ನವದೆಹಲಿ:ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ವೆಬ್‌ಸೈಟ್‌ನಲ್ಲಿ ಭಾರತದ ನಕಾಶೆ ತಪ್ಪಾಗಿ ಗುರುತಿಸಲಾಗಿದ್ದು, ಕೂಡಲೇ ಆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸಂತಾನು ಸೇನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಈ ವೆಬ್‌ಸೈಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶವನ್ನು ಪಾಕಿಸ್ತಾನ ಮತ್ತು ಚೀನಾದ ಭಾಗವೆಂದು ತಪ್ಪಾಗಿ ತೋರಿಸಲಾಗಿದೆ. ಈ ಬಗ್ಗೆ ಆರೋಗ್ಯ ಸಂಸ್ಥೆಯ ಗಮನಕ್ಕೆ ತರಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಾನು ‘WHO COVID-19’ ವೆಬ್​ಸೈಟ್​ ಅನ್ನು ಕ್ಲಿಕ್​ ಮಾಡಿದ್ದೆ. ಅದರಲ್ಲಿರುವ ವಿಶ್ವ ಭೂಪಟದಲ್ಲಿ ಭಾರತದ ಭಾಗವನ್ನು ಹತ್ತಿರದಿಂದ ನೋಡಿದಾಗ ಈ ಎಡವಟ್ಟು ಕಾಣಿಸಿದೆ. ಮಾತ್ರವಲ್ಲದೇ ಕರೊನಾ ಅಂಕಿ – ಅಂಶ ಬೇರೆ ಬೇರೆಯಾಗಿ ತೋರಿಸುತ್ತಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರ ಇದರ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಸೇನ್‌ ಪತ್ರದಲ್ಲಿ ತಿಳಿಸಿದ್ದಾರೆ.
ಈ ರೀತಿ ತಪ್ಪಾಗಿರುವುದು ಅಕ್ಷಮ್ಯ. ಇದು ಅಂತಾರಾಷ್ಟ್ರೀಯ ಸಮಸ್ಯೆಯಾಗಿದೆ. ಸರ್ಕಾರವು ಈ ವಿಚಾರದಲ್ಲಿ ಹೆಚ್ಚು ಜಾಗರೂಕತೆಯಿಂದ ಇರಬೇಕು. ಸಮಸ್ಯೆ ದೊಡ್ಡದಾಗುವ ಮೊದಲೇ ಕ್ರಮ ತೆಗೆದುಕೊಳ್ಳಬೇಕು. ಇಷ್ಟು ದೊಡ್ಡ ತಪ್ಪನ್ನು ಇಷ್ಟು ದಿನ ಹೇಗೆ ನಿರ್ಲಕ್ಷಿಸಲಾಯಿತು ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಬಿಗ್‌ಬಾಸ್‌-15 ಕುತೂಹಲಕ್ಕೆ ತೆರೆ: ‘ಶಮಿತಾ ಆಂಟಿ’ ವಿವಾದ ಸೃಷ್ಟಿಸಿದ್ದ ನಟಿ ತೇಜಸ್ವಿಗೆ ಒಲಿದ ಕಿರೀಟ

ಪ್ರಿಯಾಂಕಾ ಗಾಂಧಿಯನ್ನು ‘ಅಕ್ಕ’ ಎನ್ನುತ್ತಿದ್ದ ನಿದಾ ಖಾನ್‌ ಬಿಜೆಪಿಗೆ! ಕಾರಣ ಬಿಚ್ಚಿಟ್ಟ ತ್ರಿವಳಿ ತಲಾಖ್‌ ಸಂತ್ರಸ್ತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + eighteen =
Remember me
