ಹಾರಿಸಿದರು. ಆಗ ನನ್ನಣ್ಣ ಮೂರನೇ ಮಹಡಿಯತ್ತ ಓಡಿದ. ಅಲ್ಲಿಯೇ ಇದ್ದ ಅಕ್ಕಿ ತುಂಬಿದ್ದ ಡ್ರಮ್​ನಲ್ಲಿ ಅವಿತುಕೊಂಡ. ಆದರೆ ಅದು ಭಯೋತ್ಪಾದಕರಿಗೆ ತಿಳಿಯಿತು. ಕೊನೆಗೆ ಅಕ್ಕಿ ಡ್ರಮ್​ನಲ್ಲಿಯೇ ನನ್ನ ಅಣ್ಣನನ್ನು ಕೊಂದೇ ಬಿಟ್ಟರು…

ಕಾಶ್ಮೀರದ ಛೋಟಾ ಬಜಾರ್​ನಲ್ಲಿ ವಾಸವಿದ್ದ ಪಂಡಿತ್​ ಮನೆತನದ ಶಾಹೀದ್ ಬಾಲ್ ಕ್ರಿಶನ್ ಗಂಜುನ ಕುಟುಂಬ ಬರ್ಬರವಾಗಿ ಹತ್ಯೆಯಾಗಿದ್ದನ್ನು ಹೇಳಿಕೊಂಡವರು ಅವರ ಸಹೋದರಿ ಶಿಬನ್ ಗುಂಜಿ.
ದಿ ಕಾಶ್ಮೀರ್​ ಫೈಲ್ಸ್​ ಚಿತ್ರದಲ್ಲಿಯೂ ಈ ಹತ್ಯೆಯ ಸನ್ನಿವೇಶ ಬರುತ್ತದೆ. ‘ಕಾಶ್ಮೀರಿ ಪಂಡಿತ್ ನೆಟ್ ವರ್ಕ್’ ಎಂಬ ಜಾಲತಾಣದಲ್ಲಿ ಪ್ರಕಟವಾದ ಹತ್ಯೆಯಾದ ಕಾಶ್ಮೀರಿ ಪಂಡಿತರ ಪರಿಚಯದಲ್ಲೂ ಗಂಜು ಅವರ ಸಾವಿನ ಘಟನೆಯ ಉಲ್ಲೇಖವಿದೆ. ಈ ಸಿನಿಮಾದ ಬಿಡುಗಡೆಯ ನಂತರ ಶಿಬನ್​ ಅವರು ಈ ಕರಾಳ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ.
ಇಂಥ ಅದೆಷ್ಟೋ ನೋವಿನ ಘಟನೆಗಳು ಅಂದು ನಡೆದಿರುವುದಾಗಿ ಅವರು ಹೇಳಿದ್ದಾರೆ.
ಜಾತ್ರೆಗಳಲ್ಲಿ ಹಿಂದೂ ವ್ಯಾಪಾರಸ್ಥರಿಗೆ ಮಾತ್ರ ಅವಕಾಶ: ಹಿಜಾಬ್‌ ಪ್ರತಿಭಟನೆಯಲ್ಲಿ ನಾವಿಲ್ಲ ಎಂದು ಕಣ್ಣೀರು ಹಾಕ್ತಿರೋ ವ್ಯಾಪಾರಸ್ಥರು

ಮತಾಂತರಕ್ಕೆ ಒಪ್ಪದ ಯುವತಿಯನ್ನು ನಡುರಸ್ತೆಯಲ್ಲಿಯೇ ಮನಬಂದಂತೆ ಗುಂಡು ಹಾರಿಸಿ ಬರ್ಬರ ಹತ್ಯೆ!

ನಿದ್ದೆಗೆಡಿಸಿದ ‘ದಿ ಕಾಶ್ಮೀರ್​ ಫೈಲ್ಸ್’​: ಸಿನಿಮಾ ನೋಡಿ ಮರಳುತ್ತಿದ್ದ ಬಿಜೆಪಿ ಸಂಸದನ ಕಾರಿನ ಮೇಲೆ ಬಾಂಬ್‌!

ಪಂಡಿತರ ಹತ್ಯೆಗೆ ನಾನೇ ಹೊಣೆಯಾಗಿದ್ದರೆ ಯಾವ ಮೂಲೆಗಾದರೂ ಹೋಗಿ ಗಲ್ಲಿಗೇರಿಸಿ- ಫಾರೂಕ್‌ ಅಬ್ದುಲ್ಲಾ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × three =
Remember me
