ತಿರುವನಂತಪುರ (ಕೇರಳ):ಸುಶಿಕ್ಷಿತರ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಕೇರಳ ಇದೀಗ ಮತ್ತೊಂದು ದಾಖಲೆ ಬರೆದಿದೆ. ತನ್ನದೇ ಆದ ಸ್ವಂತ ಇಂಟರ್​ನೆಟ್ ಹೊಂದಿದೆ. ಈ ಮೂಲಕ ಸ್ವಂತ ಇಂಟರ್​ನೆಟ್​ ಹೊಂದಿರುವ ದೇಶದ ಮೊದಲ ಮತ್ತು ಏಕೈಕ ರಾಜ್ಯ ಎಂಬ ಖ್ಯಾತಿಯನ್ನು ಗಳಿಸಿದೆ.
ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ. ನಮ್ಮ ರಾಜ್ಯದ ಪ್ರತಿಯೊಬ್ಬರಿಗೂ ಇಂಟರ್​ನೆಟ್​ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಈ ಹಿನ್ನೆಲೆಯಲ್ಲಿ ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್‌ನ ಐಟಿ ಮೂಲಸೌಕರ್ಯ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಗೆ ದೂರಸಂಪರ್ಕ ಇಲಾಖೆಯು ಇಂಟರ್​ನೆಟ್​ ಸೇವಾ ಪೂರೈಕೆದಾರ (ಐಎಸ್​ಪಿ) ಪರವಾನಗಿಯನ್ನು ನೀಡಿದೆ ಎಂದಿದ್ದಾರೆ.
ಕೇರಳದ ಹಿಂದಿನ ಸರ್ಕಾರವು 2019 ರಲ್ಲಿ ಇಂಟರ್ನೆಟ್ ಸಂಪರ್ಕವನ್ನು ಮೂಲಭೂತ ಹಕ್ಕು ಎಂದು ಘೋಷಣೆ ಮಾಡಿತ್ತು. ಜೊತೆಗೆ ಕೇರಳ ರಾಜ್ಯದಾದ್ಯಂತ ಇಂಟರ್​ನೆಟ್​ ಸಂಪರ್ಕವನ್ನು ಸರಿಯಾಗಿ ಕಲ್ಪಿಸಲು 1,548 ಕೋಟಿ ರೂಪಾಯಿ ಮೊತ್ತದ ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ (KFON) ಎಂಬ ಯೋಜನೆಯನ್ನು ಪ್ರಾರಂಭ ಮಾಡಿತ್ತು. ಈಗ ಆ ಯೋಜನೆಗೆ ಚಾಲನೆ ಸಿಕ್ಕಿದೆ.
ಕೆ-ಫೋನ್ ಅಥವಾ ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಲಿಮಿಟೆಡ್ ಡಿಜಿಟಲ್ ಕೇರಳ ಸರ್ಕಾರದ ಹೊಸ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸರ್ಕಾರದ ಪ್ರಕಾರ ಈ ಯೋಜನೆಯಿಂದ ರಚಿಸಲಾದ ಮೂಲಸೌಕರ್ಯವು ಕೇರಳ ರಾಜ್ಯದ ಪ್ರಸ್ತುತ ಟೆಲಿಕಾಂ ಪರಿಸರ ವ್ಯವಸ್ಥೆಗೆ ಪೂರಕವಾಗಿದೆ ಎಂದು ನಿರೀಕ್ಷಿಸಲಾಗಿದೆ.
ಎಲ್ಲಾ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮಾತ್ರವಲ್ಲದೇ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉಚಿತ ಇಂಟರ್​ನೆಟ್​ ಸೌಲಭ್ಯ ಒದಗಿಸುವ ಗುರಿ ಸರ್ಕಾರಕ್ಕೆ ಇದೆ.(ಏಜೆನ್ಸೀಸ್​)
ಹೂವಿನ ಹಾರ ನೋಡಿ ಸಿದ್ದು ಗರಂ ಗರಂ: ಬೇಡ್ರಪ್ಪೋ ಬೇಡ… ನನ್​ ಬಳಿ ತರ್ಬೇಡಿ ಎಂದ ಮಾಜಿ ಸಿಎಂ

ಕಾಂಗ್ರೆಸ್​ ಮುಖಂಡನ ಕೊಲೆ ಆರೋಪಿ ಮೇಲೆ ಫೈರಿಂಗ್​: ಲೇಡಿ ಪಿಎಸ್ಐ ಮೇಲೆ ಹಲ್ಲೆ ಮಾಡಿ ಎಸ್ಕೇಪ್​ ಆಗ್ತಿದ್ದ ವೇಳೆ ಘಟನೆ

ಮಧ್ಯರಾತ್ರಿ ಮಾಡಿದ ತಪ್ಪನ್ನು ಬೆಳಗಾದ ಮೇಲೆ ತಿದ್ದಿಕೊಂಡ ಸರ್ಕಾರ: ವಾಪಸ್ ಪಡೆದ ಆದೇಶಕ್ಕೆ ಮತ್ತೊಮ್ಮೆ ತಿದ್ದುಪಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 18 =
Remember me
