ತಿರುವನಂತಪುರ:ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ತನ್ನನ್ನು ಬಂಧಿಸಿರುವ ಪೊಲೀಸ್ ಅಧಿಕಾರಿಗಳ ಕೈಕತ್ತರಿಸಿ, ಹತ್ಯೆ ಮಾಡುವ ಮಹಾಸಂಚನ್ನು ಕೇರಳದ ಪ್ರಸಿದ್ಧ ನಟ ರೂಪಿಸಿದ್ದ ಭಯಾನಕ ರಹಸ್ಯ ಬಯಲಾಗಿದೆ.
ನಟ ದಿಲೀಪ್‌ ವಿರುದ್ಧ ತನಿಖೆ ನಡೆಸುತ್ತಿರುವ ಅಧಿಕಾರಿಗೆ ಈ ರಹಸ್ಯ ಬಯಲಾಗಿದೆ. ಅಧಿಕಾರಿಯನ್ನು ಮುಗಿಸುವ ಸಂಬಂಧ ಆತ ಮಾಡಿರುವ ಆಡಿಯೋ ಕ್ಲಿಪ್ ಕೂಡ ರಿಲೀಸ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.
ಏನಿದು ಘಟನೆ?ದಿಲೀಪ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು ಮಾಡಿದ್ದರು. ಫೆಬ್ರವರಿ 2017 ರಲ್ಲಿ ಎರ್ನಾಕುಲಂನಲ್ಲಿ ನಡೆದ ಘಟನೆ ಇದಾಗಿದೆ. ನಟಿ ಶೂಟಿಂಗ್ ಮುಗಿಸಿಕೊಂಡು ಹೋಗುತ್ತಿರಬೇಕಾದರೆ ಆಕೆಯನ್ನು ಅಪಹರಿಸಲಾಗಿದೆ. ನಂತರ ಚಲಿಸುತ್ತಿದ್ದ ವಾಹನದಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಅದು ಅಲ್ಲದೇ ಈ ದೃಶ್ಯಗಳನ್ನು ರೆಕಾರ್ಡ್ ಸಹ ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಉಪ ಅಧೀಕ್ಷಕ ಬೈಜು ಪೌಲೋಸ್, ಈತನ ವಿರುದ್ಧ ಹಲವು ಮಾಹಿತಿ ಕಲೆ ಹಾಕಿದ್ದು, ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದರು. ನಂತರ ಘಟನೆಗೆ ಸಂಬಂಧಿಸಿದಂತೆ ದಿಲೀಪ್‌ನನ್ನು ಬಂಧಿಸಲಾಗಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ದಿಲೀಪ್‍ ತನ್ನ ಸೋದರ ಮಾವ ಸೂರಜ್ ಜತೆ ಸೇರಿ ಅಧಿಕಾರಿಯ ಮುಗಿಸುವ ಬಗ್ಗೆ ಫೋನ್ ನಲ್ಲಿ ಚರ್ಚೆ ಮಾಡಿದ್ದಾರೆ. ಈಗ ಆ ಆಡಿಯೋ ಕ್ಲಿಪ್ ವೈರಲ್‌ ಆಗಿದೆ. ಈ ಫೋನ್‌ನಲ್ಲಿರುವ ಧ್ವನಿ ದಿಲೀಪ್‌ ಮತ್ತು ಸೂರಜ್‌ದ್ದೇ ಎಂದು ಬಹಿರಂಗಗೊಂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ತನಿಖಾ ತಂಡವನ್ನು ರಚಿಸಿದೆ. ಪ್ರಸ್ತುತ ದಿಲೀಪ್, ಸೂರಜ್, ದಿಲೀಪ್ ಅವರ ಸಹೋದರ ಅನೂಪ್, ಬಾಲಚಂದ್ರಕುಮಾರ್ ‘ವಿಐಪಿ’ ಎಂದು ಸಂಬೋಧಿಸಿದ ವ್ಯಕ್ತಿ ಮತ್ತು ಇತರ ಇಬ್ಬರು ಸೇರಿದಂತೆ ಆರು ಜನರ ವಿರುದ್ಧ ಹೊಸ ಎಫ್‌ಐಆರ್‌ನಲ್ಲಿ ಪ್ರಕರಣ ದಾಖಲಾಗಿದೆ.
‘ನನ್ನ ಮಗಳಿನ್ನೂ ಚಿಕ್ಕೋಳು, ಏನೂ ಗೊತ್ತಿಲ್ಲ… ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಓಟಿಪಿ ಕೊಟ್ಟಿದ್ದೇ ಮಿಸ್ಟೆಕ್‌’ ಎಂದ ಶಾಸಕ

ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನಟ ಯಶ್‌- ಅಭಿಮಾನಿಗಳಿಂದಲೇ ಟ್ರೋಲ್‌, ಕಮೆಂಟ್‌ಗಳ ಮೂಲಕ ಆಕ್ರೋಶ

‘ಅವ್ನು ಕಿಸ್‌ ಕೊಟ್ಟಿರೋ ದೃಶ್ಯ ಪ್ರಸಾರ ಮಾಡ್ಬೇಡಿ ಪ್ಲೀಸ್‌’ ಎಂದು ಹಣಕ್ಕಾಗಿ ಎಲ್ಲಾ ಅರ್ಪಿಸಿಕೊಂಡ ನಟಿಯ ಮನವಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + sixteen =
Remember me
