ಮುಂಬೈ:ಕೆಲ ರಾಜಕಾರಣಿಗಳು ಸೇರಿದಂತೆ ಹಲವರ ನಿದ್ದೆಗೆಡಿಸಿರುವ, ಸತ್ಯವನ್ನು ಅರಗಿಸಿಕೊಳ್ಳಲಾಗದ ಹಲವರ ಕಣ್ಣನ್ನು ಕೆಂಪಾಗಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಭರ್ಜರಿ ಮುನ್ನಡೆಯತ್ತ ಸಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿ ತಯಾರಾದ ಈ ಸಿನಿಮಾ ಏಳೇ ದಿನಗಳಲ್ಲಿ ಬಾಕ್ಸ್​ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದೆ.
ಬಾಲಿವುಡ್​ ಸಿನಿಮಾಗಳ ತಂತ್ರಗಾರಿಕೆಯನ್ನೆಲ್ಲಾ ದಿ ಕಾಶ್ಮೀರ್ ಫೈಲ್ಸ್ ಮುರಿದು ಹಾಕಿದೆ. ಭಾರಿ ಬಜೆಟ್​ನಲ್ಲಿ, ವಿವಿಧ ತಂತ್ರಜ್ಞಾನವನ್ನು ಬಳಸಿ ಅಬ್ಬರಿಸಿದ್ದ ಅನೇಕ ಸ್ಟಾರ್​ ನಟರ ಚಿತ್ರಗಳ ದಾಖಲೆಯಲ್ಲೂ ಮೀರಿಸಿ ಚಿತ್ರ ಮುನ್ನುಗ್ಗುತ್ತಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ, ಅನುಪಮ್ ಖೇರ್ ಮತ್ತು ಮಿಥುನ್ ಚಕ್ರವರ್ತಿ ಅಭಿನಯದ ಈ ಚಿತ್ರವು ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಗಳಿಕೆಯ ವಿಷಯದಲ್ಲಿ ಎಲ್ಲರನ್ನೂ ಹಿಂದೆ ಹಾಕಿತ್ತು. ದೇಶಾದ್ಯಂತ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ಗಳಿಕೆಯನ್ನು ಸುನಾಮಿ ಎಂದೇ ಬಣ್ಣಿಸಲಾಗುತ್ತಿದೆ. ಏಕೆಂದರೆ ಯಾವುದೇ ಸಿನಿಮಾ ಮೊದಲು ಮೂರ್ನಾಲ್ಕು ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದರೂ ನಂತರ ಅದರ ಗಳಿಕೆ ಕಡಿಮೆಯಾಗುತ್ತಾ ಸಾಗುತ್ತದೆ. ಆದರೆ ಈ ಚಿತ್ರ ಹಾಗಲ್ಲ. ಮೊದಲ ದಿನ 3.55 ಕೋಟಿ ರೂಪಾಯಿ, ಎರಡನೇ ದಿನ 8.50 ಕೋಟಿ ರೂ, ಮೂರನೇ ದಿನ 15.10 ಕೋಟಿ ರೂ, ನಾಲ್ಕನೇ ದಿನ 15.05 ಕೋಟಿ ರೂ. ಗಳಿಕೆ ಆಗಿತ್ತು. ಇಷ್ಟಾದರೂ ಐದನೆ ದಿನ ಅದೆಲ್ಲವನ್ನೂ ಮೀರಿಸಿ 5ನೇ ದಿನ ಅತಿ ಹೆಚ್ಚು, ಅಂದರೆ 18 ಕೋಟಿ ರೂಪಾಯಿ ಕಲೆಕ್ಷನ್​ ಆಗಿದ್ದರೆ, ಆರನೇ ದಿನ 19 ಕೋಟಿ ರೂಪಾಯಿ ಗಳಿಸಿದೆ. ಇದೀಗ ಒಟ್ಟಾರೆ ಗಳಿಕೆ 100 ಕೋಟಿ ರೂಪಾಯಿ ಸಮೀಪಕ್ಕೆ ಬಂದಿದೆ.
ಇದೇ 11ರಂದು ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’ ಆರಂಭದಲ್ಲಿ 700 ಪರದೆಯ ಮೇಲೆ ಬಿಡುಗಡೆಯಾಯಿತು. ಆದರೆ ಟಿಕೆಟ್ ವಿಂಡೋದಲ್ಲಿ ನೆರೆದಿದ್ದ ಜನರನ್ನು ನೋಡಿ, ಈಗ ದೇಶಾದ್ಯಂತ 2000 ಕ್ಕೂ ಹೆಚ್ಚು ಪರದೆಗಳಲ್ಲಿ ತೋರಿಸಲಾಗುತ್ತಿದೆ. ಕರ್ನಾಟಕ, ಹರಿಯಾಣ ಸೇರಿ ಅನೇಕ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಹಲವಾರು ರಾಜ್ಯಗಳಲ್ಲಿ ನೌಕರರಿಗೆ ಚಿತ್ರ ವೀಕ್ಷಣೆಗೆ ರಜೆಯನ್ನೂ ಘೋಷಿಸಲಾಗಿತ್ತು. ಪ್ರಧಾನಿ ಮೋದಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಬಹಿರಂಗವಾಗಿ ಶಹಬ್ಬಾಸ್​ಗಿರಿ ಕೊಟ್ಟಿದ್ದಾರೆ.
‘ಕೇಂದ್ರ ಸರ್ಕಾರವು ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಆಕ್ರಮಣಕಾರಿಯಾಗಿ ಪ್ರಚಾರ ಮಾಡುತ್ತಿದೆ. ಕಾಶ್ಮೀರಿ ಪಂಡಿತರ ನೋವನ್ನು ತನ್ನ ತಪ್ಪು ಉದ್ದೇಶದಿಂದ ‘ಆಯುಧ’ವನ್ನಾಗಿ ಮಾಡುತ್ತಿದೆ’ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿಕೆ ಕೊಟ್ಟಿರುವುದು ಸತ್ಯ ಎಷ್ಟು ಕಹಿ ಎನ್ನುವುದನ್ನು ತೋರಿಸಿಕೊಡುತ್ತಿದೆ.
ಬಟ್ಟೆ ತೆಗೆಯದಿದ್ದರೂ, ಒಳ ಉಡುಪು ಇದ್ದಾಗ ದೌರ್ಜನ್ಯ ಎಸಗಿದರೂ ಅದು ಅತ್ಯಾಚಾರವೇ ಎಂದ ಹೈಕೋರ್ಟ್​

ಕರುಳ ಕುಡಿಯನ್ನೇ ಜೀವಂತ ಹೂತು ಹಾಕಿದ ಅಮ್ಮ! ಪವಾಡಸದೃಶವಾಗಿ ಬದುಕಿದ ಮುದ್ದು ಕಂದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eight =
Remember me
